ಪಂಡಿತ ಭೋಸಲೆ ಜನ್ಮದಿನಾಚರಣೆ: ಗಾಲಿಖುರ್ಚಿ ವಿತರಣೆ
Pandit Bhosale Birthday Celebration: Distribution of Wheelchairs
ಚಿಮ್ಮಡ 13: ಜಗದಾಳ ಗ್ರಾಮದ ಕಾಂಗ್ರೆಸ್ ಮುಖಂಡರಾದ ಪಂಡಿತ ಭೋಸಲೆಯವರು ತಮ್ಮ ಜನ್ಮದಿನಾಚರಣೆ ನಿಮಿತ್ತ ಚಿಮ್ಮಡ, ಜಗದಾಳ, ಆಸಂಗಿ ಗ್ರಾಮಗಳ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟೀನೀಡಿ ಗಾಲಿಖುರ್ಚಿ ಹಾಗೂ ಬಡ ಬಾಣಂತಿಯರಿಗೆ ಆರೋಗ್ಯ ಕಿಟ್ ವಿತರಿಸಿದರು.
ಜನ್ಮದಿನಾಚರಣೆಯ ನಿಮಿತ್ತ ಮಂಗಳವಾರ ಮುಂಜಾನೆ ಸ್ಥಳಿಯ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ. ನಂತರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಅಗತ್ಯವಿದ್ದ ಗಾಲಿಖುರ್ಚಿಯನ್ನು ವೈದ್ಯಾಧಿಕಾರಿ ಡಾ. ಅಶೋಕ ಪಡಸಾಲಿ, ಡಾ. ಕೆ,ಎಸ್, ತಳ್ಳಿಯವರಿಗೆ ಹಸ್ತಾಂತರಿಸಿದರು ನಂತರ ಗ್ರಾಮದ ಬಡ ಬಾನಂತಿಯರಿಗೆ ಆರೋಗ್ಯ ಕಿಟ್ ವಿತರಿಸುವ ಮೂಲಕ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದರು.
ಗ್ರಾಮದ ಕಾಂಗ್ರೆಸ್ ಮುಖಂಡ ಮಹಾಲಿಂಗ ಮಾಯನ್ನವರ, ಸಲೀಮ ಸರಕಾವಸ, ಇಮಾಮ ಯಾದವಾಡರವರು ಪಂಡಿತ ಭೋಸಲೆಯವರನ್ನು ಸತ್ಕರಿಸುವ ಮೂಲಕ ಶುಭಾಶಯ ಕೋರಿದರು ಕೆಪಿಸಿಸಿ ಸದಸ್ಯ ಬಸವರಾಜ ಕೊಕಟನೂರ, ಅಡಿವೆಪ್ಪ ಪಾಟೀಲ,ಎಪಿಎಂಸಿ ಸದಸ್ಯ ಚಂದ್ರಶೇಖರ ಕುರಿ, ಜಗದಾಳ ಗ್ರಾ.ಪಂ. ಮಾಜಿ ಅಧ್ಯಕ್ಷ ಸುರೇಶ ಅಸ್ಕಿ, ರವಿಂದ್ರ ಗೊಬ್ಬಾಣಿ, ಸದಾಶಿವ ದಡ್ಡಿಮನಿ, ಕೆ.ಎಂ.ಎಫ್ ಅಧ್ಯಕ್ಷ ಶ್ರೀಶೈಲ ಪಾಟೀಲ, ಉಪಾಧ್ಯಕ್ಷ ದಾನಯ್ಯ ಮಠದ, ಕಾಶಪ್ಪ ಕಬಾಡಗಿ, ಮಹದೇವ ತೇರದಾಳ ಸೇರಿದಂತೆ ಹಲವಾರು ಜನ ಪ್ರಮುಖರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 