ಕೊಪ್ಪಳ : ಕೊಪ್ಪಳ ತಾಲೂಕಿನ ಕೋಳೂರು ಗ್ರಾಮದ ಹೇಮರಡ್ಡಿ ರಡ್ಡೇರ ಇವರ ಸುಪುತ್ರರಾದ ಉಮೇಶರಡ್ಡಿ ರಡ್ಡೇರ ಅವರಿಗೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಉಪಕುಲಪತಿಯಾದ ಡಾ.ಕರಿಸಿದ್ಧಪ್ಪ ಅವರು ಪಿಎಚ್.ಡಿ.ಪದವಿ ಪ್ರದಾನ ಮಾಡಿದರು. ಉಮೇಶರಡ್ಡಿ ರಡ್ಡೇರ ಅವರು ಡಾ.ಬಿ.ಕೆ.ಸುಜಾತ ಅವರ ಮಾರ್ಗದರ್ಶನದಲ್ಲಿ 'ಫಪರ್ಾಮನ್ಸ್ ಇಂಪ್ರೂವ್ಮೆಂಟ್ ಆಫ್ ಟಿ.ಪಿ.ಎಸ್.ಕೆ. ಮೊಡೆಮ್ ಇಂಪ್ಲಿಮೆಂಟಿಂಗ್ ಇನ್ ವಿಎಲ್ಐಸಿ' ಎಂಬ ವಿಷಯ ಕುರಿತು ಮಹಾಪ್ರಬಂಧ ಮಂಡಿಸಿದ್ದರು. ವಿಶ್ವವಿದ್ಯಾಲಯದ ಸಿನೆಟ್ ಸದಸ್ಯರಾದ ನಾಗರಾಜ ಮುಂತಾದವರು ವೇದಿಕೆಯ ಮೇಲೆ ಉಪಸ್ಥಿತರಿದ್ದರು.