ಸ್ಪಾಟ್‌ ಫಿಕ್ಸಿಂಗ್: ಪಾಕಿಸ್ತಾನ ಕ್ರಿಕೆಟಿಗ ನಾಸಿರ್ ಜಮಶೆದ್‌ಗೆ 17 ತಿಂಗಳು ಜೈಲು

ನವದೆಹಲಿ, ಫೆ 8, ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಪಾಕ್ ಕ್ರಿಕೆಟಿಗರಿಗೆ ಲಂಚ ನೀಡಲು ಸಂಚು ರೂಪಿಸಿದ್ದಕ್ಕಾಗಿ ಪಾಕಿಸ್ತಾನದ ಬ್ಯಾಟ್ಸ್‌ಮನ್ ನಾಸಿರ್ ಜಮ್‌ಶೆದ್‌ಗೆ ಶುಕ್ರವಾರ (ಫೆಬ್ರವರಿ 7) 17 ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿದೆ.ರಾಷ್ಟ್ರೀಯ ಅಪರಾಧ ಸಂಸ್ಥೆ (ಎನ್‌ಸಿಎ) ನಡೆಸಿದ ತನಿಖೆಯ ನಂತರ ಈ ಮೂವರು ಪಿತೂರಿಯಲ್ಲಿ ತಮ್ಮ ಪಾತ್ರಗಳನ್ನು ಒಪ್ಪಿಕೊಂಡಿದ್ದಾರೆ. ನಾಸಿರ್‌ ಜಮ್‌ಶೆದ್‌ ಅವರನ್ನು ಬ್ರಿಟಿಷ್ ಪ್ರಜೆಗಳಾದ ಯೂಸೆಫ್ ಅನ್ವರ್ ಮತ್ತು ಮೊಹಮ್ಮದ್ ಇಜಾಜ್ ಅವರೊಂದಿಗೆ ಬಂಧಿಸಲಾಯಿತು. ನಾಸಿರ್ ಜಮ್‌ಶೆದ್‌ 17 ತಿಂಗಳು, ಅನ್ವರ್‌ಗೆ 40 ತಿಂಗಳು, ಇಜಾಜ್‌ಗೆ 30 ತಿಂಗಳು ಶಿಕ್ಷೆ ವಿಧಿಸಲಾಯಿತು.ಕಳೆದ 2018ರ ಫೆಬ್ರವರಿಯಲ್ಲಿ ದುಬೈನಲ್ಲಿ ನಡೆದ ಪಾಕಿಸ್ತಾನ ಸೂಪರ್ ಲೀಗ್ ಟೂರ್ನಿಯಲ್ಲಿ ಇಸ್ಲಾಮಬಾದ್ ಯುನೈಟೆಡ್‌ ಮತ್ತು ಪೇಶಾವರ್ ಝಾಲ್ಮಿ ತಂಡಗಳ ನಡುವಿನ ಪಂದ್ಯದಲ್ಲಿ ಸ್ಪಾಟ್‌ ಫಿಕ್ಸಿಂಗ್ ಆರೋಪವನ್ನು ಈ ಮೂವರು ಒಪ್ಪಿಕೊಂಡಿದ್ದಾರೆ.

ತನಿಖೆಯ ಸಮಯದಲ್ಲಿ 2016ರ ಕೊನೆಯಲ್ಲಿ ಬಾಂಗ್ಲಾದೇಶ ಪ್ರೀಮಿಯರ್ ಲೀಗ್ ಪಂದ್ಯವನ್ನು ಸರಿಪಡಿಸುವ ಪ್ರಯತ್ನವನ್ನು ಪೊಲೀಸ್ ಅಧಿಕಾರಿಯೊಬ್ಬರು ಬಹಿರಂಗಪಡಿಸಿದ್ದರು. ಅವರು ಭ್ರಷ್ಟ ಬೆಟ್ಟಿಂಗ್ ಸಿಂಡಿಕೇಟ್‌ನ ಸದಸ್ಯರಾಗಿ ಕಂಡುಬಂದಿದ್ದರು. ಈ ವೇಳೆ ಜಮ್‌ಶೆದ್ ಅವರನ್ನು ಆರಂಭದಲ್ಲಿ ಎರಡು-ಡಾಟ್-ಬಾಲ್ ಮಾಡುವಂತೆ ಗುರಿಯಾಗಿಸಲಾಗಿತ್ತು. ನಂತರ, ಅದನ್ನು ಹಿಂತೆಗೆದುಕೊಳ್ಳಲಾಗಿತ್ತು. ಜಮ್‌ಶೆದ್‌ ಪಾಕಿಸ್ತಾನ ಪರ ಎರಡು ಟೆಸ್ಟ್‌, 48 ಏಕದಿನ ಹಾಗೂ 18 ಟಿ-20 ಪಂದ್ಯಗಳಾಡಿದ್ದಾರೆ. ಇದೇ ಪ್ರಕರಣ ಸಂಬಂಧ ನಾಸಿರ್ ಜಮ್‌ಶೆದ್‌ ಅವರನ್ನು 10 ವರ್ಷಗಳ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಕಳೆದ ವರ್ಷವೇ ಅಮಾನತು ಶಿಕ್ಷೆ ವಿಧಿಸಿತ್ತು.