ರಾಷ್ಟ್ರ ಮಟ್ಟದ ಪ್ರಾಜೆಕ್ಟ್ ಸ್ಪಧರ್ೆಯಲ್ಲಿ ಜಿಐಟಿ ವಿದ್ಯಾಥರ್ಿಗಳ ಸಾಧನೆ

ಲೋಕದರ್ಶನ ವರದಿ

ಬೆಳಗಾವಿ, 6: ಗೋಗಟೆ ತಾಂತ್ರಿಕ ಮಹಾವಿದ್ಯಾಲಯ (ಜಿಐಟಿ ) ದ ಮೆಕ್ಯಾನಿಕಲ್ ವಿಭಾಗದ ನಾಲ್ಕನೆಯ ಸೆಮಿಸ್ಟರ್ ನಲ್ಲಿ ಓದುತ್ತಿರುವ  ಅಬ್ದುಲ್ ಜಬ್ಬರ ಖಾನ್, ಅಜಯ್ ಲೆಂಗಡೆ, ಅಂಕುರ್ ಚಿಟ್ನಿಸ್, ಅಜಿತ ನವಿ ಮತ್ತು ಅವನ ಮುನ್ಷಿ  ವಿದ್ಯಾಥರ್ಿಗಳನ್ನ ಒಳಗೊಂಡ "ಮೆಕ್ಯಾಟ್ರೊನ್ ತಂಡ ಪ್ರೊ. ಎಸ. ಎಲ್.ಗೊಂಬಿ ಮಾರ್ಗದರ್ಶನದಲ್ಲಿ ವಿನ್ಯಾಸಗೊಳಿಸಿದ ಪ್ರಾಜೆಕ್ಟ್ ಹೆಸರಾಂತ ಬಹುರಾಷ್ಟ್ರೀಯ ಕಂಪನಿ ಕೆಪಿಐಟಿ ಹಮ್ಮಿಕೊಂಡಿದ್ದ ರಾಷ್ಟ್ರ ಮಟ್ಟದ ಪ್ರಾಜೆಕ್ಟ್ ವಿನ್ಯಾಸ ಸ್ಪಧರ್ೆಯಲ್ಲಿ ಶ್ರೇಷ್ಠ 30 ತಂಡಗಳಲ್ಲಿ ಆಯ್ಕೆಯಾಗಿ ಫೆ 22 ರಿಂದ 24 ರವರೆಗೆ ಪುಣೆಯಲ್ಲಿ ನಡೆದ ಪ್ರಾಜೆಕ್ಟ್ ಪ್ರದರ್ಶನದಲ್ಲಿ ಪಾಲ್ಗೊಂಡಿತ್ತು.      

ಕೆಪಿಐಟಿ ಸ್ಪಾರ್ಕಲ್ -19 ಈ ಸ್ಪಧರ್ೆ ಭಾರತದ ಸಕರ್ಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಇದರ ಸಹಯೋಗದೊಂದಿಗೆ ಕೆಪಿಐಟಿ ಟೆಕ್ನಾಲಜೀಸ್ ಲಿಮಿಟೆಡ್ ಶಕ್ತಿ ಮತ್ತು ಅದರ ಚಲಶೀಲತೆ ಎಂಬ ಉದ್ದೇಶದೊಂದಿಗೆ ಮುಂದಿನ ಪೀಳಿಗೆಯ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲು ವಿದ್ಯಾಥರ್ಿಗಳಿಂದ ಹೊಸ ಹೊಸ ತಂತ್ರಜ್ಞಾನ ಯೋಜನೆಗಳನ್ನು ಆಹ್ವಾನಿಸಿತ್ತು.  ಅರ್ಹತಾ ಸುತ್ತಿನಲ್ಲಿ ಐ ಐ ಟಿ (ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ) ಮತ್ತು ಎನ್ ಐ ಟಿ (ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ) 28 ಪ್ರತಿಷ್ಠಿತ ತಂತ್ರಜ್ಞಾನ ಸಂಸ್ಥೆಗಳ ಜೊತೆಗೆ 1121 ಎಂಜಿನಿಯರಿಂಗ್ ಮತ್ತು ವಿಜ್ಞಾನ ಮಹಾವಿದ್ಯಾಲಯಗಳಿಂದ 22,150 ಕ್ಕಿಂತ ಹೆಚ್ಚಿನ ಐಡಿಯಾಗಳು ಬಂದಿದ್ದವು.ಅವುಗಳ ನಾವಿನ್ಯತೆ, ಲಭ್ಯತೆ, ತಾಂತ್ರಿಕತೆ ಮತ್ತು ವಾಣಿಜ್ಯ ಕಾರ್ಯಸಾಧ್ಯತೆಯ ಅಂಶಗಳ ಮೇಲೆ 1915 ರ ತಂಡಗಳಲ್ಲಿ ಶ್ರೇಷ್ಟ 30 ತಂಡಗಳನ್ನು ಪ್ರದರ್ಶನ ಸುತ್ತಿಗೆ ಆಯ್ಕೆ ಮಾಡಿದರು. ಈ 30 ರಲ್ಲಿ ಜಿಐಟಿಯು ಒಂದಾಗಿತ್ತು. ಈ ಪ್ರೊಜೆಕ್ಟಗೆ ಕೆಎಲ್ಎಸ ಸಂಸ್ಥೆ ಅನುದಾನ ಒದಗಿಸಿತ್ತು. 

ಜಿಐಟಿಯ ಈ ಪ್ರಾಜೆಕ್ಟ್ ವಿದ್ಯುತ ಉತ್ಪಾದನೆ ಮೇಲೆ ವಿನ್ಯಾಸ ಮಾಡಲಾಗಿತ್ತು. ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ಚೇರಮನ್ ಡಾ. ಅನಿಲ ಸಹಸ್ರಬುದ್ದೆ ಮುಖ್ಯ ನಿಣರ್ಾಯಕರಾಗಿ ಆಗಮಿಸಿ ಖುದ್ದಾಗಿ ಜಿಐಟಿಯ ಪ್ರೊಜೆಕ್ಟನ್ನು ಪರೀಕ್ಷಿಸಿ ಮೌಲ್ಯಮಾಪನ ಮಾಡಿ ವಿದ್ಯಾಥರ್ಿಗಳ ಕಲ್ಪನಾ ಶಕ್ತಿಯನ್ನು ಮತ್ತು ಶ್ರಮವನ್ನು ಶ್ಲಾಘಿಸಿದರು. ಹಾಗೆಯೇ ಈ ಮೌಲ್ಯಮಾಪಕರ ತಂಡದಲ್ಲಿ ಹೆಸರಾಂತ ವಿಜ್ಞಾನಿ ಪದ್ಮ ವಿಭೂಷಣ ಡಾ. ರಘುನಾಥ್ ಮಹಾಶೆಳ್ಕರ್, ಡಾ. ಪೀಟರ್ ಎಫ್., ಡಾ. ಕಾಲರ್್ ಪೆರಿನ್ ಹಾಗೂ ಮಾಶಾಹಿಗೆ ಮಿಜ್ಯುಯಾಮ ಇದ್ದರು. 

 ಈ ಸಾಧನೆಗೆ ಕೆಎಲ್ಎಸ್ ಕಾಯರ್ಾಧ್ಯಕ್ಷ ಎಂ.ಆರ್.ಕುಲಕಣರ್ಿ, ಜಿಯಾ ಟಿ ಆಡಳಿತ ಮಂಡಳಿ  ಅಧ್ಯಕ್ಷ ಯು. ಏನ್. ಕಾಲಕುಂದ್ರಿಕರ, ಪ್ರಾಚಾರ್ಯ ಡಾ.ಎ. ಎಸ.ದೇಶಪಾಂಡೆ, ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥ ಡಾ. ಜಯಂತ ಕಿತ್ತೂರ, ಸಿಬ್ಬಂದಿ ವರ್ಗ ಹಾಗೂ ವಿದ್ಯಾಥರ್ಿಗಳನ್ನು ಅಭಿನಂದಿಸಿದ್ದಾರೆ.