ನವದೆಹಲಿ, ಫೆ ೮ : ದೇಶಾದ್ಯಂತ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳು ಕುಸಿಯುತ್ತಿದೆ. ಪೆಟ್ರೋಲ್, ಡೀಸೆಲ್ ಬೆಲೆಗಳು ಸತತ ಮೂರನೇ ದಿನವೂ ಇಳಿಕೆಯ ಪ್ರವೃತ್ತಿಯಲ್ಲಿವೆ. ದೇಶದ ಪ್ರಮುಖ ನಗರಗಳಲ್ಲಿ ಶನಿವಾರ ಪೆಟ್ರೋಲ್ ೨೪ ಪೈಸೆ, ಡೀಸೆಲ್ ೨೭ ಪೈಸೆ ಇಳಿಕೆಯಾಗಿದೆ.
ಫೆಬ್ರವರಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್‌ಗೆ ೮೨ ಪೈಸೆ, ಪ್ರತಿ ಲೀಟರ್ ಡೀಸೆಲ್‌ಗೆ ೮೫ ಪೈಸೆ ಇಳಿಕೆಯಾಗಿದೆ. ಕಳೆದ ಜನವರಿ ೧೨ ರಿಂದ ಇಂಧನ ದರಗಳು ಇಳಿಕೆ ಪ್ರವೃತ್ತಿ ಆರಂಭಗೊಂಡಿವೆ.
ಕರೋನ ವೈರಸ್ ಪರಿಣಾಮ ಕಚ್ಚಾ ತೈಲ ಬೆಲೆಗೂ ಅಪ್ಪಳಿಸಿದೆ. ಚೀನಾದಲ್ಲಿ ಕರೋನಾ ವೈರಸ್ ಹರಡಿರುವುದರಿಂದ ಕಚ್ಚಾ ತೈಲಕ್ಕೆ ಬೇಡಿಕೆ ಇಳಿಕೆಯಾಗಿದ್ದು, ಇದರಿಂದಾಗಿ ಕಳೆದ ವಾರ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಕುಸಿತಕ್ಕೆ ಕಾರಣವಾಗಿದೆ. ವಾರದಲ್ಲಿ ಸತತ ಐದನೇ ಕುಸಿತ ಕಂಡಿದ್ದು, ಬ್ರೆಂಟ್ ಕಚ್ಚಾ ವಹಿವಾಟು ೫೪.೫೦ ಕ್ಕೆ ಇಳಿದಿದೆ.