ಸಹಕಾರಕ್ಕೆ ಸಂಭಾವ್ಯ ಕ್ಷೇತ್ರಗಳ ಬಗ್ಗೆ ರಷ್ಯಾ ಉಪ ಪ್ರಧಾನಿ ಜೊತೆ ಪಿಯೂಷ್ ಗೋಯಲ್ ಚರ್ಚೆ

ವ್ಲಾಡಿವೋಸ್ಟಾಕ್,  ರಷ್ಯಾ / ನವದೆಹಲಿ ಆಗಸ್ಟ್ 12     ದ್ವಿಪಕ್ಷೀಯ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸಲು ವೇದಿಕೆ ಸಿದ್ಧಪಡಿಸಿರುವ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್  ಅವರು ಸೋಮವಾರ ರಷ್ಯಾ ಉಪ ಪ್ರಧಾನಿ  ಯೂರಿ ಟ್ರುಟ್ನೆವ್ ಅವರನ್ನು ಭೇಟಿಯಾಗಿ  ಭಾರತ ಮತ್ತು ಪೂರ್ವ ರಷ್ಯಾ ನಡುವೆ ಸಹಕಾರಕ್ಕೆ ಸಂಭಾವ್ಯ ಕ್ಷೇತ್ರಗಳ ಬಗ್ಗೆ  ಚರ್ಚಿಸಿದರು. . 

ಹೂಡಿಕೆಯ ಅವಕಾಶಗಳನ್ನು ಅನ್ವೇಷಿಸಲು ಮತ್ತು ಪೂರ್ವ ರಷ್ಯಾದ ದೂರದ ಪ್ರಾಂತ್ಯಗಳೊಂದಿಗೆ ನಿಕಟ ಸಹಭಾಗಿತ್ವವನ್ನು ಸಾಧಿಸಲು ಆಗಸ್ಟ್ 11ರಿಂದ 13ರವರೆಗೆ  ಪೂರ್ವ ರಷ್ಯಾದ ದೂರದ ವ್ಲಾಡಿವೋಸ್ಟಾಕ್ಗೆ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ವಾಣಿಜ್ಯ ಪ್ರತಿನಿಧಿಗಳ ನಿಯೋಗನ್ನು  ಗೋಯಲ್ ಕರೆದೊಯ್ದಿದ್ದಾರೆ. . 

ಗಣಿಗಾರಿಕೆ,  ಮೂಲಸೌಕರ್ಯ, ಇಂಧನ, ಸೇವೆಗಳು, ಆರೋಗ್ಯ ರಕ್ಷಣೆ, ಕೃಷಿ ವ್ಯವಹಾರ ಮತ್ತು ಉತ್ಪಾದನೆ  ಕ್ಷೇತ್ರಗಳಲ್ಲಿನ ವಾಣಿಜ್ಯ ಅವಕಾಶಗಳನ್ನು ಅನ್ವೇಷಿಸಲು ವ್ಲಾಡಿವೋಸ್ಟಾಕ್ನಲ್ಲಿ ಭಾರತದ ಅತಿದೊಡ್ಡ ವಾಣಿಜ್ಯ ನಿಯೋಗವನ್ನು ಉದ್ದೇಶಿಸಿ  ಗೋಯಲ್ ಮಾತನಾಡಿದರು. ಈ ನಿಯೋಗ ವಿದೇಶವೊಂದಕ್ಕೆ ತೆರಳಿರುವ ಅತಿದೊಡ್ಡ ಭಾರತೀಯ ವಾಣಿಜ್ಯ ನಿಯೋಗವಾಗಿದೆ.  

ಪೂರ್ವ ರಷ್ಯಾದ ದೂರದ ಪ್ರಾಂತ್ಯಗಳೊಂದಿಗೆ ವ್ಯಾಪಾರ ಸಂಬಂಧಗಳನ್ನು  ಬಲಪಡಿಸುವ ಕುರಿತು ಭಾರತದ ವಾಣಿಜ್ಯ ನಿಯೋಗವನ್ನುದ್ದೇಶಿಸಿ ಗೋವಾ ಮುಖ್ಯಮಂತ್ರಿ  ಪ್ರಮೋದ್ ಸಾವಂತ್, ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ, ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಮತ್ತು  ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ವಾಣಿಜ್ಯ ಸಚಿವರ ನೇತೃತ್ವದ ನಿಯೋಗದಲ್ಲಿದ್ದಾರೆ.  

ಗೋಯಲ್ ಮತ್ತು ಟ್ರುಟ್ನೆವ್ ಅವರು 'ಪೂರ್ವ ರಷ್ಯಾದ ದೂರದ ಭಾಗದಲ್ಲಿ ಭಾರತ-ರಷ್ಯಾ ಸಹಕಾರ' ಕುರಿತು ಪೂರ್ಣಧಿವೇಶನದಲ್ಲಿ ಸಮಗ್ರ ಭಾಷಣ ಮಾಡಿದರು.ಆದಿತ್ಯನಾಥ್ ಅವರು ಕೃಷಿ, ಆಹಾರ ಸಂಸ್ಕರಣೆ ಮತ್ತು ನವೀಕರಿಸಬಹುದಾದ ಇಂಧನ ಕುರಿತ   ಅಧಿವೇಶನವನ್ನುದ್ದೇಶಿಸಿ ಮಾತನಾಡಿದರು. ಖಟ್ಟರ್ ಅವರು ತೈಲ ಮತ್ತು ಅನಿಲ ಕುರಿತು  ಭಾರತ ಮತ್ತು ರಷ್ಯಾದ ವಾಣಿಜ್ಯ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಿದರು.  

ಖನಿಜ,  ಲೋಹ ಮತ್ತು ಮೀನುಗಾರಿಕೆ ಕುರಿತ ಅಧಿವೇಶನವನ್ನು ಸಾವಂತ್  ಭಾಷಣ ಮಾಡಿದರೆ, ರೂಪಾನಿ ಅವರು ಭಾರತ ಮತ್ತು ರಷ್ಯಾದ ವಾಣಿಜ್ಯ ಪ್ರತಿನಿಧಿಗಳೊಂದಿಗೆ  ವಜ್ರ ವ್ಯಾಪಾರದ ಕುರಿತು ಸಂವಾದ ನಡೆಸಿದರು.  

ಗೋಯಲ್ ಅವರನ್ನು ಪೂರ್ವ ರಷ್ಯಾದ ಸಚಿವ ಅಲೆಕ್ಸಾಂಡರ್ ಕೊಜ್ಲೋವ್ ಮತ್ತು ಪ್ರಿಮೊರಿ ಗವರ್ನರ್ ಒಲೆಗ್ ಕೊಜೆಮಿಯಾಕೊ ಸ್ವಾಗತಿಸಿದರು.