ಮನೆಯಲ್ಲಿ ಪಾಲಕರು ಶಿಕ್ಷಕರಾಗಬೇಕು: ಮಠದ

ಲೋಕದರ್ಶನ ವರದಿ

ನಿಪ್ಪಾಣಿ 31:  ಮನೆಯಲ್ಲಿ ಪಾಲಕರು ಶಿಕ್ಷಕರಾಗಬೇಕು, ಶಾಲೆಯಲ್ಲಿ ಶಿಕ್ಷಕರು ಪಾಲಕರಂತಿರಬೇಕು ಅಂದಾಗ ಮಾತ್ರ ಶೈಕ್ಷಣಿಕ ಗುಣಮಟ್ಟವನ್ನು ಪರಿಣಾಮಕಾರಿಯಾಗಿ ಹೆಚ್ಚಿಸಲು ಸಾಧ್ಯವೆಂದು ನಿಪ್ಪಾಣಿಯ ಬಿಇಓ ರೇವತಿ ಮಠದ ಅಭಿಪ್ರಾಯಪಟ್ಟರು.

ಇತ್ತೀಚೆಗೆ ಸಮೀಪದ ಜತ್ರಾಟ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಜರುಗಿದ 2019-20ನೇ ಸಾಲಿನ ವಾಷರ್ಿಕ ಸ್ನೇಹ ಸಮ್ಮೇಳನ 'ಜ್ಞಾನ ತರಂಗ' ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.

ಮನೆಯಲ್ಲಿ ಮಕ್ಕಳು ಪಾಲಕರನ್ನೇ ಹೆಚ್ಚಾಗಿ ಅನುಕರಣೆ ಮಾಡುವುದರಿಂದಾಗಿ ಪಾಲಕರು ಮೊದಲು ಮೊಬೈಲ್ ಗೀಳಿನಿಂದ ಹೊರಬೇಕಿದೆ ಎಂದರು.

ಅತಿಥಿಗಳಾಗಿ ಪಾಲ್ಗೊಂಡಿದ್ದ ನಿಪ್ಪಾಣಿಯ ಜಿ.ಆಯ್.ಬಾಗೇವಾಡಿ ಮಹಾವಿದ್ಯಾಲಯದ ಪ್ರಾಧ್ಯಾಪಕ ಪ್ರೊ.ಕುಮಾರ ತಳವಾರ ಮಾತನಾಡಿ, ಶಾಲೆಗಳಲ್ಲಿ ಇರುವ ಕೊರತೆಗಳನ್ನು ಲೆಕ್ಕಿಸದೇ ಸೇವೆ ಸಲ್ಲಿಸುತ್ತಿರುವ ಗಡಿಕನ್ನಡ ಶಾಲೆಗಳ ಶಿಕ್ಷಕರ ಶ್ರಮ ಶ್ಲಾಘನೀಯವಾಗಿದೆ. ಈ ಹಿಂದಿನ ಸರಕಾರವು ಸರಕಾರಿ ಇಂಗ್ಲೀಷ್ ಮಾಧ್ಯಮ ಶಾಲೆಗಳನ್ನು ಪ್ರಾರಂಭಿಸಿದ್ದು ದುಡುಕಿನ ನಿಧರ್ಾರವಾಗಿದ್ದು, ಒಂದು ಭಾಷೆಯನ್ನು ಒಂದು ಮಾಧ್ಯಮವಾಗಿ ಕಲಿಸುವುದಕ್ಕೂ, ಒಂದು ಭಾಷೆಯಾಗಿ ಕಲಿಸುವುದಕ್ಕೂ ಇರುವ ಅಂತರವನ್ನು ಅರಿಯದ ತಿಳಿಗೇಡಿ ಶಿಕ್ಷಣ ತಜ್ಞರು ನಮ್ಮಲ್ಲಿರುವುದು ದುದರ್ೈವದ ಸಂಗತಿ ಎಂದರು.

ಇಂಚಲಕರಂಜಿಯ ಪ್ರಾಧ್ಯಾಪಕ ಕುಮಾರ ಕಾಂಬಳೆ ಮಾತನಾಡಿ, ಮಗು ಗಭರ್ಾವಸ್ಥೆಯಲ್ಲಿರುವಾಗಿನಿಂದ ಸರಕಾರ ಕಾಳಜಿ ವಹಿಸುತ್ತಿದೆ ಆದರೆ ಪಾಲಕರು ಏಕೆ ಮಗುವಿನತ್ತ ಚಿತ್ತ ಹರಿಸುತ್ತಿಲ್ಲ, ಮಗುವಿನ ಶಿಕ್ಷಣದ ವಿಷಯದಲ್ಲಿ ಶಿಕ್ಷಕರಿಗಿರುವಷ್ಟೇ ಜವಾಬ್ದಾರಿ ಪಾಲಕರಿಗೂ ಇರುತ್ತದೆ ಎಂದರು. 

ದ್ವೀಪ ಪ್ರಜ್ವಲನೆಯ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಪ್ರಧಾನ ಗುರುಮಾತೆ ಸುರೇಖಾ ತಳವಾರ ವಾಷರ್ಿಕ ವರದಿ ವಾಚಿಸಿದರು. ಎಸ್ಡಿಎಂಸಿ ಅಧ್ಯಕ್ಷ ಮಹಾದೇವ ಫಟಿಂಗ್, ಗ್ರಾ.ಪಂ. ಅಧ್ಯಕ್ಷೆ ನೀಲಂ ಜಬಡೆ, ಬಾಬಾಸೋ ಖೋಕಾಟೆ, ಪ್ರಶಾಂತ ಪಾಟೀಲ, ಶಿವಾಜಿ ರಾನಮಾಳೆ, ರೋಹಣ ಭಿವಶಿ, ಸುಜಾತಾ ಕಾಂಬಳೆ, ಸಾಧನಾ ಮಾನೆ, ಸುನಂದಾ ವಾಯ್. ಸ್ಮಿತಾ ಶಿಂಧೆ, ಸೇರಿದಂತೆ ವಿದ್ಯಾಥರ್ಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು. 

    ಜಯಶ್ರೀ ಕಿಲಾರೆ ಮತ್ತು ಸಂಗಡಿಗರು ಪ್ರಾಥರ್ಿಸಿದರು. ಕಾಂತ್ಯಾಯಣಿ ಪಾಟೀಲ ಸ್ವಾಗತಿಸಿದರು. ನಾಝನೀನ ಮುಲ್ಲಾ ನಿರೂಪಿಸಿದರು. ಲಕ್ಷ್ಮಿಕಾಂತ ಘೋಡಗೆರೆ ವಂದಿಸಿದರು.