ಕೊವಿದ್‍-19: ಕಲಬುರಗಿ ಜಿಲ್ಲೆಯಲ್ಲಿ ಅನಗತ್ಯ ಜನದಟ್ಟಣೆ ತಪ್ಪಿಸಲು ಪೆಟ್ರೋಲ್‍ ಮಾರಾಟ ನಿಷೇಧ

ಕಲಬುರಗಿ, ಮಾರ್ಚ್ 28,ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮತ್ತು ಜನಸಂದಣಿ ನಿರ್ಬಂಧಿಸಲು ಕರೋನಾ ನಿರ್ಮೂಲನೆಗೆ ಕೆಲಸ ಮಾಡುವ ಖಾಸಗಿ ವ್ಯಕ್ತಿಗಳು, ಅಗತ್ಯ ಸೇವೆಗಳಲ್ಲಿ ತೊಡಗಿಸಿಕೊಂಡಿರುವವರು ಮತ್ತು ವೈದ್ಯಕೀಯ ಸಿಬ್ಬಂದಿಯನ್ನು ಹೊರತು ಪಡಿಸಿ ಪೆಟ್ರೊಲ್‍ ಮಾರಾಟವನ್ನು ನಿಷೇಧಿಸಿ ಕಲಬುರಗಿ ಜಿಲ್ಲಾಡಳಿತ ಆದೇಶ ಹೊರಡಡಿಸಿದೆ.  ಆದರೆ, ಪೆಟ್ರೋಲ್‍ ಮಾರಾಟ ನಿಷೇಧ ಮಾಧ್ಯಮದವರಿಗೆ ಅನ್ವಯಿಸುವುದಿಲ್ಲ. ಮಾಧ್ಯಮದವರು ಒಮ್ಮೆ ಮಾತ್ರ ವಾಹನಗಳಿಗೆ ಪೆಟ್ರೋಲ್‍ ತುಂಬಿಸಿಕೊಳ್ಳಬಹುದಾಗಿದೆ ಎಂದು ಜಿಲ್ಲಾಧಿಕಾರಿ ಶರತ್‍ ತಿಳಿಸಿದ್ದಾರೆ.  ಆದೇಶಕ್ಕೆ ಹೊರತಾಗಿರುವ ವ್ಯಕ್ತಿಗಳ ಪಟ್ಟಿಯನ್ನು ಸಿದ್ಧಪಡಿಸುವಂತೆ ಸರ್ಕಾರ ಆಯಾ ಇಲಾಖೆಗಳಿಗೆ ಆದೇಶಿಸಿದೆ. ಲಾಕ್‍ಡೌನ್‍ ಮಾರ್ಗಸೂಚಿಗಳನ್ನು ಅನುಸರಿಸದೆ ಜನರು ಬೇಕಾಬಿಟ್ಟಿ ತಿರುಗಾಡುತ್ತಿರುವುದರಿಂದ ಈ  ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ. ಜಿಲ್ಲೆಯಲ್ಲಿ ಶುಕ್ರವಾರ ಯಾವುದೇ ಸೋಂಕಿನ ಪ್ರಕರಣ ದೃಢಪಟ್ಟಿಲ್ಲ. 64 ಮಾದರಿಗಳ ಪರೀಕ್ಷೆಯಲ್ಲಿ 35 ಮಾದರಿಗಳಲ್ಲಿ ಸೋಂಕು ಇಲ್ಲದಿರುವುದು ದೃಢಪಟ್ಟಿದೆ.