ನವದೆಹಲಿ, ಅ 16: ತೆಲುಗು ಚಿತ್ರರಂಗದ ಜನಪ್ರಿಯ ನಾಯಕ ನಟ ಚಿರಂಜೀವಿ, ತಾವು ಅಭಿನಯಿಸಿರುವ ಸೈರಾ ಚಿತ್ರದ ಪ್ರಮೋಷನ್ ಗಾಗಿ ಭಾರಿ ಪ್ರಯತ್ನ ನಡೆಸುತ್ತಿದ್ದಾರೆ.
ಸೈರಾ ಸಿನಿಮಾ ವೀಕ್ಷಿಸಬೇಕೆಂದು ಇತ್ತೀಚಿಗೆ ತೆಲಂಗಾಣ ರಾಜ್ಯ ರಾಜ್ಯಪಾಲೆ ತಮಿಳ್ ಸೈ ಸೌಂದರರಾಜನ್, ಆಂಧ್ರ ಪ್ರದೇಶ ಮುಖ್ಯಮಂತ್ರಿ ವೈ.ಎಸ್. ಜಗನ್ಮೋಹನ್ ರೆಡ್ಡಿ ಅವರನ್ನು ಭೇಟಿ ಮಾಡಿ ಕೋರಿದ್ದ ಚಿರಂಜೀವಿ... ಈಗ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನೂ ಭೇಟಿಯಾಗಲಿದ್ದಾರೆ. ಈ ಉದ್ದೇಶಕ್ಕಾಗಿ ಸಂಸದ ಸಿಎಂ ರಮೇಶ್ ಅವರೊಂದಿಗೆ ಚಿರಂಜೀವಿ ದೆಹಲಿ ತಲುಪಿದ್ದಾರೆ.
ಮೊದಲು ಪ್ರಧಾನಿ ಮೋದಿ ಅವರನ್ನು ಸೌಜನ್ಯಯುತವಾಗಿ ಭೇಟಿ ಮಾಡಿ, ಸೈರಾ ಚಿತ್ರ ವಿಕ್ಷೀಸಲು ಚಿರಂಜೀವಿ ಅವರು ಆಹ್ವಾನಿಸಲಿದ್ದಾರೆ. ನಂತರ ಅವರು ಕೇಂದ್ರ ಗೃಹ ವ್ಯವಹಾರಗಳ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ಸೈರಾ ಚಿತ್ರದ ವಿವರ ನೀಡಲಿದ್ದಾರೆ. ಅಮಿತ್ ಶಾ ಅವರನ್ನೂ ಚಿತ್ರ ನೋಡಲು ಆಹ್ವಾನಿಸಲಿದ್ದಾರೆ ಎಂದು ಮೂಲಗಳು ಹೇಳಿವೆ.