ರೈತರ ಫಲವತ್ತಾದ ಭೂಮಿಯಲ್ಲಿ ಕೈಗಾರಿಕಾ ಕಾರ್ಖಾನೆ ವಿರೋಧಿಸಿ ಮನವಿ

Plea against industrial factory on fertile land of farmers

ವಿಜಯಪುರ 06: ಜಿಲ್ಲೆಯ ನಾಗಠಾಣ ಹೊಬಳಿಯ ತಿಡಗುಂದಿ ಸಮೀಪದ ರೈತರ ಕಪ್ಪು ಮಣ್ಣಿನ ಫಲವತ್ತಾದ 1203 ಎಕರೆ ಭೂಮಿಯಲ್ಲಿ ಕೈಗಾರಿಕೆಗಾಗಿ ಬಳಸಿಕೊಳ್ಳಲು ಹೊಂಚು ಹಾಕುತ್ತಿರುವುದನ್ನ ವಿರೋಧಿಸಿ ರೈತರು ರಾಜ್ಯಪಾಲರ ಆಪ್ತ ಕಾರ್ಯದರ್ಶಿಯವರಿಗೆ, ವಿರೋಧ ಪಕ್ಷದ  ನಾಯಕರಾದ ಆರ್‌. ಅಶೋಕ, ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮೂಲ ಸಚೇತಕರಾದ ಎನ್‌. ರವಿಕುಮಾರ, ನಗರ ಶಾಸಕರಾದ ಬಸನಗೌಡ ಪಾಟೀಲ, ನಾಗಠಾಣ ಶಾಸಕರಾದ ವಿಠ್ಠಲ ಕಠಕದೊಂಡ ಅವರಿಗೂ ಮನವಿ ಸಲ್ಲಿಸಿ ಒಟ್ಟಾರೆಯಾಗಿ ರೈತರ ಜೀವ ಹೋದರು ಪರವಾಗಿಲ್ಲ ಕೃಷಿ ಭೂಮಿಯನ್ನು ಕೈಬೀಡುವುದಿಲ್ಲ ಎಂದು ಆಗ್ರಹಿಸಿ ಸದನದಲ್ಲಿ ರೈತಪರವಾಗಿ ಧ್ವನಿ ಎತ್ತಿ ಆ ಯೋಜನೆಯನ್ನು ಕೈಬೀಡುವಂತೆ ಅಥವಾ ಬೇರೆಡೆಗೆ ಸ್ಥಳಾಂತರಿಸುವಂತೆ ಸದನದಲ್ಲಿ ಮಾತನಾಡಲು ಮನವಿ ಸಲ್ಲಿಸಲಾಯಿತು. 

ರೈತ ಸಂಘದ ವಿಜಯಪುರ ಜಿಲ್ಲಾಧ್ಯಕ್ಷರಾದ ಸಂಗಮೇಶ ಸಗರ ಅವರು ಮಾತನಾಡಿ ಜಿಲ್ಲೆಯಲ್ಲಿ ಸಾವಿರಾರು ಎಕರೆ ಕೃಷಿಗೆ ಯೋಗ್ಯವಲ್ಲದ ಭೂಮಿಗಳಿವೆ, ಅಲ್ಲಿ ಅವಶ್ಯಕತೆಗೆ ತಕ್ಕಂತೆ ಕೈಗಾರಿಕರಣ ಮಾಡಲಿ ನಮ್ಮ ಅಭ್ಯಂತರ ಎನು ಇಲ್ಲ, ಈ ಮುಂಚೆ ಜಿಲ್ಲೆಯ ಮುಳವಾಡ ಕೆ.ಐ.ಡಿ.ಬಿ ಅಲ್ಲಿ ಸುಮಾರು 3500 ಎಕರೆ ಭೂಮಿ ಸ್ವಾಧೀನ ಪಡೆಸಿಕೊಂಡು 10 ವರ್ಷಗಳೇ ಕಳೆದರೂ ಇಲ್ಲಿಯವರೆಗೆ ಬೆರಳಣಿಕೆ ಎಷ್ಟು ಮಾತ್ರ ಕಾರ್ಖಾನೆಗಳು ಬಂದಿವೆ, ಇನ್ನು ಆಲಿಮಟ್ಟಿ ಜಲಾಶಯಕ್ಕೆ ಸಾವಿರಾರು ಎಕರೆ ಭೂಮಿ, ಕೂಡಗಿ ಎನ್‌.ಟಿ.ಪಿ.ಸಿ ಗೆ, ಘಾಳಿ ಫ್ಯಾನ್ ಗಳಿಗೆ, ಸೋಲಾರ ಎನರ್ಜಿಗಾಗಿ, ವಿಮಾನ ನಿಲ್ದಾಣಕ್ಕಾಗಿ ಹೀಗೆ ಜಿಲ್ಲೆಯಲ್ಲಿ ಸುಮಾರು 20 ಕ್ಕೂ ಅಧಿಕ ಏತ ನೀರಾವರಿಗಾಗಿ ರೈತರಿಗೆ ಸಾಕಷ್ಟು ಅನ್ಯಾಯವಾಗಿದೆ, ಇಲ್ಲಿಯವರೆಗೂ ಭೂಮಿ ಕಳೆದುಕೊಂಡ ಯಾವ ರೈತರಿಗೂ ಸರಿಯಾದ ಪರಿಹಾರ ಬಂದಿಲ್ಲ, ಯಾವ ಕೈಗಾರಿಕೆಗಳು ಸಂಪೂರ್ಣವಾಗಿ ಮುಗಿದಿಲ್ಲ, ಹೀಗೆ ಆದರೆ ಮುಂದೆ ಜಿಲ್ಲೆಯಲ್ಲಿ ರೈತರು ಉಳಿಮೆ ಬಿಟ್ಟು ದೇಶಾಂತರ ದುಡಿಯಲು ಹೋಗಬೇಕಾಗುತ್ತದೆ ಎಂದರು. 

ಮುಖಂಡರಾದ  ಗೀರೀಶ ತಾಳಿಕೋಟಿ ಮಾತನಾಡಿ ಅನೇಕ ಪಧವಿದರಿಗೆ ಸರಕಾರಿ ಉದ್ಯೋಗ ಸಿಗದೇ ಪರಿತ್ತಪ್ಪಿಸುವುದು ಒಂದುಕಡೆಯಾದರೆ, ಇರುವ ಅಲ್ಪ ಸ್ವಲ್ಪ ಜಮೀನಿನಲ್ಲಿ ಇತ್ತಿಚೆಗೆ ಆಗಿರುವ ಸ್ವಲ್ಪ ಪ್ರಮಾಣದ ನೀರಾವರಿ ಯೋಜನೆಯಿಂದ ಬೇರೆ ಕಡೆ ಆಳಾಗಿ ದುಡಿಯುವ ಬದಲಿಗೆ ನಮ್ಮ ಜಮೀನಿನಲ್ಲಿ ಮಾಲಿಕರಾಗಿ ಆರಾಮಾಗಿ ಇರೋಣ ಎಂದು ಬೆಂಗಳೂರಲ್ಲಿ ದುಡಿಮೆ ಬಿಟ್ಟು ಇಲ್ಲಿಗೆ ಬಂದರೆ ಈಗ ಕೈಗಾರಿಕೆ ಅಂತೆಳಿ ನಮ್ಮ ಭೂಮಿ ಕಸಿದುಕೊಳ್ಳಲು ರಾಜ್ಯ ಸರಕಾರ ಮುಂದಾಗಿದೆ, ದಯವಿಟ್ಟು ಈ ಭೂಮಿಯನ್ನು ಉಳಿಸಿಕೊಡಿ ಎಂದರು. 

ಈ ವೇಳೆ ಪ್ರತಿಪರ ರೈತರಾದ ಅಶೋಕಗೌಡ ಬಿರಾದಾರ, ಮಡಿವಾಳ ತಿಲ್ಲಿಹಾಳ,ಭೀರ​‍್ಪ ಬಿಜ್ಜರಗಿ, ಅಶೋಕ ಪಾಟೀಲ, ಮಲ್ಲಿಕಾರ್ಜುನ ಹೂಗಾರ, ಅರವಿಂಡ ಗಡಚಿ, ಗೌಡಪ್ಪ ಬಿರಾದಾರ, ಮಾಳಪ್ಪ ಜಂಬಗಿ, ಕಲ್ಲಪ್ಪ ಬಿರಾದಾರ, ಮಾಳಪ್ಪ ನಾಟೀಕಾರ ಸೇರಿದಂತೆ ಅನೇಕರು ಇದ್ದರು.