ಸಸಿ ನೆಡುವ ಕಾರ್ಯ ದಿನಾಚರಣೆಗೆ ಮಾತ್ರ ಸೀಮಿತವಾಗಬಾರದು: ಶಾಸಕ ಅರುಣಕುಮಾರ

ಲೋಕದರ್ಶನವರದಿ

ರಾಣೇಬೆನ್ನೂರು07: ಸಸಿಗಳನ್ನು ನೆಡುವ ಕಾರ್ಯ ಪರಿಸರ ದಿನಾಚರಣೆಗಳಿಗೆ ಮಾತ್ರ ಸಿಮೀತವಾಗಬಾರದು.   ಇದರಿಂದ ಉದ್ದೇಶಿತ ಯೋಜನೆ ಸಫಲವಾಗುವುದಿಲ್ಲ.   ಅರಣ್ಯ ಇಲಾಖೆ ಈ ನಿಟ್ಟಿನಲ್ಲಿ ನೆಟ್ಟಿರುವ ಸಸಿಗಳ ಬಗ್ಗೆ ಗಮನ ಹರಿಸಿ ಅವುಗಳನ್ನು ಪೋಷಿಸಲು ನಿರಂತರವಾಗಿ ಪ್ರಯತ್ನಿಸಲು ಮುಂದಾಗಬೇಕು ಎಂದು ಶಾಸಕ ಅರುಣಕುಮಾರ ಪೂಜಾರ ಹೇಳಿದರು.

ನಗರ ಹೊರವಲಯದ ಮಾಗೋಡ ರಸ್ತೆಯ ಕೆ.ಎಚ್.ಬಿ. ಕಾಲೋನಿಯಲ್ಲಿ ಅರಣ್ಯ ಇಲಾಖೆ ಹಾವೇರಿ ಪ್ರಾದೇಶಿಕ ವಿಭಾಗ, ರಾಣೇಬೆನ್ನೂರು ಪ್ರಾದೇಶಿಕ ವಲಯ ಆಯೋಜಿಸಿದ್ದ, ವಿಶ್ವ ಪರಿಸರ ದಿನಾಚರಣೆಯ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಸಕರ್ಾರಗಳು ಪರಿಸರ ರಕ್ಷಿಸುವ ಮತ್ತು ಸಸಿ ನೆಟ್ಟು ಅವುಗಳನ್ನು ಪೋಷಿಸುವ ಮತ್ತು ಬೆಳೆಸುವ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿವೆ.  ಆದರೆ, ಆ ಯೋಜನೆಗಳು ಬಹುತೇಕವಾಗಿ ಸಫಲತೆಯ ಬದಲಾಗಿ ವಿಫಲತೆಯತ್ತ ಸಾಗಿದೆ ಎನ್ನುವುದು ಸಾರ್ವಜನಿಕರ ಆರೋಪವಾಗಿದೆ.  ಹಚ್ಚುವುದಷ್ಟೇ ಅರಣ್ಯ ಇಲಾಖೆಯ ಕೆಲಸವಲ್ಲ. 

 ಅವುಗಳು ಬೆಳೆಸುವ ನಿಟ್ಟಿನಲ್ಲಿ ಪ್ರಯತ್ನಿಸಬೇಕು ಅಂದಾಗ ಮಾತ್ರ ಯಾವುದೇ ಆರೋಪಗಳು ಸುಳಿಯಲು ಸಾಧ್ಯವಾಗುವುದಿಲ್ಲ.  ಈ ನಿಟ್ಟಿನಲ್ಲಿ ಇಲಾಖೆ ಅಧಿಕಾರಿ ಮತ್ತು ಸಿಬ್ಬಂಧಿಗಳು ಕಟ್ಟು ನಿಟ್ಟಿನ ಕ್ರಮ ಕೈಗೊಂಡು ಗಮನ ಹರಿಸಬೇಕು ಎಂದು ಕರೆ ನೀಡಿದರು. 

        ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಚೋಳಪ್ಪ ಕಸವಾಳ, ಪೌರಾಯುಕ್ತ ಡಾ|| ಎನ್.ಮಹಾಂತೇಶ್, ತಹಶೀಲ್ದಾರ ಬಸನಗೌಡ ಕೊಟೂರ, ತಾಪಂ ಕಾರ್ಯನಿವರ್ಾಹಕ ಅಧಿಕಾರಿ ಡಾ|| ಎಸ್.ಎಂ.ಕಾಂಬಳೆ, ಮಲ್ಲಿಕಾಜರ್ುನ ಅಂಗಡಿ, ಮುಖಂಡರಾದ ಕರಿಯಪ್ಪ ತೋಟಗೇರ, ಮಂಜುನಾಥ ಓಲೇಕಾರ, ದೀಪಕ್ ಹರಪನಹಳ್ಳಿ, ವಿಶ್ವನಾಥ ಪಾಟೀಲ ಮತ್ತಿತರರು ಮಾತನಾಡಿದರು.

    ವೇದಿಕೆಯಲ್ಲಿ ತಾಪಂ ಅಧ್ಯಕ್ಷೆ ಗೀತಾ ವಸಂತ ಲಮಾಣಿ, ಉಪಾಧ್ಯಕ್ಷೆ ಕಸ್ತೂರವ್ವ ಹೊನ್ನಾಳಿ, ಪವನ್ ಮಲ್ಲಾಡದ,  ರಾಘವೇಂದ್ರ ಕುಲಕಣರ್ಿ,  ಅಶೋಕ ನಾರಜ್ಜಿ  ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಪರಮೇಶ್ ಆನವಟ್ಟಿ, ನಾಗರಾಜ ಅರಿಷಿಣದ ಸೇರಿದಂತೆ ಮತ್ತಿತರ ಗಣ್ಯರು ಅರಣ್ಯ ಇಲಾಖೆ ಸಿಬ್ಬಂದಿ ಪಾಲ್ಗೊಂಡಿದ್ದರು.