ಪಾಲ್ಘರ್ : ಸರಣಿ ಭೂಕಂಪ

ಪಾಲ್ಘರ್, ಅ 24:    ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ಬುಧವಾರ ರಾತ್ರಿ ಕನಿಷ್ಠ ಆರು ಭೂಕಂಪನ ಸಂಭವಿಸಿದೆ ಎಂದು ಅಧಿಕಾರಿಗಳು ಗುರುವಾರ ಮಾಹಿತಿ ನೀಡಿದ್ದಾರೆ. ಬುಧವಾರ ರಾತ್ರಿ 09: 44 ಗಂಟೆಯಿಂದ 10:06ರ ನಡುವೆ ನಡುಕ ಉಂಟಾಗಿದೆ ಎಂದು ವರದಿಗಳು ತಿಳಿಸಿವೆ.  ಕಂಪನದಿಂದ ಯಾವುದೇ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿಗೆ ಹಾನಿಯಾಗಿಲ್ಲ ಎಂದು ಜಿಲ್ಲಾ ವಿಪತ್ತು ನಿಯಂತ್ರಣ ವಿಭಾಗದ ಮುಖ್ಯಸ್ಥ ವಿವೇಕಾನಂದ ಕದಮ್ ಯುಎನ್ಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. ಕಂಪನದ ಸಮಯ ಮತ್ತು ಪ್ರಮಾಣವನ್ನು ವಿವರಿಸಿದ ವರದಿಗಳು, ರಿಕ್ಟರ್ ಮಾಪಕದಲ್ಲಿ 2.1 ರ ತೀವ್ರತೆಯ ಮೊದಲ ಭೂಕಂಪನ 09 : 44 ರಲ್ಲಿ ಸಂಭವಿಸಿದೆ. ಆನಂತರ 2.4, 2.2, 2.5, 2.9, 2.6, ಮತ್ತು 1.9 ಕಂಪನಗಳು ಕ್ರಮವಾಗಿ 2149, 2152, 2154, 2157, 2158 ಮತ್ತು 2206 ಗಂಟೆಗಳಲ್ಲಿ ನಡೆದಿದೆ ಎಂದು ವರದಿಗಳು ತಿಳಿಸಿವೆ.