ಪಾಸ್ ದರ ತಗ್ಗಿಸಿದ ಬಿಎಂಟಿಸಿ: ಇಟಿಎಂ ಯಂತ್ರದ ಮೂಲಕ ಟಿಕೆಟ್ ವಿತರಣೆ

ಬೆಂಗಳೂರು, ಮೇ 25,ಕೊನೆಗೂ ಬಿಎಂಟಿಸಿ ಪ್ರಯಾಣಿಕರ ಒತ್ತಾಯಕ್ಕೆ ಬಿಎಂಟಿಸಿ ಮಣಿದಿದ್ದು ದಿನದ ಪಾಸ್ ದರವನ್ನು ಇಳಿಸಿದೆ.ಮಂಗಳವಾರ ಬಿಎಂಟಿಸಿಯಲ್ಲಿ ಆರು ಬಗೆಯ ಪಾಸ್ ವಿತರಣೆ ಸಿದ್ಧತೆ ನಡೆದಿದ್ದು, ಈ ಹಿಂದಿದ್ದ 70 ರೂ ದಿನದ ಪಾಸ್ ದರವನ್ನು 50 ರೂ.ಗೆ ಇಳಿಕೆ ಮಾಡಿದೆ.ಅಷ್ಟೇ ಅಲ್ಲದೇ ಹೊಸದಾಗಿ 5 ರೂ 10 ರೂ 15, 20 ಹಾಗೂ 30 ರೂ ದರದ ಪಾಸ್‌ಅನ್ನು ಸಹ ಪರಿಚಯಿಸಿದೆ.ಟಿಕೆಟ್ ಬದಲಾಗಿ ಪಾಸ್ ವಿತರಣೆ ಮುಂದಾಗಿದೆ. ಪ್ರಯಾಣಿಕರ ಅಕ್ರೋಶಕ್ಕೆ ಮಣಿದು ಹೊಸ ಪಾಸ್ ವಿತರಣೆ ಮುಂದಾಗಿರುವುದಾಗಿ ಬಿಎಂಟಿಸಿ ಮಾಹಿತಿ ತಂತ್ರಜ್ಞಾನ ನಿರ್ದೇಶಕ ಸತೀಶ್ ಬಾಬು   ಮಾಹಿತಿ ನೀಡಿದ್ದಾರೆ.
ಬಿಎಂಟಿಸಿ  ಟಿಕೆಟ್ ದರದಲ್ಲಿ ಬದಲಾವಣೆ ಮಾಡಿದೆ. ಜನರಿಗೆ ಅನುಕೂಲ ಕಲ್ಪಿಸುವುದರ ಜೊತೆಗೆ ಚಿಲ್ಲರೆ   ಸಮಸ್ಯೆ ಆಗದಂತೆ  5, 10,15,20 ಹಾಗೂ 30 ರೂಗಳ ಟಿಕೆಟ್ ವಿತರಣೆಗೆ ಮುಂದಾಗಿದೆ. ಇಟಿಎಂ  ಯಂತ್ರದ ಮೂಲಕ ಟಿಕೆಟ್ ವಿತರಣೆ ಆಗಲಿದೆ.ಪ್ರಯಾಣದ ದೂರ ಆಧರಿಸಿ ಟಿಕೆಟ್ ದರ ನಿಗದಿ  ಪಡಿಸಿದ್ದು,ಒಟ್ಟು 5 ಮಾದರಿಯ ದರ ಟಿಕೆಟ್ ನಿಗದಿಯಾಗಿದೆ.  ಪಾಸ್ ಖರೀದಿಸಲಾಗದವರು ಟಿಕೆಟ್ ಕೊಂಡು ಪ್ರಯಾಣ ಮಾಡಬಹುದು ಎಂದು ಬಿಎಂಟಿಸಿ ಅಧಿಕೃತ ಪ್ರಕಟಣೆ ತಿಳಿಸಿದೆ.