ಸಿಡ್ನಿ, ನ.6: ಆಸ್ಟ್ರೇಲಿಯಾ ತಂಡದ ಸ್ಟಾರ್ ವೇಗಿ ಪ್ಯಾಟ್ ಕಮಿನ್ಸ್ ಅವರಿಗೆ ಪಾಕಿಸ್ತಾನ ವಿರುದ್ಧದ ಮೂರನೇ ಟಿ-20 ಪಂದ್ಯದಿಂದ ವಿಶ್ರಾಂತಿ ನೀಡಲಾಗಿದ್ದು, ಟೆಸ್ಟ್ ಸರಣಿಯತ್ತ ಅವರ ಗಮನ ನೆಟ್ಟಿದೆ. ಎರಡನೇ ಟಿ-20 ಪಂದ್ಯದ ಬಳಿಕ ತಂಡ ಪರ್ಟ್ ಗೆ ಆಗಮಿಸಿತು. ಆದರೆ ತಂಡದೊಂದಿಗೆ ಪ್ಯಾಟ್ ಕಮಿನ್ಸ್ ಕಾಣಿಸಿಕೊಳ್ಳಲಿಲ್ಲ. ಕಮಿನ್ಸ್ ಅವರು ಸಿಡ್ನಿಗೆ ತೆರಳಿದ್ದಾರೆ. ಪ್ಯಾಟ್ ಕಮಿನ್ಸ್ ಅವರು ಟೆಸ್ಟ್ ಸರಣಿ ಆರಂಭಕ್ಕೂ ಮುನ್ನ ದೇಶಿಯ ಟೂರ್ನಿಗಳಲ್ಲಿ ಬೆವರು ಹರಿಸಲಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಮಾತನಾಡಿದ ಜಸ್ಟಿನ್ ಲ್ಯಾಂಗರ್ ಸದ್ಯ ತಂಡ ಉತ್ತಮ ಪ್ರದರ್ಶನ ನೀಡುತ್ತಿದೆ. ಪ್ಯಾಟ್ ಅವರಿಗೆ ವಿಶ್ರಾಂತಿ ನೀಡಲಾಗಿದ್ದು, ಟೆಸ್ಟ್ ಸರಣಿಗೆ ತಯಾರಿ ನಡೆಸಲಿದ್ದಾರೆ ಎಂದಿದ್ದಾರೆ. ತಂಡದ ಪ್ರದರ್ಶನ ಸ್ತಿರವಾಗಿದೆ. ಬೌಲರ್ ಗಳು ಉತ್ತಮ ಪ್ರದರ್ಶನದ ಮೇಲೆ ನಮ್ಮ ಗಮನ ನೆಟ್ಟಿದೆ. ಹೀಗಾಗಿ ತಂಡದಲ್ಲಿ ಬದಲಾವಣೆ ಮಾಡುತ್ತಾ ಇರುತ್ತೇವೆ ಎಂದು ಲ್ಯಾಂಗರ್ ಹೇಳಿದ್ದಾರೆ.