ಪಂಜಾಬ್ ವಿತ್ತ ಸಚಿವರಿಗೆ ಪಿತೃವಿಯೋಗ

ಚಂಡೀಗಡ, ಮೇ 15, ಪಂಜಾಬ್‌ನ ಹಣಕಾಸು ಸಚಿವ ಮನ್‌ಪ್ರೀತ್ ಸಿಂಗ್ ಬಾದಲ್ ಅವರ ತಂದೆ ಗುರುದಾಸ್ ಸಿಂಗ್ ಬಾದಲ್ ಹೃದಯ ಸ್ತಂಭನದ ಹಿನ್ನೆಲೆಯಲ್ಲಿ ನಿನ್ನೆ ತಡರಾತ್ರಿ ಮೊಹಾಲಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಮೃತರಿಗೆ 90 ವರ್ಷ ವಯಸ್ಸಾಗಿತ್ತು.  ಅವರಿಗೆ ಪುತ್ರ ಮನ್‌ಪ್ರೀತ್ ಸಿಂಗ್ ಬಾದಲ್ ಮತ್ತು ಮಗಳು ಇದ್ದಾರೆ.ಮಾರ್ಚ್ 19 ರಂದು ಬಾದಲ್ ಗ್ರಾಮದಲ್ಲಿ ಅವರ ಪತ್ನಿ ಹರ್ಮಂದೀರ್ ಕೌರ್ ನಿಧನದ ನಂತರ ಅವರ ಆರೋಗ್ಯವು ಹದಗೆಡಲು ಪ್ರಾರಂಭಿಸಿತು.

ಕಳೆದ ಕೆಲವು ದಿನಗಳಿಂದ ಕೃತಕ ಉಸಿರಾಟ ವ್ಯವಸ್ಥೆಯಲ್ಲಿದ್ದರು ಎಂದು ಕುಟುಂಬ ಮೂಲಗಳು ತಿಳಿಸಿವೆ.ಗುರುದಾಸ್ ಸಿಂಗ್ ಬಾದಲ್ ಹಿರಿಯ ಅಕಾಲಿ ನಾಯಕ ಮತ್ತು ಐದು ಬಾರಿ ಪಂಜಾಬ್ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಅವರ ಕಿರಿಯ ಸಹೋದರ. ಗುರುದಾಸ್ 1971 ರಲ್ಲಿ ನಡೆದ ಸಂಸತ್ತಿನ ಚುನಾವಣೆಯಲ್ಲಿ ಜಯಗಳಿಸಿದ್ದರು ಮತ್ತು ಮಾರ್ಚ್ 1967 ರಿಂದ ಏಪ್ರಿಲ್ 1969 ರವರೆಗೆ ಎಂಎಲ್ ಸಿಯಾಗಿ ಸೇವೆ ಸಲ್ಲಿಸಿದ್ದರು.ತಮ್ಮ ಹಿರಿಯ ಸಹೋದರ ಪ್ರಕಾಶ್ ಸಿಂಗ್ ಬಾದಲ್ ಅವರ ಚುನಾವಣಾ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸುತ್ತಿದ್ದ ಗುರುದಾಸ್, 2012 ರ ವಿಧಾನಸಭಾ ಚುನಾವಣೆಯಲ್ಲಿ ಲಂಬಿ ವಿಧಾನಸಭಾ ಕ್ಷೇತ್ರದಿಂದ ತಮ್ಮ ಹಿರಿಯ ಸಹೋದರನ ವಿರುದ್ಧ ಸ್ಪರ್ಧಿಸಿದ್ದರು.