ಪಂಚಮಸಾಲಿ ಹೋರಾಟಕ್ಕೆ 30 ವರ್ಷಗಳ ಇತಿಹಾಸವಿದೆ: ಶಾಸಕ ನಿರಾಣಿ

Panchmasali struggle has a history of 30 years: MLA Nirani

ಬೀಳಗಿ16:- ಲಿಂಗಾಯತ ಪಂಚಮಸಾಲಿ ಸಮಾಜ 2ಎ ಮೀಸಲಾತಿ ಕೊಡಬೇಕೆಂದು ಕಳೆದ 30 ವರ್ಷಗಳಿಂದ ಹೋರಾಟ ನಡೆಸುತ್ತಿದೆ. ಇದು ಈಚಿಗೆ ಹುಟ್ಟಿಕೊಂಡ ಹೋರಾಟ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿಕೆ ಸರಿಯಾದದ್ದಲ್ಲ. ಪಂಚಮಸಾಲಿ ಸಮಾಜ ಕೃಷಿಕರ ಕೃಷಿ ಕೂಲಿಕಾರರ  ಭೂಮಿ ತಾಯಿಯ ಮಕ್ಕಳ ಸಮಾಜವಾಗಿದೆ. ಬೆಳಗಾವಿಯಲ್ಲಿ ಈಚಿಗೆ ನಡೆದ ಪ್ರತಿಭಟನೆಯ ಕಾಲಕ್ಕೆ ಸಮಾಜದ ಕಾರ್ಯಕರ್ತರ ಮೇಲೆ ಮೇಲೆ ಲಾಠಿ ಪ್ರಹಾರ ಮಾಡಿದ್ದನ್ನು ಬಲವಾಗಿ ಖಂಡಿಸುತ್ತೇನೆ ಎಂದು ವಿಧಾನ ಪರಿಷತ್ ಶಾಸಕರಾದ ಹಣಮಂತ ನಿರಾಣಿ ವಿಧಾನ ಪರಿಷತ್ತಿನ್ನ ಪ್ರಶ್ನೋತ್ತರ ಕಾಲದಲ್ಲಿ ಹೇಳಿದರು. 

ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಬೇಕು ಎಂದು ಮೊದಲು ಸಭೆ 8.8.1994 ರಲ್ಲಿ ಯಲಬುರ್ಗಾದಲ್ಲಿ ನಡೆಯಿತು. ಆಗ ಶಾಸಕರಾಗಿದ್ದ ಎಸ್‌.ಆರ್‌.ಕಾಶಪ್ಪನವರ ಮತ್ತು ಎಸ್‌.ಎಸ್‌.ಪಾಟೀಲ್ ಈ ಹೋರಾಟದ ನೇತೃತ್ವ ವಹಿಸಿದ್ದರು. 2 ಲಕ್ಷಕೂ ್ಕಅಧಿಕ ಜನ ಈ ಸಭೆಯಲ್ಲಿ ಸೇರಿದ್ದರು. ಈ ಬೇಡಿಕೆಯನ್ನು ಆಗ ಮುಖ್ಯಮಂತ್ರಿ ಆಗಿದ್ದ ವೀರ​‍್ಪ ಮೊಯ್ಲಿ ಅವರ ಗಮನಕ್ಕೆ ತರಲಾಯಿತು. ಆಗ ಸಮಾಜದ ಮುಖಂಡರಾದ ಬಾವಿ ಬೆಟ್ಟಪ್ಪ ಮತ್ತು ಬಸವ ಸಿಂಧೂರ್ ಸಮಾಜ ಸಂಘಟನೆಯ ಮುಖಂಡರಾಗಿದ್ದರು ಎಂದು ಹನುಮಂತ ನಿರಾಣಿ ಅವರು ಹೋರಾಟ ಬೆಳೆದು ಬಂದ ಕಥೆಯನ್ನು  ಸಾದರ ಪಡಿಸಿದರು. 

ಸಮಾಜ ಬಾಂಧವರು ಪಾದಯಾತ್ರೆಯ ಮೂಲಕ ಅನೇಕ ಬಾರಿ ಪ್ರತಿಭಟನೆ ಮಾಡಿದ್ದಾರೆ. ರಸ್ತೆ ತಡೆ ಮಾಡಿದ್ದಾರೆ. ಸರಕಾರಕ್ಕೆ ಮನವಿ ಪತ್ರಗಳನ್ನು ನೀಡಿದ್ದಾರೆ.ಈ ಎಲ್ಲ ಹೋರಾಟಗಳು ಶಾಂತಿಯುತವಾಗಿ ನಡೆದಿವೆ. ಕೂಡಲಸಂಗಮದ ಜಯ ಮೃತ್ಯುಂಜಯ ಸ್ವಾಮೀಜಿಯವರ ನೇತೃತ್ವದಲ್ಲಿ ನಡೆಯುತ್ತಿರುವ ಪಂಚಮಸಾಲಿ ಸಮಾಜದ ಹೋರಾಟಕ್ಕೆ ತಾತ್ವಿಕ ನೆಲೆ ಇದೆ. ಇದು ಪಕ್ಷಾತೀತ ಹೋರಾಟವಾಗಿದೆ. ಸುಮಾರು 80 ಲಕ್ಷ ಬಾಂಧವರು ಕರ್ನಾಟಕ ದತುಂಬಾ ಹರಡಿದ್ದಾರೆ. ನ್ಯಾಯ ಒದಗಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದರು.