ಗಂಗಾತಟದ ಶೇ. 50ರಷ್ಟು ಜಿಲ್ಲೆಗಳಲ್ಲಿ ಮಾತ್ರ ಕೊರೋನಾ ಸೋಂಕು; ವೈಜ್ಞಾನಿಕ ಸತ್ಯ ಬಹಿರಂಗ

ನವದೆಹಲಿ, ಏ 18, ದೇಶಾದ್ಯಂತ ಕೊರೋನಾ ವೈರಸ್ ಸಾಂಕ್ರಾಮಿಕ ತಾಂಡವವಾಡುತ್ತಿದೆ. ಆದರೆ, ಪವಿತ್ರ ನದಿ ಗಂಗೆಯ ತಟದಲ್ಲಿರುವ 46 ಜಿಲ್ಲೆಗಳ ಪೈಕಿ ಅರ್ಧದಷ್ಟು ಜಿಲ್ಲೆಗಳಿಗೆ ಮಾತ್ರ ಕೊರೋನಾ ಸೋಂಕು ತಗುಲಿದೆ ಎಂಬುದು ಗಮನಾರ್ಹ ಸಂಗತಿಯಾಗಿದೆ. ಈ ನದಿ ದೇಶದ ಐದು ರಾಜ್ಯಗಳನ್ನು ಹಾದುಹೋಗುತ್ತದೆ.  ಇದು ದೇಶದ ಒಟ್ಟು ಪ್ರಕರಣಗಳಲ್ಲಿ ಶೇ. 2ರಷ್ಟಾಗಿದೆ. ನದಿಯ ತಟದಲ್ಲಿ ದೇಶದ ಶೇ. 15ರಷ್ಟು ಜನಸಂಖ್ಯೆ ನೆಲೆಸಿದೆ ಎಂಬುದನ್ನು ಇಲ್ಲಿ ಗಮನಿಸಲೇ ಬೇಕು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಮಾಹಿತಿ ಪ್ರಕಾರ, ಗಂಗಾ ನದಿ ಹಾದು ಹೋಗುವ ಉತ್ತರಾಖಂಡ, ಉತ್ತರಪ್ರದೇಶ, ಬಿಹಾರ, ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳದಲ್ಲಿ ನದಿ ತಟದಲ್ಲಿ ಒಟ್ಟು 46 ಜಿಲ್ಲೆಗಳಿದ್ದು, ಅವುಗಳ ಪೈಕಿ 24ರಿಂದ ಜನರಿಗೆ ಮಾತ್ರ ಕೊರೋನಾ ಸೋಂಕು ತಗುಲಿದೆ. ಲಾಕ್ ಡೌನ್ ಘೋಷಣೆಯಾಗುತ್ತಿದ್ದಂತೆ ದೆಹಲಿ,ಪಂಜಾಬ್ ಮತ್ತಿತರರ ರಾಜ್ಯಗಳಿಂದ ತಮ್ಮ ಊರುಗಳಿಗೆ ಹಲವು ಕಾರ್ಮಿಕರು ಈ ಪ್ರದೇಶಗಳಿಗೆ ದೌಡಾಯಿಸಿದ್ದರಾದರೂ, ಅಲ್ಲಿನ ಕೊರೋನಾ ಸೋಂಕಿನ ಹೆಚ್ಚಳ ಕಂಡುಬಂದಿಲ್ಲ.
ಇದಕ್ಕೆ ಗಂಗಾ ನದಿಯಲ್ಲಿರುವ ಔಷಧೀಯ ಗುಣಗಳೇ ಕಾರಣ ಎಂಬ ಮಾತುಗಳೇ ಕೇಳಿಬರುತ್ತಿದೆ. ಜಲತಜ್ಞ ಅಭಯ್ ಮಿಶ್ರಾ, ಗಂಗಾನದಿ ತಟದಲ್ಲಿ ನಿಂಜಾ ವೈರಸ್ ಎಂಬ ವೈರಸ್ ಇದೆ. ಈ ವೈರಸ್ ನದಿಯಲ್ಲಿ ನೂರಾರು ವರ್ಷಗಳ ಹಿಂದೆ ಪತ್ತೆಯಾಗಿತ್ತು. ವಿಜ್ಞಾನಿಗಳು ಅದನ್ನು ಬ್ಯಾಕ್ಟೀರಿಯೋಹೇಗಸ್‌ ಎಂದು ಕರೆಯುತ್ತಾರೆ ಆದರೆ, ಜನರು ಅದನ್ನು ಗಂಗತ್ವ ಎಂದು ಗುರುತಿಸುತ್ತಾರೆ. ಈ ಗಂಗತ್ವ ನೀರು ಹಾಳಾಗದಂತೆ ತಡೆಯುತ್ತದೆ ಎಂದಿದ್ದಾರೆ.ಈ ಹಿಂದೆ ದೇಶದಲ್ಲಿ ಕಾಲೆರಾ ಅಪ್ಪಳಿಸಿದಾಗ ಜನರು ಮೃತದೇಹಗಳನ್ನು ತಂದು ಗಂಗಾ ನದಿಗೆ ಎಸೆಯುತ್ತಿದ್ದರು. ಆಗ ಭಾರತಕ್ಕೆ ಆಗಮಿಸಿದ್ದ ಬ್ರಿಟೀಷ್ ವಿಜ್ಞಾನಿ ಡೇವಿಡ್ ಹಾಕಿನ್ಸ್ ಇದರಿಂದ ನದಿ ಮೂಲಕ ಕಾಲೆರಾ ಹರಡಬಹುದು ಎಂಬ ಅನುಮಾನ ವ್ಯಕ್ತಪಡಿಸಿದ್ದರು. ಆದರೆ, ನಂತರ ಗಂಗಾ ನದಿಯಲ್ಲಿ ಕಾಲೆರಾ ಬ್ಯಾಕ್ಟೀರಿಯಾ ಕೂಡ ನಿಷ್ಕ್ರಿಯವಾಗುತ್ತದೆ ಎಂದು ಮಿಶ್ರಾ ಹೇಳಿದ್ದಾರೆ. ಈಗ ಜನರು ಮತ್ತು ಸರ್ಕಾರ ಗಂಗಾ ನದಿಯ ವೈಜ್ಞಾನಿಕ ಸತ್ಯವನ್ನು ಅರ್ಥ ಮಾಡಿಕೊಂಡು ಗೌರವಿಸುವ ಸಮಯ ಬಂದಿದೆ ಎಂದಿದ್ದಾರೆ.
 ಸರ್ಕಾರ ಈ ಸಮಯವನ್ನು ಸದುಪಯೋಗಪಡಿಸಿಕೊಂಡು ಮೇ 3ರಂದು ಲಾಕ್ ಡೌನ್ ಹಿಂಪಡೆಯುವ ಮುನ್ನ ಗಂಗಾ ನದಿಯನ್ನು ಕಲುಷಿತಗೊಳಿಸುವ ಎಲ್ಲಾ ಮೂಲಗಳನ್ನು ಸ್ಥಗಿತಗೊಳಿಸಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.