26 ರಿಂದ ಮೂರು ದಿನಗಳ ಕಾಲ ಪಾಂಡುರಂಗ ರುಕ್ಮಾಯಿ ದೇವರ ದಿಂಡಿ ಉತ್ಸವ
Pandurang Rukmai Devara Dindi Utsav for three days from 26th
ರಾಣಿಬೆನ್ನೂರ 26: ಪಾಂಡುರಂಗ ರುಕ್ಮಾಯಿ ದೇವರ ದಿಂಡಿ ಉತ್ಸವವು ಎ 26 ರಿಂದ 28 ವರೆಗೆ ಮೂರು ದಿನಗಳ ಕಾಲ ದೇವರಗುಡ್ಡ ರಸ್ತೆಯ ಪಾಂಡುರಂಗ ರುಕ್ಮಾಯಿ ದೇವಸ್ಥಾನದಲ್ಲಿ ಜರುಗಲಿದೆ ಎಂದು ನಾಮದೇವ ಸಮಾಜದ ಅಧ್ಯಕ್ಷ ಪ್ರವೀಣ ಎಸ್ ಕೋಪರ್ಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಎ26 ರಂದು ಸಂಜೆ 6-00 ಗಂಟೆಗೆ ಪೋತಿ ಸ್ಥಾಪನೆಯು ಕೃಷ್ಣಪ್ಪ ಕೋಪರ್ಡೆ ಹಾಗೂ ಸಂತ ಮಹೋದಯರಿಂದ ಜರುಗುವುದು. ಸಂಜೆ 7-30 ರಿಂದ 9-00 ರವರೆಗೆ ಭಜನೆ, ಕೀರ್ತನೆ ನಡೆಯುವುದು.
ಎ27 ಸೋಮವಾರ ದಂದು ಬೆಳ್ಳಿಗ್ಗೆ 5-00 ಗಂಟೆಗೆ ಕಾಕಡಾರತಿ ಭಜನೆ, ಮತ್ತು 6-30 ರಿಂದ 9-00 ರವರೆಗೆ ಮಹಾ ಗಣಪತಿ, ಪಾಡುರಂಗ ರುಕ್ಮಾಯಿ ಹಾಗೂ ತುಳಜಾ ಭವಾನಿ ದೇವರಿಗೆ ಅಭಿಷೇಕ ಮತ್ತು ಪೂಜಾ ವಿಧಾನಗಳು ನಡೆಯುವವು. ನಂತರ ಸಂತರಿಂದ ಭಜನೆ ಕಾರ್ಯಕ್ರಮ ನಡೆಯುವುದು. ಅಂದು ಸಂಜೆ 6-00 ಗಂಟೆಯಿಂದ 8-00 ಗಂಟೆಯವರೆಗೆ ಕೀರ್ತನೆ ಕಾರ್ಯಕ್ರಮವನ್ನು ಪಂಡರಾಪುರದ ಯಶವಂತ ಪ್ರಭಾಕರ ಬುವಾ ಬೋದಲೆ ಮಹಾರಾಜರು ನಡೆಸಿಕೊಡುವರು ಈ ವೇಳೆ ಹೆಸರಾಂತ ಮೃದಂಗಕಾರರು, ಗಾಯಕರು, ಹಾಗೂ ಸಂತ ಮಹಾಂತರು ಆಗಮಿಸುವರು.
ಎ.28 ಮಂಗಳವಾರ ದಂದು ಬೆಳ್ಳಿಗ್ಗೆ 8-30ಕ್ಕೆ ಪಾಂಡುರಂಗ ರುಕ್ಮಾಯಿ ಪಾಲಕಿ ಉತ್ಸವವು ನಗರದ ಪ್ರಮುಖ ರಾಜಬೀದಿಗಳಲ್ಲಿ ಸಂಚರಿಸಿ ದೇವಸ್ಥಾನಕ್ಕೆ ಬಂದು ತಲುಪುವುದು. ನಂತರ ಸಂತ ಪೂಜಾ, ಮಹಾ ಮಂಗಳಾರತಿ, ಸಂತರ ಕೀರ್ತನೆ ನಡೆಯಲಿದೆ. ಮಧ್ಯಾಹ್ನ 1-30 ಕ್ಕೆ ಅನ್ನ ಸಂತರೆ್ಣ ಕಾರ್ಯಕ್ರಮವಿದ್ದು, ಸರ್ವ ಸಮಾಜದ ಭಕ್ತರು ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಕೋಪರ್ಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 