ಲೋಕದರ್ಶನ ವರದಿ
ಮಾಂಜರಿ ದಿ30: ಗ್ರಾಮೀಣ ಭಾಗದ ಅಭಿವೃದ್ಧಿ ಹಾಗೂ ಆರ್ಥಿಕ ಉನ್ನತಿಗಾಗಿ ಸಹಕಾರಿ ರಂಗದಲ್ಲಿ ಸ್ಥಾಪಿಸಿರುವ ಸಹಕಾರಿ ಸಂಸ್ಥೆಗಳು ಸರ್ವ ಸಾಮಾನ್ಯ ಜನರ ಸಹಾಯಕ್ಕಾಗಿ ಮಾಡುತ್ತಿರುವಕಾರ್ಯ ಶ್ಲಾಘನೀಯ.
ಸಹಕಾರಿ ಸಂಸ್ಥೆಗಳ ಪ್ರಗತಿಗಾಗಿ ಸಂಸ್ಥೆಗಳ ಕಾರ್ಯ ಮಾಡುತ್ತಿರುವ ನಿರ್ದೇಶಕ ಮಂಡಳಿ ಹಾಗೂ ಕಾರ್ಮಿಕ ವರ್ಗ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವ ಜತೆಗೆ ಸದಸ್ಯರ ಹಾಗೂ ಗ್ರಹಕರ ಬಾಂಧವ್ಯ ಮತ್ತು ವಿಶ್ವಾಸ ಬೆಳೆಸುವ ಕಾರ್ಯ ಮಾಡಬೇಕೆಂದು ಶೇಗುಣಸಿಯ ವಿರಕ್ತಮಠದ ಪೂಜ್ಯ ಮಹಾಂತ ದೇವರು ಹೇಳಿದರು.
ಅವರು ಇಂದು ಚಿಕೊಡಿ ತಾಲ್ಲೂಕಿನ ಇಂಗಳಿ ಗ್ರಾಮದಲ್ಲಿರುವ ಮಾಂಜರಿ ಗ್ರಾಮದ ಶ್ರೀ ಲಕ್ಷ್ಮಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಸ್ಥೆಯ ಶಾಖೆಯ ನೂತನ ಕಟ್ಟಡ ಉದ್ಘಾಟನೆ ಸಮಾರಂಭದ ದಿವ್ಯಸಾನಿಧ್ಯ ವಹಿಸಿ ಮಾತನಾಡುತ್ತಿದ್ದರು ಈ ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ಸಂಸ್ಥಾಪಕ ಹಾಗೂ ಮಾಜಿ ಶಾಸಕರಾದ ಕಲ್ಲಪ್ಪ ಮಗೆನವರ ವಹಿಸಿದ್ದರು ಈ ಸಮಾರಂಭಕ್ಕೆ ಅತಿಥಿಯಾಗಿ ಹನುಮಾನ್ ಸಂಸ್ಥೆಯ ಅಧ್ಯಕ್ಷರಾದ ಶ್ರೀಪತಿ ಜಾಧವ್ ಜಿ. ಪಂ ಸದಸ್ಯರಾದ ಭಾರತಿ ಪವಾರ್ ತಾ ಪ ಸದಸ್ಯರಾದ ಕಾವೇರಿ ಚೊಗುಲಾ ಸಂಸ್ಥೆಯ ಅಧ್ಯಕ್ಷರಾದ ಜಿನ್ನಪ್ಪ ಶೇಡಬಾಳ ಅಣ್ಣಾಸಾಹೇಬ ಪವಾರ್ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ರಮೇಶ್ ಪವಾರ್ ಅಜಿತ್ ಚಿಗರೆ ಸುಭಾಷ ಜುಗಳು ಹಾಜರಿದ್ದರು ಸಂಸ್ಥೆಯ ನೂತನ ಕಟ್ಟಡದ ಉದ್ಘಾಟನೆಯನ್ನು ಸ್ವಾಮೀಜಿಗಳ ಹಸ್ತದಿಂದ ಮಾಡಲಾಯಿತು. ಈ ವೇಳೆ ಶ್ರೀಪತಿ ಜಾಧವ್ ಅಣ್ಣಾಸಾಹೇಬ ಪವಾರ ಕಲ್ಲಪ್ಪನಾ ಮಗೆನವರ ಅಜಿತ್ ಚಿಗರೆ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಈ ಸಮಾರಂಭಕ್ಕೆ ಸಂಸ್ಥೆಯ ಎಲ್ಲ ನಿದರ್ೇಶಕ ಮಂಡಳಿ ಸ್ಥಾನಿಕ ಆಡಳಿತ ಮಂಡಳಿಯ ಸದಸ್ಯರು ಸಂಸ್ಥೆಯ ಸದಸ್ಯರು ಸಹಕಾರಿ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಹಾಜರಿದ್ದರು ಪ್ರಫುಲ್ ಶೇಡಬಾಳ ಸ್ವಾಗತಿಸಿ ಶಶಿಕಾಂತ್ ತೇರದಾಳ ನಿರೂಪಿಸಿ ವಂದಿಸಿದರು.