ಬೆಳಗಾವಿ 27: ಜನಪ್ರತಿನಿಧಿಗಳಾಗಿರುವ ನೀವು ಸಮಾಜವು ವಹಿಸಿದ ಈ ಮಹತ್ವದ ಕಾರ್ಯವನ್ನು ಬದ್ಧತೆ ಹಾಗೂ ಪ್ರಾಮಾಣಿಕತೆಯಿಂದ ಮಾಡಬೇಕು. ಜನತೆಯು ನಿಮ್ಮ ಮೇಲೆ ನಂಬಿಕೆಯನ್ನು ಇಟ್ಟುಕೊಂಡು ನಿಮಗೆ ಮತ ಚಲಾಯಿಸಿದ್ದಾರೆ. ಅವರ ನಂಬಿಕೆಯನ್ನು ಹುಸಿಗೊಳಿಸಬೇಡಿ ಎಂದು ಧಾರವಾಡ ಮುರುಘಾಮಠದ ಮಲ್ಲಿಕಾಜರ್ುನ ಮಹಾಸ್ವಾಮಿಗಳು ಹೇಳಿದರು.
ಜಗಜ್ಯೋತಿ ಬಸವೇಶ್ವರ ಕಲ್ಯಾಣ ಮಂಟಪ ಟ್ರಸ್ಟ್, ಬೆಳಗಾವಿ ಹಾಗೂ ದಾನಮ್ಮದೇವಿ ಮಂದಿರ ಹಾಗೂ ದಾನೇಶ್ವರಿ ಚಾರಿಟೇಬಲ್ ಟ್ರಸ್ಟ್ ಹಾಗೂ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿ ಸದಸ್ಯರು ಇತ್ತೀಚೆಗೆ ಆಯೋಜಿಸಿದ್ದ ಬೆಳಗಾವಿ ಜಿಲ್ಲೆಯಿಂದ ನೂತನವಾಗಿ ಚುನಾಯಿತರಾದ ಶಾಸಕರ ಸನ್ಮಾನ ಸಮಾರಂಭದ ದಿವ್ಯ ಸಾನ್ನಿಧ್ಯವನ್ನು ವಹಿಸಿ ಅವರು ಮಾತನಾಡುತ್ತಿದ್ದರು.
ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುವುದರ ಮೂಲಕ ಜನರ ಭಾವನೆಗಳಿಗೆ ಸ್ಪಂದಿಸುವಲ್ಲಿ ನೀವುಗಳು ಕಾರ್ಯನಿರ್ವಹಿಸುತ್ತೀರೆಂಬ ಆಶಾಭಾವ ನಮಗಿದೆ. ಈ ನಾಡಿನ ಮೂಲಭೂತ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸಕರ್ಾರ ಹಾಗೂ ಜನಪ್ರತಿನಿಧಿಗಳು ಮುಂದಾದರೆ ನಾಡಿನ ದೇಶದ ಪ್ರಗತಿಯಾದೀತೂ. ಒಬ್ಬ ಜನಪ್ರತಿನಿಧಿ ಮನಸ್ಸು ಮಾಡಿದರೆ ಎಂತಹ ಕಠಿಣ ಕೆಲಸವನ್ನು ಸಾಧಿಸಿ ತೋರಿಸಬಲ್ಲ ಎಂಬುದಕ್ಕೆ ಹಲವಾರು ನಿದರ್ಶನಗಳುಂಟು ಎಂದು ಶ್ರೀಗಳು ಹೇಳಿದರು.
ಕಾರಂಜಿಮಠದ ಗುರುಸಿದ್ಧ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ಬೆಳಗಾವಿಯ ಶಾಹಪೂರ ದಾನಮ್ಮದೇವಿ ಟ್ರಸ್ಟ್ ಹಲವಾರು ಸಾಮಾಜಿಕ ಕೆಲಸ ಕಾರ್ಯಗಳನ್ನು ವರ್ಷದುದ್ದಕ್ಕೂ ಮಾಡುತ್ತಾ ಬಂದಿದ್ದಾರೆ. ಬಡವರಿಗೆ ಹಾಗೂ ನಿರ್ಗತಿಕರಿಗೆ ಹಲವಾರು ವಸ್ತುಗಳನ್ನು ಟ್ರಸ್ಟ್ವತಿಯಿಂದ ನೀಡುವ ಮೂಲಕ ಅವರ ಜೀವನಕ್ಕೆ ಬೆಳಕಾಗಿದ್ದಾರೆ. ಇಂದು ನಮ್ಮ ಜಿಲ್ಲೆ ಶಾಸಕರನ್ನು ಗೌರವಿಸಿ ಸತ್ಕರಿಸುತ್ತಿರುವುದು ಅಭಿನಂದನಾರ್ಹ, ಈ ನಿಟ್ಟಿನಲ್ಲಿ ನಮ್ಮ ಶಾಸಕರು ಉತ್ತಮವಾದ ಕೆಲಸ ಕಾರ್ಯಗಳನ್ನು ಮಾಡುವ ಮೂಲಕ ಬೆಳಗಾವಿಯ ಮೂಲಭೂತ ಸಮಸ್ಯೆಗಳನ್ನು ನಿವಾರಿಸಬೇಕೆಂದು ಹೇಳಿದರು.
ರಾಮದುರ್ಗ ಶಾಸಕ ಮಹಾದೇವಪ್ಪ ಯಾದವಾಡ, ಕಿತ್ತೂರ ಶಾಸಕ ಮಹಾಂತೇಶ ದೊಡ್ಡಗೌಡರ, ಬೈಲಹೊಂಗಲದ ಮಹಾಂತೇಶ ಕೌಜಲಗಿ, ಬೆಳಗಾವಿ ಉತ್ತರ ಶಾಸಕ ಅನೀಲ ಬೆನಕೆ, ವಿರೋಧ ಪಕ್ಷದ ಮುಖ್ಯ ಸಚೇತಕರು, ವಿಧಾನ ಪರಿಷತ್ನ ಮಹಾಂತೇಶ ಕವಟಗಿಮಠ ಅವರನ್ನು ಸತ್ಕರಿಸಿ ಅಭಿನಂದಿಸಲಾಯಿತು.
ಟ್ರಸ್ಟ್ನ ಅಧ್ಯಕ್ಷ ಚಂದ್ರಶೇಖರ ಬೆಂಬಳಗಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕಾರ್ಯದಶರ್ಿ ಸಿ.ಎಂ.ಕಿತ್ತೂರ ವಂದಿಸಿದರು. ಉಪಾಧ್ಯಕ್ಷ ಎಂ.ಎಸ್.ಸಿದ್ದಣ್ಣನವರ, ಎಂ.ಕೆ.ತೇಲಸಂಗ, ಎಂ.ಎಸ್.ಉಮದಿ, ಜಿ.ಆರ್.ಚೊಣ್ಣದ, ಡಿ.ಎಸ್.ಯಳಮಲಿ, ಡಾ.ಎಚ್.ಬಿ.ರಾಜಶೇಖರ ಹಾಗೂ ಗಣ್ಯರು ಉಪಸ್ಥಿತರಿದ್ದರು.