ಉತ್ತಮ ಕೆಲಸಗಳನ್ನು ಜನರು ಸ್ಮರಿಸುತ್ತಾರೆ: ಯೋಗಿ ಆದಿತ್ಯನಾಥ್

  ಲಖನೌ, ಆ 17       ಪ್ರಾಮಾಣಿಕತೆ ಹಾಗೂ ದಕ್ಷತೆಯಿಂದ ಕಾರ್ಯನಿರ್ವಹಿಸುವಂತೆ ಸಾರ್ವಜನಿಕ ವಲಯದ ಅಧಿಕಾರಿಗಳಿಗೆ ಪ್ರೋತ್ಸಾಹ ನೀಡಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಉತ್ತಮ ಕೆಲಸಗಳನ್ನು ಜನರು ಸದಾ ಸ್ಮರಿಸುತ್ತಾರೆ ಎಂದಿದ್ದಾರೆ 

  ಬಡ್ತಿ ಪಡೆದ ಪಿಸಿಎಸ್ ಅಧಿಕಾರಿಗಳ ಸಂಘದ ಸದಸ್ಯರನ್ನುದ್ದೇಶಿಸಿ ಅವರು ಮಾತನಾಡಿ, ಒಳ್ಳೆಯ ಕೆಲಸಗಳನ್ನು ಮಾಡುವ ಅಧಿಕಾರಿಗಳನ್ನು ಜನ ಮರೆಯುವುದಿಲ್ಲ  ನಾನೂ ಸಹ ಪ್ರತಿದಿನ 17ರಿಂದ 18 ಗಂಟೆ ಕಾರ್ಯನಿರ್ವಹಿಸುತ್ತೇನೆ ಎಂದರು 

  ನಾನು ಯಾವಾಗಲೂ ಮುಖ್ಯಮಂತ್ರಿಯಾಗಿರುವುದಿಲ್ಲ, ಅಂತೆಯೇ ನಿಮಗೂ ಸಹ ಅಧಿಕಾರದ ಕುರ್ಚಿ ಶಾಶ್ವತವಲ್ಲ, ಸರಿಯಾದ ಸಮಯಕ್ಕೆ ಕಚೇರಿಗೆ ಆಗಮಿಸಿ, ನಿತ್ಯದ ಕಾಯಕದಲ್ಲಿ ಶ್ರದ್ಧೆಯಿಂದ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು 

  ಯಾವುದೇ ಉದ್ಯೋಗಿ ಕೇವಲ ಸಂಬಳಕ್ಕಾಗಿ ಕಾರ್ಯ ನಿರ್ವಹಿಸಬಾರದು ಕೆಲಸವನ್ನು ಪ್ರೀತಿಸಬೇಕು, ಸಾರ್ವಜನಿಕರ ಕಷ್ಟ ನಷ್ಟ, ಸಮಸ್ಯೆಗಳನ್ನು ಆಲಿಸಿ, ತಮ್ಮ ವ್ಯಾಪ್ತಿಯಲ್ಲಿ ಸಹಕರಿಸಬೇಕು ಎಂದು ಯೋಗಿ ಆದಿತ್ಯನಾಥ್ ಕಿವಿಮಾತು ಹೇಳಿದರು.