ಪಕ್ಷದ ಶಾಸಕ ನರೇಶ್ ಯಾದವ್ ಬೆಂಗಾವಲಿನ ಮೇಲೆ ಗುಂಡಿನ ದಾಳಿ ದೃಢಪಡಿಸಿದ ಆಪ್ ಹಿರಿಯ ನಾಯಕ

ನವದೆಹಲಿ, ಫೆ ೧೨ :   ತನ್ನ ಚುನಾಯಿತ ಶಾಸಕ ನರೇಶ್ ಯಾದವ್  ಅವರ ಬೆಂಗಾವಲಿನ ಮೇಲೆ  ಮಂಗಳವಾರ ರಾತ್ರಿ  ಅಪರಿಚಿತ ವ್ಯಕ್ತಿಗಳು ಗುಂಡಿನ ದಾಳಿ ನಡೆಸಿದ್ದು, ದಾಳಿಯಲ್ಲಿ  ಒಬ್ಬ ವ್ಯಕ್ತಿ ಮೃತ ಪಟ್ಟಿದ್ದಾರೆ ಎಂದು  ಆಮ್ ಆದ್ಮಿ ಪಕ್ಷ  ಬುಧವಾರ  ಹೇಳಿದೆ

ಮಂಗಳವಾರ  ತಡ ರಾತ್ರಿ,  ನರೇಶ್  ಯಾದವ್   ದೇಗುಲಕ್ಕೆ  ತೆರಳಿ ವಾಪಸ್ ಆಗುತ್ತಿದ್ದಾಗ  ಈ ದಾಳಿ ನಡೆದಿದೆ  ಎಂದು   ಪಕ್ಷದ  ಹಿರಿಯ ನಾಯಕ ಹಾಗೂ  ರಾಜ್ಯಸಭಾ ಸದಸ್ಯ  ಸಂಜಯ್ ಸಿಂಗ್   ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಫಲಿತಾಂಶ  ಪ್ರಕಟಗೊಂಡ ನಂತರ  ದೇಗುಲಕ್ಕೆ ತೆರಳಿ  ವಾಪಸ್ ಬರುತ್ತಿದ್ದ  ಶಾಸಕ   ಯಾದವ್  ಅವರ  ಬೆಂಗಾವಲಿನ  ಮೇಲೆ  ಅಪರಿಚಿತ  ವ್ಯಕ್ತಿಗಳು  ಗುಂಡಿನ ದಾಳಿ ನಡೆಸಿದ್ದಾರೆ.  ಪಕ್ಷದ ಸ್ವಯಂಸೇವಕ ಅಶೋಕ್ ಎಂಬುವವರು  ಗುಂಡಿನ ದಾಳಿಯಲ್ಲಿ ಮೃತಪಟ್ಟಿದ್ದಾರೆ  ಎಂದು   ಅವರು ತಿಳಿಸಿದ್ದಾರೆ 

ಗುಂಡಿನ ದಾಳಿಯಲ್ಲಿ  ಪಕ್ಷದ ಮತ್ತೊಬ್ಬ ಸ್ವಯಂ ಸೇವಕ ಕೂಡಾ  ಗಾಯಗೊಂಡಿದ್ದಾರೆ. ಘಟನೆ ಹಿನ್ನಲೆಯಲ್ಲಿ  ದೆಹಲಿಯ ಕಾನೂನು ಮತ್ತು ಸುವ್ಯವಸ್ಥೆ ಬಗ್ಗೆ  ಅವರು  ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೆಹಲಿ ವಿಧಾನಸಭೆ ಚುನಾವಣೆಯಲ್ಲಿ   ಒಟ್ಟು ೭೦ ಸ್ಥಾನಗಳ ಪೈಕಿ    ಎಎಪಿ  ೬೨ ಸ್ಥಾನಗಳಲ್ಲಿ ಜಯಗಳಿಸುವ ಮೂಲಕ  ಹೊಸ ದಾಖಲೆ ನಿರ್ಮಿಸಿದೆ.