ಲೋಕದರ್ಶನವರದಿ
ರಾಣೇಬೆನ್ನೂರು02: ತಾಲೂಕಿನ ಗುಡ್ಡಗುಡ್ಡಾಪುರ ಗ್ರಾಮದಲ್ಲಿ ಬುಧವಾರ ಗಾಂಧೀಜಿ ಅವರ 151ನೇ ಜಯಂತೋತ್ಸವದ ನಿಮಿತ್ತ ಗ್ರಾಮ ಪಂಚಾಯತ್ ಮತ್ತು ನಿಶಾಡರ್್ ಸಂಸ್ಥೆ ಆಶ್ರಯದಲ್ಲಿ ಪ್ಲಾಸ್ಟಿಕ್ ಮುಕ್ತ ಜನಜಾಗೃತಿ ಅಭಿಯಾನ ಕಾರ್ಯಕ್ರಮವು ನಡೆಯಿತು.
ಸಮಾರಂಭ ಉದ್ಘಾಟಿಸಿ ಮಾತನಾಡಿದ ಕಾಕೋಳ ಜಿಲ್ಲಾಪಂಚಾಯತ್ ಸದಸ್ಯೆ ಏಕನಾಥ ಬಾನುವಳ್ಳಿ ಅವರು ಮಹಾತ್ಮಾ ಗಾಂಧೀಜಿ ಅವರ ತತ್ವ ಆದರ್ಶಗಳನ್ನು ಅಳವಡಿಸಿಕೊಂಡಾಗ ಮಾತ್ರ ಗ್ರಾಮಗಳು ರಾಮರಾಜ್ಯವಾಗುವುದರಲ್ಲಿ ಸಂದೇಹವಿಲ್ಲ. ಗ್ರಾಮಸ್ಥರು ತಮ್ಮ ಸುತ್ತಮುತ್ತಲ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕಾದರೆ, ಸಂಪೂರ್ಣ ಪ್ಲಾಸ್ಟಿಕ್ ಮುಕ್ತ ಬದುಕನ್ನು ಸಾಗಿಸಲು ಮುಂದಾಗಬೇಕು ಎಂದು ಕರೆ ನೀಡಿದರು.
ತಾಲೂಕಾ ಪಂಚಾಯತ ಕಾರ್ಯನಿವರ್ಾಹಕ ಅಧಿಕಾರಿ ಎಸ್.ಎಂ.ಕಾಂಬಳೆ ಅವರು ಕೇಂದ್ರ ಸಕರ್ಾರ ಅಕ್ಬೋಬರ್ 2 ರಂದು ಗಾಂಧೀಜಿ ಜಯಂತಿಯಿಂದ ಪ್ಲಾಸ್ಟಿಕ್ ಮುಕ್ತ ರಾಜ್ಯವನ್ನಾಗಿಸಲು ಸಂಕಲ್ಪಿಸಿದೆ.
ಈ ಕುರಿತು ಈಗಾಗಲೇ ದೇಶದಾಧ್ಯಂತ ಆದೇಶವು ಸಹ ಹೊರಡಿಸಲಾಗಿದೆ. ಜನತೆ ಸಕರ್ಾರದ ಕಾನೂನು ರೀತಿ-ನೀತಿಗಳನ್ನು ಕಡ್ಡಾಯವಾಗಿ ಪರಿಪಾಲಿಸುವುದರ ಮೂಲಕ ಸುಂದರ ಮತ್ತು ಸ್ವಚ್ಛ ಗ್ರಾಮ ಮತ್ತು ನಗರವನ್ನಾಗಿಸಲು ಮುಂದಾಗಬೇಕು ಎಂದರು.
ಸಮಾರಂಭದಲ್ಲಿ ತಾಲೂಕಾ ಪಂಚಾಯತ್ ಅಧ್ಯಕ್ಷ ಗೀತಾ ವಸಂತ ಲಮಾಣಿ, ಉಪಾಧ್ಯಕ್ಷ ಕಸ್ತೂರಮ್ಮ ಹೊನ್ನಾಳಿ, ಸ್ಥಾಯಿ ಸಮಿತಿಯ ಅಧ್ಯಕ್ಷ ರಾಜು ಸುವರ್ೆ, ತಾಪಂ ಸದಸ್ಯೆ ಭರಮಪ್ಪ ಉಮರ್ಿ, ಬಿ.ಇ.ಓ ಕೆ.ಶ್ರೀಧರ, ಗ್ರಾಪಂ ಅಧ್ಯಕ್ಷೆ ಗದಿಗೆವ್ವ ಕೆಂಚಪ್ಪ ಚಲವಾದಿ, ಉಪಾಧ್ಯಕ್ಷೆ ಚಂದ್ರಪ್ಪ ಉಮರ್ಿ, ಟಿ.ಎಚ್.ಓ.ಸೋಮಶೇಖರ ಸಣ್ಣಮನಿ, ಹೆಗ್ಗಪ್ಪ ಸಂಶಿ, ಎಸ್.ವಿ.ಹಿರೇಮಠ, ನಾಗರಾಜ ಹಾಡೂರ, ಜಗದೀಶ ಹೆಗ್ಗೇರಿ, ಬೀರಪ್ಪ ಏಳುಕೋಟಿ, ಮಾಲತೇಶ ತಳಗೇರಿ, ಹೂವಕ್ಕ ಮಾದರ, ವಿಜಯವ್ವ ಐಗಳ, ಬಸವರಾಜ ಮುಂಡವಾಡ, ಚಂದ್ರಪ್ಪ, ಎಂ.ಎಚ್.ಪಾಟೀಲ, ಬಸವರಾಜ, ಆನಂದಪ್ಪ ಜಂಗಳೇರ ಸೇರಿದಂತೆ ಗ್ರಾಮದ ಮುಖಂಡರು, ಪಂಚಾಯತ್ ಸದಸ್ಯರು, ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.
ಮಾಲತೇಶ ಪ್ರೌಢಶಾಲೆಯಿಂದ ಆರಂಭಗೊಂಡ ಬೃಹತ್ ಜನಜಾಗೃತಿ ಜಾಥಾ ಮೆರವಣಿಗೆಯು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಪಂಚಾಯತ್ ಸಭಾಂಗಣದಲ್ಲಿ ನಡೆದ ಸಭಾವೇದಿಕೆಗೆ ಸಾಂಗತ್ಯಗೊಂಡಿತು.