ಶಾಂತಿ ಸೌಹಾರ್ದತೆ ಮಾತಿಗೆ ಸಿಮೀತವಾಗದೆ ಕೃತಿಯಲ್ಲಿರಲಿ: ಎಸ್.ಪಿ. ಜೋಶಿ

ಗದಗ: ಶಾಂತಿ ಸೌಹಾರ್ದತೆ ಮಾತಿಗೆ ಕೇವಲ ಮಾತಿಗೆ ಸೀಮಿತವಾಗದೆ ಕೃತಿಯಲ್ಲಿ ಒಡಮೂಡಿಸಿಕೊಂಡು ಸಂದಿಗ್ಧ ಪರಿಸ್ಥಿತಿ ನಿರ್ವಹಣೆಗೆ ನಾಗರಿಕ ಸಮಾಜ ಮುಂದಾಗಲಿ ಎಂದು ಜಿಲ್ಲಾ ಪೋಲಿಸ ವರಿಷ್ಠಾಧಿಕಾರಿ ಶ್ರೀನಾಥ ಜೋಶಿ ನುಡಿದರು.

ಗದಗ ಜಿಲ್ಲಾಡಳಿತ ಭವನದ ಮುಖ್ಯ ಸಭಾಂಗಣದಲ್ಲಿಂದು ಜರುಗಿದ ಜಿಲ್ಲಾ ಮಟ್ಟದ ಸೌಹಾರ್ದತಾ ಸಭೆಯಲ್ಲಿ ಮಾತನಾಡಿದರು. ನಮ್ಮಲ್ಲಿರುವ ಭೇಧಭಾವಗಳನ್ನು ತೊರೆದು ದೇಶದ ಉನ್ನತಿಗಾಗಿ ಸಮಾಜದ ಪ್ರಥಮ ಕರ್ತವ್ಯ ನಿರ್ವಹಿಸಬೇಕಾಗಿದೆ. ನಮ್ಮ ನಾಗರಿಕ ಸಮಾಜ ಜವಾಬ್ದಾರಿ ಮರೆತಾಗ ನಮ್ಮ ಅವನತಿ ನಿಶ್ಚಿತ ಎಂಬುದು ಅರಿತುಕೊಳ್ಳಬೇಕಿದೆ. ಈ ರೀತಿಯ ಸೌಹಾರ್ದ ಶಾಂತಿ ಸಭೆಗಳು ಜರುಗಿದಾಗ ಗಣ್ಯರು, ಸಮಾಜದ ಮುಖಂಡರು ಭಾಗವಹಿಸಿ ಭಾಷಣ ಮಾಡಿ ಇಲ್ಲಿಂದ ಹೋದ ನಚಿತರ ತಮ್ಮ ಜವಾಬ್ದಾರಿ ನಿರ್ವಹಿಸುವಲ್ಲಿ ವಿಮುಖರಾಗುತ್ತಿರುವದನ್ನ ಇಲಾಖೆಯ ಮುಖ್ಯಸ್ಥನಾಗಿ ಅನೇಕ ಸಚಿದರ್ಭದಲ್ಲಿ ನಾನು ಕಂಡಿದ್ದೇನೆ. ಇದು ದೇಶದ ಆಂತರಿಕ ಭದ್ರತೆಗೆ ಸಂಬಂಧಿಸಿದ ವಿಷಯ. ಆತ್ಮ ಸಾಕ್ಷಿವುಳ್ಳ ಪ್ರತಿಯೊಬ್ಬ ವ್ಯಕ್ತಿಯು ಸಧ್ಯದಲ್ಲೇ ಹೊರಬರಲಿರುವ ಅಯೋಧ್ಯೆ ತೀಪರ್ಾಗಿರಲಿ, ಪ್ರವಾದಿ ಪೈಗಂಬರರವರ ಜಯಂತಿ ಅಥವಾ ಟಿಪ್ಪು ಜಯಂತಿ ಸಂದರ್ಭದಲ್ಲಿ ಇಲಾಖೆಯೊಂದಿಗೆ ಕೈಗೂಡಿಸಿ ಯಾವದೇ ಸಂದಿಗ್ಧ ಪರಿಸ್ಥಿತಿ ತಿಳಿಗೊಳಿಸಲು ಮುಂದಾಗಬೇಕೆಂದು ಶ್ರೀನಾಥ ಜೋಶಿ ನುಡಿದರು.

ಗದಗ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಮಾತನಾಡಿ ಗದಗ ಈದ ಮಿಲಾದ್, ಟಿಪ್ಪುಜಯಂತಿ ಮತ್ತು ಅಯೋಧ್ಯೆ ತೀಪರ್ು ಹೊರಬರಲಿರುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಶಾಂತಿ ಹಾಗೂ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸೌಹಾರ್ದತೆ ಸಭೆ ಆಯೋಜಿಸುವ ರಾಜ್ಯ ಸರಕಾರದ ನಿದರ್ೇಶನದನ್ವಯ ಈ ಸಭೆಯನ್ನು ನಡೆಸಲಾಗಿದೆ. ಈಗಾಗಲೇ ಪೋಲಿಸ ಇಲಾಖೆ ಠಾಣಾ ಮತ್ತು ವೃತ್ತ ಹಾಗೂ ಉಪ ವಿಭಾಗಗಳ ವ್ಯಾಪ್ತಿಯಲ್ಲಿ ಸಮುದಾಯಗಳ ಸೌಹಾರ್ದತಾ ಸಭೆಯನ್ನು ಮುಖಂಡರ ಸಮ್ಮುಖದಲ್ಲಿ ಆಯೋಜಿಸಲಾಗಿದೆ. ಅಯೋಧ್ಯೆ ಕುರಿತು ನ್ಯಾಯಾಲಯದ ತೀರ್ಪಿನ  ನಂಬಿಕೆ ಮೇಲೆ ಬರುತ್ತಿಲ್ಲ ಎನ್ನುವದನ್ನು ಪ್ರತಿಯೊಬ್ಬರು ಸ್ಪಷ್ಟವಾಗಿ ಅರಿತುಕೊಳ್ಳಬೇಕಾಗಿದೆ. ಸಾಕ್ಷಿ ಆಧಾರಗಳ ಮೇಲೆ ಹೊರಬರುತ್ತಿರುವ ಈ ತೀರ್ಪನ್ನು ಎಲ್ಲರೂ ಯತಾವತ್ತಾಗಿ ಸ್ವೀಕರಿಸಿ ಗೌರವಿಸುವ ಮೂಲಕ ದೇಶದ ಸಂವಿಧಾನವನ್ನು ಎತ್ತಿ ಹಿಡಿಯಬೇಕಾಗಿದೆ ಎಂದು ನುಡಿದರು.

ಸಾನಿಧ್ಯ ವಹಿಸಿದ್ದ ಗದಗ ಶಿವಾನಂದ ಮಠದ ಕಿರಿಯ ಶ್ರೀಗಳಾದ ಕೈವಾಲ್ಯನಂದ ಮಾತನಾಡಿ ದೇಶಕ್ಕೆ ಸಂವಿಧಾನ ಪರಮೋನ್ನತವಾಗಿದ್ದು ಪ್ರತಿಯೊಬ್ಬರು ತಮ್ಮ ಜವಾಬ್ದಾರಿಗಳನ್ನು ಸರಿಯಾಗಿ ನಿರ್ವಹಿಸಬೇಕು. ಶಾಂತಿ ಸೌಹಾರ್ದತೆ ದೇಶದ ಹಾಗೂ ಸಮಾಜದ ಆತ್ಮವಾಗಿದ್ದು ಅದನ್ನು ಕಾಪಾಡಿಕೊಳ್ಳಲು ಸರ್ವರೂ ಜಿಲ್ಲಾಡಳಿತ ಹಾಗೂ ಪೋಲಿಸ ಇಲಾಖೆಗಳಿಗೆ ಸಹಕಾರ ನೀಡಬೇಕು. ಸಂದಿಗ್ನ ಪರಿಸ್ಥಿತಿಯಲ್ಲಿ ಹುಟ್ಟುಹಾಕುವ ವಿಷಯಗಳ ಕುರಿತು ತಿಳುವಳಿಕೆ ಹಾಗೂ ತಕ್ಷಣ ಪೋಲಿಸರಿಗೆ ಮಾಹಿತಿ ನೀಡುವ ಕಾರ್ಯವಾಗಬೇಕಿದೆ ಎಂದರು.

ಮೌಲಾನಾ ಇನಾಯುತುಲ್ಲಾ ಹಾಗೂ ಪೀರಜಾದೆ ಅವರು ಮಾತನಾಡಿ ನಾವು ಮೊದಲು ಭಾರತೀಯರು ನನ್ನ ದೇಶ ಮೊದಲು ಎನ್ನುವ ಭಾವನೆಯಿಂದ ಸರ್ವಧರ್ಮಗಳ ಜನರು ಸಾಮರಸ್ಯದಿಂದ ಬದುಕುವದು ಅವಶ್ಯಕವಾಗಿದೆ. ದೇಶವು ವಿವಿಧ ಸಂಸ್ಕೃತಿಗಳ ಮಿಶ್ರಣವಾಗಿದ್ದು ದೇಶಕ್ಕೆ ಇರುವ ಸಂವಿಧಾನ ಒಂದೇ ಆಗಿದೆ. ಅದರ ಅಂಗವಾಗಿ ಸವರ್ೋನ್ನತ ನ್ಯಾಯಾಲಯ ನೀಡುವ ಅಯೋಧ್ಯೆ ತೀರ್ಪನ್ನು ಸರ್ವರೂ ಗೌರವಿಸಿ ಸಮಾಜದಲ್ಲಿ ಶಾಂತಿ ಸೌಹಾರ್ದತೆ ಕಾಪಾಡಿಕೊಳ್ಳಲು ಪಣತೊಡೊನ ಎಂದರು.

ಸಭೆಯಲ್ಲಿ ಗಣೇಶಸಿಂಗ ಬ್ಯಾಳಿ, ಸುಧೀರ ಸಿಂಹ ಘೋರ್ಪಡೆ, ಹುಮಾಯುನ ಮಾಗಡಿ, ವಿ.ಆರ್.ಇನಾಮದಾರ, ಸತೀಶ ಹೂಲಿ, ಆರ.ಬಿ.ದಾನಪ್ಪಗೌಡ್ರ, ಎಸ್.ಎನ್.ಬಳ್ಳಾರಿ, ಅಶೋಕ ದೇಸನ್ನವರ, ನೂರೂದ್ದಿನಸಾಬ್ ಬಳ್ಳಾರಿ ಮುಂತಾದವರು ಮಾತನಾಡಿ  ಅಯೋಧ್ಯೆ ತೀಪರ್ಿನ ಕುರಿತಂತೆ ಯಾವುದೇ ಉದ್ವೇಗ ಅಥವಾ ಉತಪ್ರೇಕ್ಷಿತ ಭಾವನೆಗಳಿಗೆ ಅವಕಾಶ ಕೊಡದೆ ಯಥಾರೀತಿ ಸ್ವೀಕರಿಸಿ ದೇಶದ ಸವರ್ೋನ್ನತ ನ್ಯಾಯಾಲಯಕ್ಕೆ ಗೌರವ ಸಲ್ಲಿಸಬೇಕು ಮತ್ತು ಅದರ ತೀಪರ್ಿನ ವಿರುದ್ಧ ಪ್ರತಿಭಟನೆ ಮಾಡುವದು ನ್ಯಾಯಾಂಗ ನಿಂಧನೆ ಎನ್ನುವದನ್ನು ಮನವರಿಕೆ ಮಾಡಿಕೊಳ್ಳಬೇಕು. ಪೈಗಂಬರ ದಿನಾಚರಣೆಯಾಗಲಿ ಅಥವಾ ಟಿಪ್ಪು ಜಯಂತಿಯಾಗಲಿ ಜಿಲ್ಲಾಡಳಿತ ಹಾಗೂ ಪೋಲಿಸ ಇಲಾಖೆ ನೀಡುವ ನಿದರ್ೇಶನಗಳನ್ನು ಪಾಲಿಸಿ ಶಾಂತಿ ಹಾಗೂ ಸೌಹಾರ್ದತೆಯಿಂದ ಆಚರಣೆಯಾಗಬೇಕು. ಗದಗ ಜಿಲ್ಲೆ ಮೊದಲಿನಿಂದಲೂ ಕೋಮು ಸೌಹಾರ್ದತೆಗೆ ಹಾಗೂ ಶಾಂತಿಯುತ ಸರ್ವ ಧರ್ಮಗಳ ಹಬ್ಬಗಳ ಆಚರಣೆಗೆ ಮಾದರಿಯಾಗಿದ್ದು ಅದನ್ನು ಮುಂದುವರೆಸಿಕೊಂಡು ಹೋಗುವ ಕುರಿತು ಮಾತನಾಡಿದರು.

ಪ್ರಭಾರಿ ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಗದಗ-ಬೆಟಗೇರಿ ನಗರ ಸಭೆ ಪೌರಾಯುಕ್ತ ಮನ್ಸೂರ ಅಲಿ ಸೇರಿದಂತೆ ಜಿಲ್ಲೆಯ ಎಲ್ಲ ತಹಶೀಲ್ದಾರರು, ಹಿರಿಯ-ಕಿರಿಯ ಅಧಿಕಾರಿಗಳು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಗದಗ ಡಿ.ವೈ.ಎಸ್.ಪಿ ಎಸ್.ಕೆ.ಪ್ರಹ್ಲಾದ ಸಭೆಯ ಆಯೋಜನೆ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಡಿ.ಸಿ.ಬಿ.ಡಿ.ಎಸ್.ಪಿ ಈಗನಗೌಡ ಸ್ವಾಗತಿಸಿದರು. ದತ್ತ ಪ್ರಸನ್ನ ಪಾಟೀಲ ಕಾರ್ಯಕ್ರಮ ನಿರೂಪಿಸಿದರು.