'ಕಟ್ಟುತೇವ ನಾವು ಕಟ್ಟುತೇವ, ನಾವು ಕಟ್ಟೇ ಕಟ್ಟುತೇವ.... ಒಡೆದ ಮನಸುಗಳ ಕಂಡ ಕನಸುಗಳ ಕಟ್ಟೇ ಕಟ್ಟುತೇವ..... ನಾವು ಕನಸ ಕಟ್ಟತೇವ, ನಾವು ಮನಸ ಕಟ್ಟತೇವ....'. ಬಹು ಖ್ಯಾತಿ ಹೊಂದಿದ ಈ ಕ್ರಾಂತಿ ಗೀತೆ ಮೊಳಗಿಸಿದವರು ಕವಿ, ನಾಟಕಕಾರ ಮತ್ತು ಸಂಘಟಕರಾದ ಹಾವೇರಿಯ ಸತೀಶ ಕುಲಕಣರ್ಿಯವರು. ಹಾವೇರಿಯಲ್ಲಿ ಏಲಕ್ಕಿಯ ಕಂಪಿನೊಂದಿಗೆ ಸಾಹಿತ್ಯ ಹಾಗೂ ಕಲೆಗಳ ಕಂಪನ್ನು ಬೆರೆಸಿ ಪ್ರಸಿದ್ಧ ಪಡೆದವರು.
ಮೂಲತಃ ಗುಡಗೆರಿಯವರಾದ ಸತೀಶ ಕುಲಕಣರ್ಿಯವರು ಜುಲೈ 13, 1951ರಂದು ಧಾರವಾಡದಲ್ಲಿ ಜನಿಸಿದರು. ಅವರ ತಂದೆ ನೀಲಕಂಠರಾವ್ ಮತ್ತು ಲೀಲಾಬಾಯಿ. ಸತೀಶರವರು ಪ್ರಾಥಮಿಕ ಶಿಕ್ಷಣವನ್ನು ಕಲಘಟಗಿಯ ಸಕರ್ಾರಿ ಕನ್ನಡ ಪ್ರಾಥಮಿಕ ಶಾಲೆಯಲ್ಲಿ, ಪ್ರೌಢ ಶಿಕ್ಷಣವನ್ನು ಸವಣೂರದ ಮಜೀದ್ ಪ್ರೌಢಶಾಲೆಯಲ್ಲಿ ಪೂರೈಸಿದರು. ನಂತರ ಹಾವೇರಿಯ ಜಿ.ಎಚ್ ಕಾಲೇಜುದಲ್ಲಿ ಪಿ.ಯು.ಸಿ. ಯನ್ನು ವಿಜ್ಞಾನದೊಂದಿಗೆ ತೇರ್ಗಡೆಯಾಗಿ, ಹುಬ್ಬಳ್ಳಿಯ ಪಿ.ಸಿ.ಜಾಬಿನ್ ವಿಜ್ಞಾನ ಕಾಲೇಜುದಲ್ಲಿ ಬಿ.ಎಸ್ಸಿ ಪದವಿಯನ್ನು ಪಡೆದರು. ಸಾಹಿತ್ಯದಲ್ಲಿಯ ಅಪಾರ ಆಸಕ್ತಿಯಿಂದ ಧಾರವಾಡ ಕನರ್ಾಟಕ ವಿಶ್ವವಿದ್ಯಾಲಯದಲ್ಲಿ ಎಂ.ಎ ಸ್ನಾತಕೋತ್ತರ ಪದವಿಯನ್ನು ಕನ್ನಡ ವಿಷಯದಲ್ಲಿ ಬಾಹ್ಯ ವಿದ್ಯಾಥರ್ಿಯಾಗಿ ಪೂರೈಸಿದರು.
ಸತೀಶರವರು ಹುಬ್ಬಳ್ಳಿಯ ವಿದ್ಯುತ್ ಸರಬರಾಜು ಕಂಪನಿಯಲ್ಲಿ ಸಹಾಯಕರಾಗಿ ವೃತ್ತಿಯನ್ನು ಪ್ರಾರಂಭಿಸಿದರು. ಅವರು ಉತ್ತರ ಕನರ್ಾಟಕದ ವಿವಿಧ ಸ್ಥಳಗಳಲ್ಲಿ ಪ್ರಾಮಾಣಿಕವಾಗಿ ಸೇವೆಯನ್ನು ಸಲ್ಲಿಸುತ್ತ, 2011ರ ಜುಲೈ 31ರಂದು ಹಾವೇರಿಯ ಹೆಸ್ಕಾಂನಲ್ಲಿ ನಿವೃತ್ತಿ ಹೊಂದಿದರು. ವೃತ್ತಿಯನ್ನಾಗಿ ಕೆ.ಇ.ಬಿ.ಯನ್ನು ಆಯ್ದುಕೊಂಡರೂ ಪ್ರವೃತ್ತಿಯನ್ನಾಗಿ ಆಯ್ದುಕೊಂಡಿದ್ದು ಸಾಹಿತ್ಯ ಕ್ಷೇತ್ರವನ್ನು ಅಂದಾಗ ಅಚ್ಚರಿಯಾಗುತ್ತದೆ.
ಸತೀಶರವರು ಪಿ.ಸಿ.ಜಾಬಿನ್ ಕಾಲೇಜಿನಲ್ಲಿ ಓದುತ್ತಿರುವಾಗಲೇ ಗೆಳೆಯ ಡಾ.ಸರಜೂ ಕಾಟ್ಕರ್ ಜೊತೆ ಸೇರಿ 'ಬೆಂಕಿ ಚೆಂಡು' (1973) ಕವನ ಸಂಕಲನವನ್ನು ಹೊರ ತಂದಿದ್ದರು. ವಿದ್ಯಾಥರ್ಿಯಾಗಿದ್ದಾಗಲೇ ಪ್ರಕಟಿಸಿದ ಈ ಸಂಕಲನವನ್ನು ಅವರು ತಮ್ಮ ಕಾಲೇಜಿಗೆ ಅಪರ್ಿಸಿದ್ದರು. ಅಲ್ಲದೇ ಮರುವರ್ಷವೇ ಕೆ.ಪದ್ಮರಾಜ, ಸರಜೂ ಕಾಟ್ಕರ್ ಜತೆಗೂಡಿ 'ನೆಲದ ನೆರಳು' ಎಂಬ ಕವನ ಸಂಕಲನವನ್ನು ಪ್ರಕಟಿಸಿದ್ದರು. ಸತೀಶರವರು ಪದವಿ ಮುಗಿಸುವುದರೊಳಗೆ ಎರಡು ಕವನಗಳನ್ನು ಪ್ರಕಟಿಸಿರುವುದು ಅವರಲ್ಲಿಯ ಕಾವ್ಯೋತ್ಸಾಹ ಗುರುತಿಸಬಹುದಾಗಿದೆ. ಹೀಗೆ ಸಂಯುಕ್ತ ಸಂಕಲನದ ಮೂಲಕ ಕವಿಯಾಗಿದ್ದ ಸತೀಶರವರು 1980ರಲ್ಲಿ ಸ್ವತಂತ್ರವಾಗಿ 'ಒಡಲಾಳದ ಕಿಚ್ಚು' ಎಂಬ ಕವನ ಸಂಕಲನವನ್ನು ಪ್ರಕಟಿಸಿ ನಾಡಿನ ಸಾಹಿತ್ಯಾಸಕ್ತರ ಗಮನ ಸೆಳೆದರು. ತದನಂತರ 1994ರಲ್ಲಿ 'ವಿಷಾಧಯೋಗ', 2001ರಲ್ಲಿ ಗಾಂಧಿ ಗಿಡ ಹಾಗೂ 2006ರಲ್ಲಿ ಕಂಪನಿ ಸವಾಲ್, 2013ರಲ್ಲಿ 'ಸಮಯಾಂತರ' ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ.
ಅಲ್ಲದೇ ಸತೀಶರವರು ಬದುಕಿನ ಅನಿವಾರ್ಯ ಅಂಶಗಳನ್ನು ವಿಷಯವನ್ನಾಗಿಟ್ಟುಕೊಂಡು ನಾಟಕಗಳನ್ನು ರಚಿಸಿ ತಮ್ಮ ತಂಡದ ಮೂಲಕ ನಾಡಿನ ವಿವಿಧ ಕಡೆಗಳಿಗೆ ಪ್ರದಶರ್ಿಸಿ, ಸಮಾಜದ ಕಣ್ಣು ತೆರೆಸುವ ಪ್ರಯತ್ನವನ್ನು ಮಾಡಿರುವ ಕಾರ್ಯ ನಿಜಕ್ಕೂ ಮೆಚ್ಚುವಂತಹದು. ಅವರು 'ಚಿನ್ನ' ಮತ್ತು 'ನಾಯಿ ಭಮರ್ಾ ಹಾಗೂ 'ಇತರ ನಾಟಕಗಳು' ಎಂಬ ಹತ್ತು ನಾಟಕಗಳನ್ನು ರಚಿಸಿ ರಂಗಲೋಕಕ್ಕೆ ಅಪರ್ಿಸಿದ್ದಾರೆ. ಅವರು 'ಬರಗೂರು ರಾಮಚಂದ್ರಪ್ಪ-ಬಂಡಾಯದ ಗಟ್ಟಿದ್ವನಿ', 'ನೆಲದ ನಕ್ಷತ್ರಗಳು, 'ಓದೊಳಗಿನ ಓದು' ಹಾವೇರಿಯ ತಾಲೂಕ ದರ್ಶನ ಮುಂತಾದ ಕೃತಿಗಳನ್ನು ರಚಿಸಿ ಕನ್ನಡ ಸಾಹಿತ್ಯ ಲೋಕದಲ್ಲಿ ಜನಮಾನಸರಾಗಿದ್ದಾರೆ. ಸತೀಶರವರು ಕೆ.ಇ.ಬಿ.ಯಲ್ಲಿಯ ವೃತ್ತಿಯನ್ನು ತಮ್ಮ ಕವಿತೆಯ ಹಾಗೆ ಮನಸ್ಸಿಗೆ ಹಚ್ಚಿಕೊಂಂಡಿರುವುದು 'ಲೈನ್ ಮ್ಯಾನ್ ಮಡಿವಾಳರ ಭೀಮಪ್ಪನಿಗೆ' ಹಾಗೂ 'ಆ ನನ್ನ ಕೆ.ಇ.ಬಿ. ಎಂಬ ಎರಡು ಅಪರೂಪದ ಕವನಗಳಿಂದ ಪ್ರಕಟಗೊಳ್ಳುತ್ತದೆ. ಒಂದು ಶೋಕ ಗೀತೆಯಾದರೆ ಮತ್ತೊಂದು ಧನ್ಯತೆಯ ಗೀತೆಗಳಾಗಿ ಓದುಗರ ಮನಸ್ಸನ್ನು ಕಲಕುತ್ತವೆ. ಒಟ್ಟಾರೇ ಸತೀಶರವರ ಕಾವ್ಯಗಳಲ್ಲಿ ನವ್ಯದ ಕಲಾತ್ಮಕತೆಯನ್ನು ನವೋದಯದವರ ಮಾನವೀಯತೆಯನ್ನು ಮತ್ತು ದಲಿತ-ಬಂಡಾಯದವರ ಆಶಯಗಳನ್ನು ಹಿಡಿದಿಟ್ಟುಕ್ಕೊಳ್ಳುವಲ್ಲಿ ಪ್ರಯತ್ನ ಮಾಡಿರುವುದನ್ನು ಕಾಣಬಹುದು. ಅವರು ರಚಿಸಿದ 'ಕಟ್ಟತೇವ ನಾವು' ಎಂಬ ಕವನವು ಅನೇಕ ಭಾಷೆಗಳಿಗೆ ಭಾಷಾಂತರಗೊಂಡಿದೆಯಲ್ಲದೇ 'ಇಂಗಳೆ ಮಾರ್ಗ ಚಲನಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ. ಸತೀಶರವರ ಒಟ್ಟು ಕಾವ್ಯದ ಆಶಯವೇ ಕಟ್ಟುವದರ ಕಡೆಗೆ ಇದೆ. ವಿನಾಶವನ್ನು, ವಿಧ್ವಂಸಕತೆಯನ್ನು ಸತೀಶರ ಕಾವ್ಯ ಸದಾ ವಿರೋಧಿಸುತ್ತಲೇ ಬಂದಿದೆ. ಸತೀಶರವರು ಯಾವುದೇ ರಂಗ ಶಾಲೆಯಲ್ಲಿ ಸಾಂಪ್ರದಾಯಿಕ ಶಿಕ್ಷಣ ಪಡೆಯದೆ, ತಮ್ಮ ಪ್ರತಿಭೆ, ಪರಿಶ್ರಮದಿಂದಲೇ ರಂಗಭೂಮಿಯಲ್ಲಿ ಅಗಾಧತೆಯನ್ನು ಸೃಷ್ಟಿಸಿದವರು. ಅವರು ತಾವೇ ಅಭಿನಯಿಸಿ, ನಿದರ್ೇಶಿಸಿ ರಂಗಕಲೆಗೆ ಅಪರ್ಿಸಿಕೊಂಡಿರುವುದು ವಿಶೇಷ. ತೆರೆಗಳು, ಜೋಕುಮಾರ ಸ್ವಾಮಿ, ಕುಂಟಾ ಕುಂಟಾ ಕುರವತ್ತಿ, ಗಾಂಧೀ ಹಚ್ಚಿದ ಗಿಡ, ದೊಡ್ಡ ಮನುಷ್ಯ, ಜೀವನ ತರಂಗ, ಮುಸುಕಿನ ಮೂತರ್ಿಗಳು, ಕಂಪನಿ ಸವಾಲ್ ಮುಂತಾದ 35 ನಾಟಕಗಳಿಂದ ಸಮಾಜವನ್ನು ಉತ್ತಮ ಚಿಂತನೆಗಳತ್ತ ಹೊರಳಿಸುವ ಪ್ರಯತ್ನದಲ್ಲಿ ಯಶಸ್ಸನ್ನು ಕಂಡಿದ್ದಾರೆ. ಅಲ್ಲದೇ ಬೆಂಗಳೂರು ದೂರದರ್ಶನದ 'ಭಾಗ್ಯಶ್ರೀ' ಮತ್ತು 'ಸ್ವಾತಂತ್ರ್ಯ ಸಂಗ್ರಾಮದ ಪುಟಗಳು', ಧಾರವಾಹಿಗಳಲ್ಲಿ ಹಾಗೂ ವೈಶಾಲಿ ಕಾಸರವಳ್ಳಿ ನಿದರ್ೇಶನದ 'ಮೂಡಲ ಮನೆ' ಧಾರವಾಹಿಯಲ್ಲಿ ಅಭಿನಯಿಸಿದ್ದಾರೆ. 2013ರಲ್ಲಿ ಬಿಡುಗಡೆಯಾದ ಚಲನಚಿತ್ರ 'ಇಂಗಳೆ ಮಾರ್ಗ ದಲ್ಲಿ ಅಭಿನಯದೊಂದಿಗೆ ಗೀತರಚನೆ, ಸಂಭಾಷಣೆ ಮಾಡಿ, ಅವರೇ ರಚಿಸಿದ 'ಕಟ್ಟತೇವ ನಾವು ಕಟ್ಟತೇವ' ಗೀತೆಯನ್ನು ಹಾಡಿದ್ದು ವಿಶೇಷವಾಗಿದೆ. ಸಾಹಿತ್ಯಿಕ ದೃಷ್ಟಿಯಿಂದ ತುಂಬಾ ಉತ್ಸಾಹದಾಯಕ ಪರಿಸರ ಹೊಂದಿರುವ ಹಾವೇರಿಯಲ್ಲಿ ದೀರ್ಘ ಕಾಲದಿಂದ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸುವ ಮೂಲಕ ಹಾವೇರಿಗೆ ತನ್ನದೇ ಆದ ಸ್ಥಾನ ಕೊಡಿಸುವಲ್ಲಿ ಅವಿರತವಾಗಿ ಶ್ರಮಿಸಿದವರಲ್ಲಿ ಸತೀಶ ಕುಲಕಣರ್ಿಯವರು ಪ್ರಮುಖರಾಗಿದ್ದಾರೆ. ಖ್ಯಾತ ವಿಮರ್ಶಕ ಚಂದ್ರಶೇಖರ ನಂಗಲಿಯವರು 'ಲೋಕವು ಕಾಲಿಗೆ ಹಾಕಿಕೊಂಡು ತುಳಿದಾಡುವ ಅಲಕ್ಷೀತ ಜೀವ ಮತ್ತು ಜೀವನಗಳನ್ನು ತಮ್ಮ ಹೃದಯಕ್ಕೆ ಒತ್ತಿಕೊಳ್ಳುವ ವಿಶಾಲ ದೃಷ್ಟಿಯ ಕವಿ ಹಾವೇರಿಯ ಹೊಕ್ಕುಳಲ್ಲಿ ಅರಳಿದ ಹೂ' ಎಂದು ಸತೀಶವರನ್ನು ಬಣ್ಣಿಸಿದ್ದಾರೆ. ಅವರು ನಡೆದು ಬಂದ ದೂರದ ಹಾದಿಯಲ್ಲಿ ಸಾವಿನ ಹೆಸರಿನಲ್ಲಿ ಕಳೆದುಕೊಂಡಿದ್ದಾರೆ. "ಅಪ್ಪ ನೀಲಕಂಠರಾವ, ತಾಯಿ ಲೀಲಾವತಿ, ಪತ್ನಿ ಲಲಿತಾ ಇವರುಗಳನ್ನು ಮರೆಯಲು ಸಾಧ್ಯವಿಲ್ಲ. ಇವರನ್ನು ನೆನೆದಾಗ ಕಗ್ಗತ್ತಲಿನ ನಡುವೆ ನಡೆದು ಹೋದಂತೆ ಈಗಲೂ ಭಾಸವಾಗುತ್ತದೆ. ಅವರ ಕಾಣದ ಕೃಪೆ ನನ್ನ ಮೇಲಿದೆ" ಎಂದು ಸ್ಮರಿಸುಕೊಳ್ಳುತ್ತಾರೆ. "ಕಾವ್ಯ-ನಾಟಕ-ಸಂಘಟನೆ ಈ ಮೂರು ನನ್ನೊಳಗೆ ಹೊಕ್ಕು ಬಿಟ್ಟಿವೆ. ಇವುಗಳಲ್ಲಿ ಒಂದಿಲ್ಲೊಂದು ತಿರುಗಣಿ ಮಡುವಿಗೆ ಬಿದ್ದಾಗ ಎಲ್ಲ ಮರೆತು ಈಜಾಡಿದ್ದೇನೆ" ಎಂಬ ಸತೀಶ ಕುಲಕಣರ್ಿಯವರ ಮಾತು ನಿಜಕ್ಕೂ ಪ್ರಾಮಾಣಿಕತೆಯಿಂದ ಕೂಡಿದೆ. ಕಳೆದ ಐದು ದಶಕಗಳಿಂದ ಗೆಳೆಯ ಸರಜೂ ಕಾಟ್ಕರ್, ಲೋಹಿಯಾ ಪ್ರಕಾಶನದ ಚನ್ನಬಸವಣ್ಣ, ಸಹೋದರಿ ಶಾರದಾ ದೇಸಾಯಿ, ಆನಂದ ದೇಸಾಯಿ, ಪತ್ನಿ ಕಾಂಚನಾ ಹಾಗೂ ಮಕ್ಕಳಾದ ನವೀನ, ಕಾವ್ಯಾ ಮತ್ತು ಮಿತ್ರ ಮಂಡಳಿಯ ಬೆಂಬಲಬನ್ನು ಸದಾ ನೆನಪಿಸಿಕೊಳ್ಳುತ್ತಾರೆ. ಸತೀಶ ಕುಲಕಣರ್ಿಯವರ ಬಾಳಸಂಗಾತಿಯಾಗಿ ಕಾಂಚನಾರವರು 1986ರಿಂದ ಹಾವೇರಿಯಲ್ಲಿ ನೆಲೆಸಿರುವರು. ಕನ್ನಡ ಮತ್ತು ಮರಾಠಿ ಭಾಷೆಗಳ ಬಲ್ಲ ಕಾಂಚನಾರವರು ಅರುಣ ಕಾಳೆಯವರ ಮರಾಠಿ ಕವಿತೆಗಳನ್ನು ಸತೀಶರವರ ಜೊತೆಗೂಡಿ ಕನ್ನಡಕ್ಕೆ ಅನುವಾದಿಸಿದ್ದಾರೆ.
ಸತೀಶರವರು ಕನರ್ಾಟಕ ಸಾಹಿತ್ಯ ಅಕಾಡೆಮಿ ಸದಸ್ಯರಾಗಿ (2000-2004), ಕನರ್ಾಟಕ ನಾಟಕ ಅಕಾಡೆಮಿಯ ಸಂಚಾಲಕರಾಗಿ (2007-2010), ಕನ್ನಡಾಭಿವೃದ್ಧಿ ಪ್ರಾಧಿಕಾರದ ಕನ್ನಡ ಜಾಗೃತಿ ಸಮಿತಿಯ ಸದಸ್ಯರಾಗಿ (1990-2004), ಹಾವನೂರು ಪ್ರತಿಷ್ಠಾನ, ವಾರಂಬಳ್ಳಿ ಪ್ರತಿಷ್ಠಾನ, ಅಲ್ಲದೇ ಡಾ.ವಿ.ಕೃ.ಗೋಕಾಕ ರಾಷ್ಟ್ರೀಯ ಸ್ಮಾರಕ ಟ್ರಸ್ಟ್, ಮೈಲಾರ ಮಹಾದೇವ ಟ್ರಸ್ಟ್ ಹಾಗೂ ಬೆಟಗೇರಿ ಕೃಷ್ಣಶರ್ಮ ಟ್ರಸ್ಟ್ನ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ನೂತನ ಕಿರಿಯ ಹಿರಿಯ ಸಾಹಿತಿಗಳಿಗೆ ಹಾಗೂ ಕಲಾವಿದರಿಗೆ ಪ್ರೋತ್ಸಾಹವನ್ನು ತುಂಬುತ್ತ ಬೆನ್ನೆಲುಬಾಗಿ ನಿಂತಿದ್ದಾರೆ. ಅವರ 69ರ ವಯೋಮಾನದಲ್ಲಿ ಚೈತನ್ಯ ಕಂಡಾಗ ಎಂಥವರಲ್ಲಿಯೂ ಉತ್ಸಾಹ ತುಂಬುತ್ತದೆಯಲ್ಲದೇ ಅವರೊಂದಿಗೆ ಕೆಲಸ ಮಡಬೇಕೆಂಬ ಹುಮ್ಮಸ್ಸು ಮೂಡುತ್ತದೆ. ಸರಳ ವ್ಯಕ್ತಿತ್ವವನ್ನು ಹೊಂದಿದ ಅವರು ತಮಗೆ ದೊರೆತ ಗೌರವವನ್ನು ತಾವೊಬ್ಬರೆ ಅನುಭವಿಸದೇ ಸಮೂಹಕ್ಕೆ ಸಲ್ಲಿಸುವ ಗುಣವೇ ಅವರನ್ನು ಇಷ್ಟು ದೊಡ್ಡವರನ್ನಾಗಿ ಬೆಳೆಸಿದೆ. ಸತೀಶ ಕುಲಕಣರ್ಿಯವರು ಸಲ್ಲಿಸಿದ ಸಾಹಿತ್ಯ ಮತ್ತು ಸಾಂಸ್ಕೃತಿಕ ಸೇವೆಗೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಅರಸಿಕೊಂಡು ಬಂದಿವೆ. ಕನ್ನಡ ಸಂಘದ ರಾಜ್ಯೋತ್ಸವ ಪ್ರಶಸ್ತಿ, ಧಾರವಾಡ ವಿದ್ಯಾವರ್ಧಕ ಸಂಘದ ಪ್ರಶಸ್ತಿ, ಡಾ.ಡಿ.ಎಸ್.ಕಕರ್ಿ ಕಾವ್ಯ ಪ್ರಶಸ್ತಿ, ಶ್ರೇಷ್ಠ ನಟ, ನಿದರ್ೇಶಕರ ಪ್ರಶಸ್ತಿ, ಜಾನಪದ ವಿಶ್ವವಿದ್ಯಾಲಯ ರಾಜೋತ್ಸವ ಪ್ರಶಸ್ತಿ, ಸಾಹಿತ್ಯ ಅಕಾಡೆಮಿಯ ಸಾಹಿತ್ಯ ಶ್ರೀ ಪ್ರಶಸ್ತಿ, ಮುಂತಾದ ಸಂಘ-ಸಂಸ್ಥೆಗಳ ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. ಅವರು ಇತ್ತೀಚಿಗೆ ಜರುಗಿದ ಹಾವೇರಿ ಜಿಲ್ಲಾ 10ನೆಯ ಸಾಹಿತ್ಯ ಸಮ್ಮೇಳನದ ಸವರ್ಾಧ್ಯಕ್ಷರಾಗಿ ಕಾರ್ಯನಿರ್ವಹಿಸಿರುವದು ಸಂತಸದ ಸಂಗತಿ. ಸತೀಶರವರು ರಚಿಸಿದ ಕವಿತೆಗಳು ನಾಡಿನ ವಿವಿಧ ವಿಶ್ವವಿದ್ಯಾಲಯಗಳು ಪಠ್ಯಪುಸ್ತಕಗಳಲ್ಲಿ ಅಳವಡಿಸಿಕೊಂಡಿರುವದು ವಿಶೇಷವಾಗಿದೆ. ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಬಿ.ಎ. 2ನೆಯ ಸೆಮಿಸ್ಟರ್ನಲ್ಲಿ 'ಗಾಂಧಿ ಗಿಡ' ಕವಿತೆ, ಧಾರವಾಡದ ಕನರ್ಾಟಕ ವಿಶ್ವವಿದ್ಯಾಲಯದ ಬಿ.ಎ. 5ನೆಯ ಸೆಮಿಸ್ಟರ್ದಲ್ಲಿ 'ಕಟ್ಟತ್ತೇವ ನಾವು ಕಟ್ಟತ್ತೇವ' ಕವಿತೆ, ಕಲಬುಗರ್ಿ ವಿಶ್ವವಿದ್ಯಾಲಯದ ಎಂ.ಎ. ಕನ್ನಡ ಪಠ್ಯದಲ್ಲಿ 6 ಕವಿತೆಗಳು ಹಾಗೂ ಮಂಗಳೂರು ವಿಶ್ವವಿದ್ಯಾಲಯದ ಎಂ.ಎ. ಕನ್ನಡ ಪಠ್ಯದಲ್ಲಿ 'ಲೈನ್ಮನ್ ಮಡಿವಾಳ ಭೀಮಪ್ಪ ಕವಿತೆಗಳನ್ನು ಯುವ ಸಮೂಹ ಅಧ್ಯಯನ ಕೈಗೊಂಡಿರುವದು ಕಾವ್ಯದ ಮೂಲಕ ಸಮಾಜಪರವಾದ ಕಾಳಜಿಯನ್ನು ಪ್ರತಿಬಿಂಬಿಸುತ್ತದೆ. ರಂಗಭೂಮಿ ಮತ್ತು ಕಾವ್ಯವನ್ನು ಸಮ ಸಮನಾಗಿ ತೂಗಿಸಿಕೊಂಡು, ಸಿದ್ದಾಂತ ಮತ್ತು ಸಂಸ್ಕೃತಿಯ ಉಳಿವಿಗಾಗಿ ಹಲವಾರು ಹೋರಾಟಗಳನ್ನು ಮಾಡಿಕೊಂಡು ಬಂದಿರುವ ಕ್ರಿಯಾಶೀಲ ವ್ಯಕ್ತಿತ್ವ ಸತೀಶ ಕುಲಕಣರ್ಿಯವರದು. ಅವರು ಸಾಹಿತ್ಯಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ಕ್ಷೇತ್ರಕ್ಕೆ ಇನ್ನಷ್ಟು ಸೇವೆ ಸಲ್ಲಿಸುವಂತಾಗಲಿ ಎಂದು ಮನಃಪೂರ್ವಕವಾಗಿ ಆಶಿಸುತ್ತೇನೆ.