ಮುನವಳ್ಳಿ: ಮಕ್ಕಳ ಮೇಲೆ ಪಾಲಕರ ನಿಗಾ ಇರಲಿ: ಮುರುಘೇಂದ್ರ ಶ್ರೀ

ಲೋಕದರ್ಶನ ವರದಿ

ಮುನವಳ್ಳಿ 06: ಮಕ್ಕಳನ್ನು ಕೇವಲ ಶಾಲೆಗೆ ಕಳುಹಿಸಿ ಪಾಲಕರು ಸುಮ್ಮನಿರಬಾರದು ಅವರ ಉತ್ತಮ ಭವಿಷ್ಯ ರೂಪಿಸಿಕೊಳ್ಳುವ ನಿಟ್ಟಿನಲ್ಲಿ ಪ್ರತಿ ಹಂತದಲ್ಲೂ ಶಿಕ್ಷಕರೊಂದಿಗೆ ಚಚರ್ೆ ಮಾಡಿ ಅವರ ವಿದ್ಯಾಭ್ಯಾಸದ ಪ್ರಗತಿ ಸೇರಿದಂತೆ ಇತರೆ ಚಟುವಟಿಕೆಗಳ ಮೇಲೆ ನಿಗಾವಹಿಸಿ ಉತ್ತಮ ಸಂಸ್ಕಾರ ಹಾಗೂ ಆದರ್ಶಗಳನ್ನು ರೂಢಿಸಿಕೊಂಡು ಬದುಕು ಸಾಗಿಸುವತ್ತ ಗಟ್ಟಿಗೊಳಿಸಬೇಕು  ಎಂದು ಮ.ನಿ.ಪ್ರ. ಮುರುಘೇಂದ್ರ ಮಹಾಸ್ವಾಮಿಗಳು ಹೇಳಿದರು. ಅವರು ಮುರುಘರಾಜೇಂದ್ರ ಯೋಗವಿದ್ಯಾ ಕೇಂದ್ರ ಸಂಚಾಲಿತ ಅನ್ನದಾನೇಶ್ವರ ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಡಿ. 5 ರಂದು  ಜರುಗಿದ ಪಾಲಕರ ಸಮ್ಮೇಳನದ ಸಾನಿಧ್ಯ ವಹಿಸಿ ಮಾತನಾಡುತ್ತಿದ್ದರು. 

ವಿದ್ಯಾಥರ್ಿಗಳು ಶಾಲಾ ಅಭ್ಯಾಸದ ಜೊತೆಗೆ ಸ್ಪಧರ್ಾತ್ಮಕ ಪರೀಕ್ಷೆಗಳನ್ನು ಎದುರಿಸಲು ಪ್ರೇರೆಪಿಸಿ ಉನ್ನತ ಹುದ್ದೆಗಳನ್ನು ಹೊಂದಿ ದೇಶ ಸೇವೆ ಮಾಡಲು ಅನುವು ಮಾಡಿಕೊಡಬೇಕು. ಎಂದರು.

ಪ್ರಾಚಾರ್ಯ ಕೆ.ಬಿ. ನಲವಡೆ ಮಾತನಾಡಿ ಮಕ್ಕಳನ್ನು ಪಾಲಕರು ಹದ್ದಬಸ್ತಿನಲ್ಲಿ ಇಟ್ಟುಕೊಂಡು ಅವರಿಗೆ ತಿಳುವಳಿಕೆ ನೀಡಬೇಕು. ಮೊಬೈಲ ಹಾಗೂ ಟಿ.ವ್ಹಿ. ವ್ಯಾಮೋಹಕ್ಕೆ ಬಲಿಯಾಗದಂತೆ ನೋಡಿಕೊಳ್ಳಬೇಕು ಎಂದರು.

ಮುಖ್ಯ ಅತಿಥಿಗಳಾಗಿ ಪಾಲಕ ಪ್ರತಿನಿಧಿಗಳಾದ ನಿಂಗಪ್ಪ ನಲವಡೆ. ಜಿ.ಎಚ್. ಮಲ್ಲಾಪೂರೆ, ಮಂಜುಳಾ ಪಾಟೀಲ. ಶಂಕರ ಗಯ್ಯಾಳಿ, ಈರಣ್ಣ ಸಂಕನ್ನವರ ಉಪನ್ಯಾಸಕರಾದ ಆಯ್.ಕೆ.ಮಠಪತಿ, ಎಂ.ಗಿರೀಶ, ಜಿ.ಜಿ.ಲಮಾಣಿ, ಸಿ.ಬಿ.ಕಾರಭಾರಿ ಉಪಸ್ಥಿತರಿದ್ದರು. ಪ್ರಾಚಾರ್ಯ ಎಂ.ಎಚ್.ಪಾಟೀಲ ಸ್ವಾಗತಿಸಿದರು ಗಾಯಿತ್ರಿ ಹಿರೇಮಠ ನಿರೂಪಿಸಿದರು.