ಮೊದಲ ವರ್ಷದ ಸಾಧನೆ ಕುರಿತು ಕರಪತ್ರ ಬಿಡುಗಡೆ

ಲೋಕದರ್ಶನವರದಿ

ಬ್ಯಾಡಗಿ08: ವಿಶ್ವದಲ್ಲಿ ಅತ್ಯಂತ ಪ್ರಭಾವಿ ನಾಯಕರಾಗಿ ಹೊಮ್ಮಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆಡಳಿತದ ಕಾರ್ಯವೈಖರಿಗೆ ಜಗತ್ತೇ ಪ್ರಶಂಸೆ ವ್ಯಕ್ತಪಡಿಸಿದ್ದು, ಸಿಎಎ, ಆಟರ್ಿಕಲ್ 370, ಆಯುಷ್ಮಾನ್ ಭಾರತ, ರಾಮ ಮಂದಿರ ಸೇರಿದಂತೆ ಕೊರೋನಾ ಸಂಕಷ್ಟದಲ್ಲಿ ದೇಶದ ಆಥರ್ಿಕತೆಯನ್ನು ಬಲಪಡಿಸಲು ನಿಟ್ಟಿನಲ್ಲಿ 20 ಲಕ್ಷ ಕೋಟಿ ರೂಗಳ ವಿಶೇಷ ಪ್ಯಾಕೇಜ ಯೋಜನೆಯ ಘೋಷಣೆಯು ಇಡೀ ದೇಶದ ಜನರ ಮನಸ್ಸು ಗೆಲ್ಲುವಂತಾಗಿದೆ ಎಂದು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಹೇಳಿದರು. 

        ಸ್ಥಳೀಯ ಬಿಜೆಪಿ ಕಾಯರ್ಾಲಯದಲ್ಲಿ ರವಿವಾರ ಏರ್ಪಡಿಸಲಾಗಿದ್ದ ಪತ್ರಿಕಾ ಗೋಷ್ಠಿಯಲ್ಲಿ ಕೇಂದ್ರ ಸಕರ್ಾರದ ಎರಡನೆ ಅವಧಿಯ ಮೊದಲ ವರ್ಷದ ಸಾಧನೆ ಕುರಿತು ಕರಪತ್ರಗಳನ್ನು ಬಿಡುಗಡೆಗೊಳಿಸಿ ನಂತರ ಮಾತನಾಡಿದ ಅವರು, ದೇಶದಲ್ಲಿ ಸತತ ಎರಡನೇ ಬಾರಿಗೆ ಸ್ಪಷ್ಟ ಬಹುಮತದ ಪಡೆಯುವ ಮೂಲಕ ಪ್ರಧಾನಿಯಾಗಿರುವ ನರೇಂದ್ರ ಮೋದಿ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಅಭಿವೃದ್ಧಿಗೆ ಮುನ್ನುಡಿ ಬರೆದಿದ್ದಾರೆ. 

 ಬಡಜನರ ಕುಟುಂಬಗಳಿಗೆ ಉಜ್ವಲ ಯೋಜನೆಯಡಿ ಉಚಿತ ಗ್ಯಾಸ್ ಸಿಲೆಂಡರ್ ಸಂಪರ್ಕ, ಸ್ವಚ್ಛ ಭಾರತ ಯೋಜನೆ, ತ್ರಿವಳಿ ತಲಾಖ್ ಜಾರಿ ಮಾಡುವ ಮೂಲಕ ಮಹತ್ತರ ಸಾಧನೆಗೈದಿದ್ದಾರೆ. ಕೊರೋನಾ ಸಂದರ್ಭದಲ್ಲಿ ಉಂಟಾಗಿರುವ ಆಥರ್ಿಕ ಸಂಕಷ್ಟವನ್ನು ಬಲಪಡಿಸುವ ಉದ್ದೇಶದಿಂದ 20 ಲಕ್ಷ ಕೋಟಿ ರೂಗಳ ವಿಶೇಷ ಪ್ಯಾಕೇಜನ್ನು ಘೋಷಿಸಿ, ಯಾವುದೇ ಕ್ಷೇತ್ರವನ್ನು ಕಡೆಗಣಿಸದೆ ಎಲ್ಲ ಕ್ಷೇತ್ರಗಳಿಗೂ ಆದ್ಯತೆ ನೀಡಿದ್ದಾರೆ ಎಂದು ತಿಳಿಸಿದರು. 

        ರೈತರ ಪರವಾಗಿ ಉತ್ತಮ ಯೋಜನೆಯನ್ನು ರೂಪಿಸಿ ಜಾರಿಗೆ ತಂದ ನರೇಂದ್ರ ಮೋದಿ ಯವರು ಪ್ರಧಾನಮಂತ್ರಿ ಕೃಷಿ ಸಮ್ಮಾನ ಯೋಜನೆಯ ಮೂಲಕ ಕೇಂದ್ರ ಸಕರ್ಾರ ದಿಂದ 6 ಸಾವಿರ ರೂ ಹಾಗೂ ರಾಜ್ಯ ಸಕರ್ಾರ ದಿಂದ 4 ಸಾವಿರ ರೂ, ಸೇರಿ 10 ಸಾವಿರ ರೂಗಳ ಸಹಾಯ ಧನ ರೈತರಿಗೆ ಸೇರುವಂತಾಗಿದೆ. 

    ರೈತರ ಸ್ವಾಭಿಮಾನಿ ಬದುಕಿಗೆ ಕೇಂದ್ರ ಸಕರ್ಾರ ಸದಾ ನೆರವನ್ನು ನೀಡಲು ಕ್ರಮ ವಹಿಸಿದೆ ಎಂದ ಅವರು ಕೇಂದ್ರ ಹಾಗೂ ರಾಜ್ಯ ಸಕರ್ಾರಗಳು ಜನಪರ ಆಡಳಿತಕ್ಕೆ ಹಲವಾರು ಯೋಜನೆಗಳನ್ನು ಅನುಷ್ಠಾನಕ್ಕೆ ತರುವ ಪ್ರಯತ್ನ ನಡೆಸಿದ್ದು, ಅದರಲ್ಲಿ ಬಹಳಷ್ಟು ಯಶಸ್ಸನ್ನು  ಮೋದಿಯವರು ಕಂಡಿದ್ದಾರೆ ಎಂದು ಹೇಳಿದರು. 

      ಈ ಸಂದರ್ಭದಲ್ಲಿ ತಾಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಯಲ್ಲನಗೌಡ ಕರೇಗೌಡ್ರ, ತಾಲೂಕಾ ಬಿಜೆಪಿ ಅಧ್ಯಕ್ಷ ಸುರೇಶ ಆಸಾದಿ, ಪ್ರಧಾನ ಕಾರ್ಯದಶರ್ಿಗಳಾದ ಶಿವಯೋಗಿ ಶಿರೂರ, ಪ್ರವೀಣ ಸವಣೂರ, ಪುರಸಭಾ ಸದಸ್ಯರಾದ ಬಸವರಾಜ ಛತ್ರದ, ಶಿವಯೋಗಿ ಅಂಗಡಿ, ಮುಖಂಡರಾದ ಮುರಿಗೆಪ್ಪ ಶೆಟ್ಟರ, ಶಂಕ್ರಪ್ಪ ಮಾತನವರ, ಶಿವಬಸಪ್ಪ ಕುಳೇನೂರ, ವೀರೇಂದ್ರ ಶೆಟ್ಟರ, ಸಂಜೀವ ಮಡಿವಾಳರ, ವಿಷ್ಣು ಬೆನ್ನೂರ, ಕೊಟ್ರೇಶ ಸೊಪ್ಪಿನಮಠ, ಸುರೇಶ ಚಲುವಾದಿ, ಶಿವು ಗಡಾದ, ಅರುಣ ಪಾಟೀಲ ಸೇರಿದಂತೆ ಇತರರು ಉಪಸ್ಥಿತರಿದ್ದರು.