ಲಕ್ನೋ,
ಡಿಸೆಂಬರ್ 26, ಕಾಂಗ್ರೆಸ್ ಪಕ್ಷದ 135 ನೇ ಸಂಸ್ಥಾಪನಾದಿನದ ಅಂಗವಾಗಿ ಇದೇ ಶನಿವಾರ ಯುವ ನಾಯಕಿ,
ಪ್ರಿಯಾಂಕಾ ಗಾಂಧಿ ನೇತೃತ್ವದಲ್ಲಿ ರಾಜ್ಯ ರಾಜಧಾನಿಯಲ್ಲಿ ಶಾಂತಿ ಮೆರವಣಿಗೆ ನಡೆಯಲಿದೆ. ಪಕ್ಷದ ಪ್ರಧಾನ ಕಾರ್ಯದರ್ಶಿ
ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಪಕ್ಷದ ರಾಜ್ಯ ಪ್ರಧಾನ ಕಚೇರಿಯಿಂದ ಹಜರತ್‌ಗಂಜ್‌ನಲ್ಲಿರುವ ಅಂಬೇಡ್ಕರ್
ಪ್ರತಿಮೆವರೆಗೆ ಶಾಂತಿ ಮೆರವಣಿಗೆಯ ನೇತೃತ್ವ ವಹಿಸಲಿದ್ದು, ಸಂವಿಧಾನ
ರಕ್ಷಣೆ ಮಾಡುವ ಪ್ರತಿಜ್ಞಾವಿಧಿಯನ್ನು ನಾಯಕರಿಗೆ
ಭೊದಿಸಲಿದ್ದಾರೆ. ಈ ವಿಷಯವನ್ನು ಪಕ್ಷದ ಮೂಲಗಳು
ಗುರುವಾರ ಯುಎನ್‌ಐಗೆ ತಿಳಿಸಿದ್ದು, ಕಾರ್ಯಕ್ರಮದ ತಯಾರಿ ಪ್ರಾರಂಭವಾಗಿದೆ ಪ್ರಿಯಾಂಕಾ ಭೇಟಿ ಸಹ ಖಚಿತವಾಗಿದೆ. ಇದಕ್ಕೂ ಮುನ್ನ, ಸಿಎಎ ಪ್ರತಿಭಟನೆಯಲ್ಲಿ
ಮೃತಪಟ್ಟ ಸಂತ್ರಸ್ತರ ಕುಟುಂಬ ಸದಸ್ಯರನ್ನು ಹಾಗೂ ಪಕ್ಷದ ಮುಖಂಡ ಸದಾಫ್ ಜಾಫರ್ ಅವರನ್ನು ಭೇಟಿ ಮಾಡಲು ಲಕ್ನೋ ಜೈಲಿಗೆ ಭೇಟಿ ನೀಡಲು ಅವರು ಇಂದು
ಲಕ್ನೋಗೆ ಭೇಟಿ ನೀಡಬೇಕಾಗಿತ್ತು.ಶನಿವಾರ ಲಖನೌದಲ್ಲಿ ನಡೆಯುತ್ತಿರುವ ಪ್ರಿಯಾಂಕಾ ಕಾರ್ಯಕ್ರಮಕ್ಕೆ
ಬರುವಂತೆ ರಾಜ್ಯದ ಕಾರ್ಯಕರ್ತರನ್ನು ಆಹ್ವಾನಿಸಲಾಗಿದೆ
ಎಂದು ಮೂಲಗಳು ತಿಳಿಸಿವೆ. ಪ್ರಿಯಾಂಕಾ ಅವರು ಇದೆ 28 ರ ಬೆಳಿಗ್ಗೆ ದೆಹಲಿಯಿಂದ ಆಗಮಿಸಿದ ನಂತರ ರಾಜ್ಯ ಪಕ್ಷದ ಕಚೇರಿಯಲ್ಲಿ ಪಕ್ಷದ ಧ್ವಜ ಹಾರಿಸಲಿದ್ದಾರೆ. ಆದರೆ,
ಸಿಎಎ ಕುರಿತು ಕಳೆದ ವಾರ ರಾಜ್ಯ ರಾಜಧಾನಿಯಲ್ಲಿ ನಡೆದ ಹಿಂಸಾಚಾರದ ನಂತರ ಶಾಂತಿ ಮೆರವಣಿಗೆ ನಡೆಸಲು
ಪೊಲೀಸ್ ಅಧಿಕಾರಿಗಳು ಕಾಂಗ್ರೆಸ್ ಗೆ ಅನುಮತಿ ನೀಡುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.