ಫಿರೋಜ್ಪುರ, ಅ 22 : ಪಂಜಾಬ್ ನ ಹುಸಾನಿವಾಲಾ ಸೆಕ್ಟರ್ನಲ್ಲಿ ಭದ್ರತಾ ಪಡೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲು ಬಂದಿದ್ದ ಮೂರು ಪಾಕಿಸ್ತಾನಿ ಡ್ರೋನ್ಗಳನ್ನು ಭದ್ರತಾ ಪಡೆಗಳು ಪಾಕ್ ವೈಮಾನಿಕ ಪ್ರದೇಶಕ್ಕೆ ಹಿಮ್ಮೆಟಿಸಲಾಗಿದೆ.
ಮಾಹಿತಿಯ ಪ್ರಕಾರ, ಭಾರತ-ಪಾಕಿಸ್ತಾನ ಗಡಿಯಲ್ಲಿ ಮೂರು ಡ್ರೋನ್ಗಳು ಹಾರಾಟ ನಡೆಸುತ್ತಿರುವುದು ಸೋಮವಾರ ತಡರಾತ್ರಿ ಫಿರೋಜ್ಪುರದ ಹುಸೇನ್ವಾಲಾ ಸೆಕ್ಟರ್ನ ಉದ್ದಕ್ಕೂ ಕಂಡು ಬಂದಿದ್ದು, ಭಾರತೀಯ ವಾಯುಪ್ರದೇಶ ಪ್ರವೇಶಿಸಲು ಯತ್ನಿಸಿವೆ.
ಪಾಕಿಸ್ತಾನದ ಡ್ರೋನ್ಗಳು ಭಾರತೀಯ ವಾಯುಪ್ರದೇಶದತ್ತ ಹಾರಾಟ ಆರಂಭಿಸುತ್ತಿದ್ದಂತೆ, ಬಿಎಸ್ಎಫ್ ಪಡೆಗಳು ಅವುಗಳತ್ತ ಗುಂಡು ಹಾರಿಸಿವೆ. ಬಳಿಕ ಡ್ರೋನ್ಗಳು ಪಾಕಿಸ್ತಾನ ವಾಯುಪ್ರದೇಶದತ್ತ ವಾಪಸ್ಸಾಗಿವೆ. ಪಾಕಿಸ್ತಾನದ ಡ್ರೋನ್ಗಳು ಭಾರತೀಯ ವಾಯುಪ್ರದೇಶಕ್ಕೆ ಪ್ರವೇಶಿಸಿದ ನಾಲ್ಕನೇ ಘಟನೆ ಇದಾಗಿದೆ. ಈ ಹಿಂದೆ ಡ್ರೋನ್ಗಳನ್ನು ತಾನರ್್ ತರಣ್, ಅಮೃತಸರ ಮತ್ತು ಫಿರೋಜ್ಪುರ ಜಿಲ್ಲೆಗಳಲ್ಲಿನ ಗಡಿಯುದ್ದಕ್ಕೂ ಗುರುತಿಸಲಾಗಿತ್ತು. ಪಾಕಿಸ್ತಾನದಿಂದ ಕಾರ್ಯನಿರ್ವಹಿಸುತ್ತಿರುವ ಖಾಲಿಸ್ತಾನ್ ಜಿಂದಾಬಾದ್ ಪಡೆ ಸೇರಿದಂತೆ ಉಗ್ರ ಸಂಘಟನೆಗಳ ಜಾಲಗಳು ಮಾರಕ ಆಯುಧಗಳನ್ನು ಪಡೆಯಲು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಡ್ರೋನ್ಗಳನ್ನು ಬಳಸುತ್ತಿತ್ತು.