ಗೃಹ ಲಕ್ಷ್ಮೀ ಯೋಜನೆಯಡಿ ಅಕ್ಟೋಬರ್ ನವೆಂಬರ್ 2024 ರ ಮೊತ್ತ ಪಾವತಿ
ಗದಗ 04 : ರಾಜ್ಯ ಸರ್ಕಾರದ 5 ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹ ಲಕ್ಷ್ಮೀ ಯೋಜನೆಯು ಅತ್ಯಂತ ಮಹಾತ್ವಾಕಾಂಕ್ಷಿ ಯೋಜನೆಯಾಗಿದೆ. ರಾಜ್ಯದ ಮಹಿಳೆಯರ ಆರ್ಥಿಕ ಸಬಲೀಕರಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರವು ಮನೆಯ ಕುಟುಂಬದ ಯಜಮಾನಿಗೆ ಪ್ರತಿ ತಿಂಗಳು 2,000 ರೂ.ಗಳನ್ನು ಅರ್ಹ ಫಲಾನುಭವಿಗಳ ಖಾತೆಗೆ ಜಮಾ ಮಾಡುತ್ತಿದೆ.ಗದಗ ಜಿಲ್ಲೆಯ ಗೃಹ ಲಕ್ಷ್ಮೀ ಯೋಜನೆಯಡಿ ಅಕ್ಟೋಬರ್ ಮತ್ತು ನವೆಂಬರ್ 2024 ರ ಮಾಹೆಯಲ್ಲಿ ಜಿಲ್ಲೆಯಲ್ಲಿ ಒಟ್ಟಾರೆ 248525 ಅರ್ಜಿಗಳು ನೋಂದಣಿ/ ಸ್ವೀಕೃಗೊಂಡಿದ್ದು ಆ ಪೈಕಿ 244398 ಅರ್ಜಿಗಳು ಮಂಜೂರಾತಿ ಪಡೆದಿವೆ. ತಾಲೂಕಾವಾರು ವಿವರ : ಗದಗ ಹಿ 77191, ಗಜೇಂದ್ರಗಡ ಹಿ 26057, ಲಕ್ಷ್ಮೇಶ್ವರ- 25897, ಮುಂಡರಗಿ- 34007, ನರಗುಂದ- 23162, ರೋಣ- 35625, ಶಿರಹಟ್ಟಿ- 22459 ಅರ್ಜಿಗಳು ಮಂಜೂರಾಗಿವೆ. ಈ ಎಲ್ಲ ಫಲಾನುಭವಿಗಳಿಗೂ ಗೃಹ ಲಕ್ಷ್ಮೀ ಯೋಜನೆಯಡಿ ಅಕ್ಟೋಬರ್, ನವೆಂಬರ್ 2024 ರ ಮೊತ್ತ ಪಾವತಿಸಲಾಗಿದೆ ಎಂದು ತಾಲ್ಲೂಕ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಅಶೋಕ ಮಂದಾಲಿ ತಿಳಿಸಿದ್ದಾರೆ.