ಸಸ್ಯ ನೆಡುವುದು ಹಬ್ಬವಾಗದೇ ಕರ್ತವ್ಯವಾಗಲಿ: ರಘುನಾಥ

ಬಾಗಲಕೋಟೆ 03:  ನಮ್ಮ ಮೂಲಭೂತ ಅವಶ್ಯಕತೆಗಳಿಗಾಗಿ ಸಮೃದ್ದವಾಗಿದ್ದ ವನ್ಯ ಸಂಪತ್ತನ್ನು ನಾಶಮಾಡಿ ನೈಸಗರ್ಿಕ ಅಸಮತೋಲನ ಹಾಗೂ ವಿಕೋಪಕ್ಕೆ ತುತ್ತಾಗಿ ವನಮಹೋತ್ಸವ ದಿನದಂದು ಗಿಡನೆಟ್ಟು ಹಬ್ಬ ಆಚರಿಸುವುದು ಸೋಜಿಗದ ಸಂಗತಿಯಾಗದೇ ಆದ್ಯ ಕರ್ತವ್ಯವಾಗಬೇಕೆಂದು ಡಿ.ಎಫ್ಓ.ಆರ್ನ ರಘುನಾಥ ಹೇಳಿದರು.

ಲಯನ್ಸ್ ಸಂಸ್ಥೆ, ಬಿಎಸ್ಡಬ್ಲೂ, ಸಾರಿಗೆ ಹಾಗೂ ಅರಣ್ಯ ಇಲಾಖೆಗಳ ಸಹಯೋಗದಲ್ಲಿ ನಗರದ ಸಾರಿಗೆ ಇಲಾಖೆಯ ಆವರಣದಲ್ಲಿ ಹಮ್ಮಿಕೊಂಡ ಸಸಿ ನೆಡುವ ಕಾರ್ಯಕ್ರಮವನ್ನು ಭಾಗವಹಿಸಿ ಮಾತನಾಡಿದ ಅವರು ಸಾಮ್ರಾಟ ಅಶೋಕನ ಕಾಲದಲ್ಲಿ ರಸ್ತೆಯ ಬದಿ ಸಾಲು ಮರಗಳನ್ನು ನೆಟ್ಟು ಬೆಳೆಸುವ ಸಂಗತಿ ಅರಿತು ಕೊಂಡರೆ ಅವರಿಗಿದ್ದ ಪರಿಸರ ಪ್ರಜ್ಞೆ, ಕಾಳಜಿಯನ್ನು ಜನರಲ್ಲಿ ಮೂಡಿಸುವುದು ಮುಖ್ಯವಾಗಿದೆ ಎಂದರು.

ಸಾರಿಗೆ ಅಧಿಕಾರಿಗಳಾದ ಬಿ.ಡಿ.ಹರತಿ ಮಾತನಾಡುತ್ತಾ, ಪರಿಸರಕ್ಕೆ ಮಾರಕವಾಗಿ ಪರಿಣಮಿಸುವ ಇಲಾಖೆ ನಮ್ಮದಾಗಿದ್ದರೂ ಆವರಣದ ತುಂಬೆಲ್ಲ ಸಸಿ ನೆಟ್ಟು ಬೆಳೆಸುವ ಮೂಲಕ ಪರಿಸರಕ್ಕೆ ಪೂರಕವಾಗುವ ಈ ಕಾರ್ಯಕ್ಕೆ ಕೈ ಜೀಡಿಸಿದ ಎಲ್ಲ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಅಧಿಕಾರಿಗಳು, ಸಿಬ್ಬಂದಿ ವರ್ಗ ಅಭಿನಂದನೆಗೆ ಪಾತ್ರರು ಎಂದು ಸಂತೋಷ ವ್ಯಕ್ತಪಡಿಸಿದರು.

ಲಯನ್ಸ್ ಸಂಸ್ಥೆಯ ಜಿಲ್ಲಾ ಚೇರಮನ್ ಪ್ರೊ.ಬಿ.ಬಿ.ನಂದ್ಯಾಳ ಮಾತನಾಡುತ್ತಾ, ನಾವು ಬೇರೆ ಬೇರೆ ಬಟ್ಟೆ, ಧರ್ಮ, ಭಾಷೆ ಸಂಪ್ರದಾಯ ಅನುಸರಿಸಿದರೂ ನಾವೆಲ್ಲರೂ ಭೂಮಿಯೆಂಬ ಏಕೈಕ ಗೂಡಿನ ಹಕ್ಕಿಗಳು ಮರಗಳಿಗೆ ಮೊಗ್ಗುಂಟು, ಹೂಗಳಿದ್ದರೆ ದುಂಬಿ-ಚಿಟ್ಟೆಗಳುಂಟು, ಹಣ್ಣಗಳಿದ್ದರೆ ಅಳಿಲು ಕೋತಿಗಳುಂಟು. ಸಸ್ಯೆ ಎಲ್ಲ ಜೀವಿನಗ ಆಶ್ರಯ ನೀಡಿದೆ. ಉಸಿರಾಡಲು ಪ್ರಾಣ, ವಾಯು ನೀಡಿದೆ ಎಂದು ಕವನಗಳನ್ನು ಹೇಳುವ ಮೂಲಕ ನೆರೆದಿದ್ದ ಎಲ್ಲರ ಸಂತೋಷಕ್ಕೆ ಪಾತ್ರರಾದರು.

ಬಿ.ಎಸ್.ಡಬ್ಲೂನ ಪದಾಧಿಕಾರಿ ಶ್ರೀಧರ ದಾಸ ಮಾತನಾಡಿ ಅರಣ್ಯ ಇಲಾಖೆ ತನ್ನ ಕಾರ್ಯ ತಾನು ಮಾಡಿದರೆ ಒಬ್ಬ ವ್ಯಕ್ತಿಗಳಿಗಾಗಿ ಈ ಪರಿಸರಕ್ಕೆ ನಾವೇನು ಮಾಡುತ್ತೇವೆ ಅನ್ನುವುದು ಮುಖ್ಯ. ನಮಗೆಲ್ಲರಿಗೂ ಸಾಮಾಜಿಕ ಹೊಣೆಗಾರಿಕೆ ಮುಖ್ಯವಾಗಿದೆ ಎಂದು ಅಭಿಪ್ರಾಯ ಪಟ್ಟರು.

ಕಾರ್ಯಕ್ರಮದಲ್ಲಿ ಲಯನ್ಸ್ ಸಂಸ್ಥೆಯ ಅಧ್ಯಕ್ಷ ಡಾ.ವಿಕಾಸ ದಡ್ಡೇನವರ, ಲಿಂಗರಾಜ ವೈದ್ಯ ಬೆಂಡಿಗೇರಿ, ಎಸ್.ವಿ.ಮಠಪತಿ, ಆರ್.ಎಸ್.ದಡ್ಡೇನವರ, ಎಚ್.ದೊಡ್ಡಮನಿ, ಮಹೇಳ ಶೋಲಾಪುರೆ, ಎಚ್.ಎಸ್.ಪೂಜಾರ, ಚಂದ್ರಶೇಖರ ಶೆಟ್ಟಿ, ಸಾರಿಗೆ ಹಾಗೂ ಅರಣ್ಯ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳು, ಬಿಎಸ್ಡಬ್ಲೂನ ಕಾರ್ಯಕರ್ತರು ಉಪಸ್ಥಿತರಿದ್ದರು.