ಸಂವಿಧಾನ ಉಳಿಸಲು ಬೀದಿಗಳಿದ ಜನ; ಅಧಿರ್ ಚೌಧರಿ

ನವದೆಹಲಿ, ಫೆ 5 :    ಪೌರತ್ವ ತಿದ್ದುಪಡಿ ಕಾಯ್ದೆಗೆ ಸಂಬಂಧಿಸಿದಂತೆ ಲೋಕಸಭೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿರುವ ಸದನದ ಕಾಂಗ್ರೆಸ್ ನಾಯಕ ಅಧಿರ್ ರಂಜನ್ ಚೌಧರಿ, ಇದೇ ಮೊದಲ ಬಾರಿಗೆ ದೇಶದ ಜನರು ಸಂವಿಧಾನವನ್ನು ಉಳಿಸಲು ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ ಎಂದರು. 

ಲೋಕಸಭೆಯಲ್ಲಿ ಮಂಗಳವಾರ ರಾಷ್ಟ್ರಪತಿಗಳ ಭಾಷಣದ ವಂದನಾ ನಿರ್ಣಯ ಕುರಿತ ಚರ್ಚೆಯಲ್ಲಿ ಪಾಲ್ಗೊಂಡ ಅವರು, ಸರ್ಕಾರ ಧರ್ಮದ ಹೆಸರಿನಲ್ಲಿ ದೇಶವನ್ನು ವಿಭಜಿಸಲು ಯತ್ನಿಸುತ್ತಿದೆ. ಆದ್ದರಿಂದಲೇ ಎಲ್ಲಾ ಜಾತಿ, ಧರ್ಮ ಹಾಗೂ ಸಮುದಾಯದ ಜನರು ಬೀದಿಗಿಳಿದು ಸಂವಿಧಾನವನ್ನು ರಕ್ಷಿಸಲು ಹೋರಾಡುತ್ತಿದ್ದಾರೆ. ದೇಶದಲ್ಲಿ ತಾಂಡವವಾಡುತ್ತಿರುವ ಬಡತನ, ಹಸಿರು, ಹಣದುಬ್ಬರ ಮತ್ತು ನಿರುದ್ಯೋಗದ ಸಮಸ್ಯೆಗಳಿಂದ ಜನರ ಗಮನವನ್ನು ತಪ್ಪಿಸಲು ಸಿಎಎ ಜಾರಿಗೊಳಿಸಿದೆ ಎಂದು ಆರೋಪಿಸಿದರು. 

ಸ್ವಾಮಿ ವಿವೇಕಾನಂದ ಅವರು ತಾಯ್ನಾಡು ಎರಡು ಶ್ರೇಷ್ಠ ಶಕ್ತಿಗಳ ಸಂಗಮ- ಹಿಂದೂ ಮತ್ತು ಇಸ್ಲಾಂ  ಎಂದು ಚೌಧರಿ ಉಲ್ಲೇಖಿಸಿದರು. 

ಕೇಂದ್ರ ಸರ್ಕಾರದ 'ನವ ಭಾರತ'ದ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನವಭಾರತದಲ್ಲಿ ಬಡತನ ಮತ್ತು ನಿರುದ್ಯೋಗ ಹೆಚ್ಚಾಗುತ್ತಿದ್ದು, ಸಾಮೂಹಿಕ ಹತ್ಯೆ ಮತ್ತು ಧ್ರುವೀಕರಣದ ವ್ಯಾಪಿಸುತ್ತಿದೆ ಎಂದರು.