ಧಾರವಾಡ - ಬೆಳಗಾವಿ ರೈಲು ಮಾರ್ಗ ರೇಲ್ವೆ ಟ್ರಾಕ್ ಪುನರ್ ಪರೀಶೀಲಿಸಲು ಮನವಿ

ಧಾರವಾಡ - ಬೆಳಗಾವಿ ರೈಲು ಮಾರ್ಗ ರೇಲ್ವೆ ಟ್ರಾಕ್ ಪುನರ್ ಪರೀಶೀಲಿಸಲು ಮನವಿ Request for reconsideration of Dharwad - Belgaum railway track

ಲೋಕದರ್ಶನ ವರದಿ 

ಧಾರವಾಡ 13 : ಧಾರವಾಡ ದಿಂದ ಬೆಳಗಾವಿ ನಗರಕ್ಕೆ ಕಿತ್ತೂರು ಮುಖಾಂತರ ಹೋಗುವ ರೇಲ್ವೆ ಮಾರ್ಗ ಆಗಬೇಕೆಂಬ ಈ ಭಾಗದ ಜನರ ಬಹುದಿನಗಳ ಕನಸು ಇಡೇರಿಸಿದ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಧನ್ಯವಾದಗಳು ಆದರೆ ಈ ಪ್ರಾರಂಭದ ಯೋಜನೆಯು ಚಿಕ್ಕಮಲ್ಲಿಗವಾಡ ಕರ್ನಾಟಕ ಗೃಹ ಮಂಡಳಿ ಮತ್ತು ಆಯ್‌.ಆಯ್‌.ಟಿ ಯಂತಹ ಪ್ರತಿಷ್ಠಿತ ಸಂಸ್ಥೆಗಳಿದ್ದು ಮುಮ್ಮಿಗಟ್ಟಿಯ ಹಾಗೂ ಬೇಲೂರು ಹೆಗ್ಗೇರಿ ಕೋಟೂರು ಶಿಗನಹಳ್ಳಿ ಈ ಎಲ್ಲ ಗ್ರಾಮಗಳಲ್ಲಿ ಕೈಗಾರಿಕೆ ಪ್ರದೇಶವಾಗಿದ್ದು ರೇಲ್ವೆ ಟ್ರಾಕ್ ಮಾರ್ಗ ಅವೈಜ್ಞಾನಿಕವಾಗಿದ್ದರಿಂದ ಈ ಭಾಗದ ಜನರು ರೈತರು ಕೈಗಾರಿಕೆ ಉದ್ಯಾಮಿಗಳ ವಿರೋಧವಿದ್ದು ಯೋಜನೆಯ ರೇಲ್ವೆ ಟ್ರಾಕ್ ಪುನರ್ ಪರೀಶೀಲಿಸಿ ಕೈಗಾರಿಕ ಪ್ರದೇಶವಾಗಿದ್ದರಿಂದ ಹೊರ ಭಾಗದಿಂದ ಯೋಜನೆ ರೂಪಿಸಲು ನುರಿತ ತಜ್ಞರನ್ನು ನೇಮಿಸಬೇಕು  

ಈ ಭಾಗದ ತಾಂತ್ರಿಕ ಹಾಗೂ ತಾಂತ್ರಿಕೇತರ ಯುವಕರು ಉದ್ಯೋಗ ಅರಿಸಿ ಬೆಂಗಳೂರು ಮತ್ತು ಇನ್ನಿತರೆ ನಗರಕ್ಕೆ ಹೋಗುತ್ತಿದ್ದರು. ಇತ್ತಿಚಿನ ವರ್ಷಕ್ಕೆ ಕೈಗಾರಿಕೆಗಳು ಬಂದು ಯುವ ಜನರಿಗೆ ಉದ್ಯೋಗ ಸಿಗುವಂತಾಗಿದೆ. ಕಾರಣ ತಾವುಗಳು ರೈತರು ಕೈಗಾರಿಕಾ ಉದ್ಯಮಿಗಳು ಹಿತ ಕಾಪಾಡಬೇಕೆಂಬುದು ವೈಜ್ಞಾನಿಕವಾಗಿ ಮಾರ್ಗವನ್ನು ತೋರಿಸಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ. ಈ ಸಂದರ್ಭದಲ್ಲಿ  ವೀರಯ್ಯಾ ಗುರುವಯ್ಯಾ ಚಿಕ್ಕಮಠ, ಶ್ರೀಶೈಲಗೌಡ ಕಮತರ, ಶಿವು ಬೆರಳದ, ಮಂಜು ಗೋಕಾವಿ, ಪರಮೇಶ ಚ ಅಂಗಡಿ, ಚಂದ್ರು ತಲ್ಲೂರ, ಬಸವರಾಜ ಮರಿತೆಮ್ಮನವರ, ಮಂಜು ಚಂದನಮಟ್ಟಿ, ಮಂಜು ಚಂದನಮಟ್ಟಿ, ಬಾಳಪ್ಪ ಕಡತಾಳ, ಕರಿಯಪ್ಪ ಗಂಡಗುದರಿ, ಮಲ್ಲಪ್ಪ ಶಿರಮಣ್ಣವರ, ವಿಠ್ಠಲ ಬಿರಗಾರ ಸಮಸ್ತ ರೈತ ಬಾಂಧವರು ಗ್ರಾಮದ ಗುರು-ಹಿರಿಯರು ಉಪಸ್ಥಿತರಿದ್ದರು.