ಜೇಬಿಗೆ ಭಾರವಾಗದ ಜನ ಸ್ನೇಹಿ ಬಜೆಟ್
ರಾಣೇಬೆನ್ನೂರು 01: ದೇಶದ ರೈತರಿಗೆ 100 ಜಿಲ್ಲೆಗಳಲ್ಲಿ ಕೃಷಿಯಿಂದ ಉತ್ತಮವಾದ ಯೋಜನೆಗಳನ್ನು ರೂಪಿಸಿದ್ದಾರೆ. ವಿಶೇಷವಾಗಿ ಹತ್ತಿ ಬೆಳೆಯುವ ಬೆಳೆಗಾರರಿಗೆ ಬರುವ ಮುಂದಿನ 5 ವರ್ಷದಲ್ಲಿ ಹೊಸ ಯೋಜನೆ ರೂಪಿಸಿದ್ದಾರೆ, ಇದು ಬಹಳಷ್ಟು ರೈತರಿಗೆ ಅನುಕೂಲವಾಗಲಿದೆ. ಸಣ್ಣ ಮಧ್ಯಮ ವರ್ಗದವರಿಗೆ, ಟ್ಯಾಕ್ಸ್ ಕಟ್ಟುವ ತೆರಿಗೆದಾರರಿಗೆ 12 ಲಕ್ಷದವರೆಗೆ ಆದಾಯದ ಮಿತಿಯನ್ನು ಹೆಚ್ಚಿಸಿದ್ದಾರೆ, ಅವರಿಗೆ ಯಾವುದೇ ತರಹದ *ಆದಾಯ ತೆರಿಗೆ* ಇರುವುದಿಲ್ಲ ವಿನಾಯಿತಿ ಕೊಡುಗೆ ಕೊಟ್ಟಿದ್ದಾರೆ. ಇದು ಮಧ್ಯಮ ವರ್ಗದವರಿಗೆ ಬಹಳ ಸಹಕಾರಿಯಾಗಿದೆ ಈ ಬಜೆಟ್ 50 ಲಕ್ಷ ಕೋಟಿ ದಾಟುವ ಬಜೆಟ್ ಆಗಿದೆ ಎಲ್ಲಾ ವಲಯಗಳಿಗೆ ಸಮಾನವಾಗಿ ಹಂಚಿದ್ದಾರೆ,ಪ್ರವಾಸಿ ತಾಣಗಳಿಗೆ ಮತ್ತಷ್ಟು ಹೆಚ್ಚಿನ ಮೆರಗು ಬರುವುದು ನಿಶ್ಚಿತಾ.ಆತ್ಮ ನಿರ್ಭರ ಭಾರತವನ್ನು ಮತ್ತಷ್ಟು ಬಲಗೊಳಿಸುತ್ತೆ, *ಆರ್ಥಿಕ ಪ್ರಗತಿ ಆಶಾದಾಯಕ*ಸ್ಟಾರ್ಟಅಪ್ ದಾರರಿಗೆ ಹತ್ತರಿಂದ ಇಪ್ಪತ್ತು ಕೋಟಿ ವರೆಗೂ ಕಡಿಮೆ ಬಡ್ಡಿ ದರದಲ್ಲಿ ಸಾಲ ಸಿಗಲಿದೆ,ಎಲ್ಲಾ ರಾಜ್ಯಗಳಿಗೂ ಒಂದೂವರೆ ಲಕ್ಷ ಕೋಟಿ ಬಡ್ಡಿ ರಹಿತ ಸಾಲ ಕೇಂದ್ರ ಸರ್ಕಾರ ಕೊಡಲು ಮುಂದಾಗಿರುವುದು ಸ್ವಾಗತಾರ್ಹಬೆಳವಣಿಗೆ - ಗದಿಗೆಪ್ಪಗೌಡ ಹೊಟ್ಟಿಗೌಡ್ರ, ಅಧ್ಯಕ್ಷರು ವರ್ತಕರ ಸಂಘ, ರಾಣೇಬೆನ್ನೂರು.