ಸಹಸ್ರ ಭಕ್ತರ ಸಂಭ್ರಮದೊಂದಿಗೆ ನಡೆದ ಶ್ರೀ ಸೋಮನಾಥನ ಮಹಾರಥೋತ್ಸವ
Shri Somnath Maharathotsava celebrated with enthusiasm by thousands of devotees
ಲೋಕದರ್ಶನ ವರದಿ
ಲಕ್ಷ್ಮೇಶ್ವರ" 26: ಪಟ್ಟಣದ ಇತಿಹಾಸ ಪ್ರಸಿದ್ಧ ಶ್ರೀ ಸೋಮನಾಥ ದೇವಸ್ಥಾನದ ಮಹಾ ರಥೋತ್ಸವವು ಭಾನುವಾರ ಸಂಜೆ ಸಹಸ್ರ ಸಹಸ್ರ ಭಕ್ತರ ಸಂಭ್ರಮದೊಂದಿಗೆ ಅದ್ದೂರಿಯಾಗಿ ನಡೆಯಿತು ಅಪಾರಭಕ್ತರು ಶ್ರೀ ಸೋಮನಾಥನ ಮಹಾರಥೋತ್ಸವಕ್ಕೆ ಉತ್ತತ್ತಿ ಬಾಳೆಹಣ್ಣು ಎಸೆದು ತಮ್ಮ ಭಕ್ತಿಯನ್ನು ಸಮರ್ಿಸಿದರು ಮಹಾ ರತೋತ್ಸವಕ್ಕೆ ಜಿಲ್ಲೆಯಿಂದ ಮಾತ್ರವಲ್ಲದೆ ಬೇರೆ ಬೇರೆ ಜಿಲ್ಲೆಗಳಿಂದಲೂ ಸಹ ಸೋಮನಾಥನ ಅಪಾರಭಕ್ತರು ಬೆಳಗ್ಗೆಯಿಂದಲೇ ಆಗಮಿಸಿ ಶ್ರೀ ಸೋಮನಾಥನಿಗೆ ಪೂಜೆ ಸಲ್ಲಿಸಿ ಆಶೀರ್ವಾದ ಪಡೆಯುವುದರೊಂದಿಗೆ ಮಹಾ ರಥೋತ್ಸವದಲ್ಲಿ ಪಾಲ್ಗೊಂಡಿದ್ದರು. ಮಹಾ ರಥೋತ್ಸವದ ಅಂಗವಾಗಿ ಶ್ರೀ ಸೋಮೇಶ್ವರ ದೇವಸ್ಥಾನ ಕಮಿಟಿ ಜಾತ್ರಾ ಕಮಿಟಿ ಭಕ್ತರ ಕಮಿಟಿ ಹಾಗೂ ಪಟ್ಟಣದ ಸೋಮೇಶ್ವರನ ಭಕ್ತರು ಮುಖಂಡರು ಮಹಾರಥೋತ್ಸವದಲ್ಲಿ ಯಾವುದೇ ತೊಂದರೆ ಆಗದಂತೆ ಸೂಕ್ತ ಕ್ರಮ ಕೈಗೊಂಡಿದ್ದರು ಇದಕ್ಕೆ ಪೊಲೀಸರು ಸಹ ಸಾತ್ ನೀಡಿದ್ದರು ಮಹಾರಥೋತ್ಸವದ ಪೂರ್ವದಲ್ಲಿ ಬಿಸಿಲಿನ ತಾಪದಿಂದ ಕಗ್ಗಟ್ಟಿದ್ದ ಜನರಿಗೆ ಅಲ್ಪ ಪ್ರಮಾಣದಲ್ಲಿ ಆದ ಮಳೆಯಿಂದ ತುಸು ತಂಪೆರೆದಂತಾಗಿತ್ತು ನಾಳೆ ಸಂಜೆ ಕಡುಬಿನ ಕಾಳು ಉತ್ಸವ ಮಂಗಳವಾರ ಓಕಳಿ ಕಾರ್ಯಕ್ರಮ ಜರಗುವುದು
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 