ಶ್ರೀರಾಮ ದೇಗುಲದ ಬಗ್ಗೆ ಪ್ರಶ್ನಿಸುವ ಯಾವುದೇ ಅಧಿಕಾರ ಪಾಕಿಸ್ತಾನಕ್ಕಿಲ್ಲ: ಭಾರತ

ನವದೆಹಲಿ, ಮೇ 29, ಅಯೋಧ್ಯೆಯಲ್ಲಿ ಶ್ರೀರಾಮ ದೇವಾಲಯದ ನಿರ್ಮಾಣವು ಸಂಪೂರ್ಣವಾಗಿ ದೇಶದ ಆಂತರಿಕ ವ್ಯವಹಾರವಾಗಿದ್ದು, ಈ ಕುರಿತು ಪ್ರಶ್ನಿಸುವ ಯಾವುದೇ ಅಧಿಕಾರ ಪಾಕಿಸ್ತಾನಕ್ಕಿಲ್ಲ ಎಂದು ಭಾರತ ಸ್ಪಷ್ಟಪಡಿಸಿದೆ.ಉತ್ತರಪ್ರದೇಶದ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕುರಿತು ಪಾಕಿಸ್ತಾನದ ಅಭಿಪ್ರಾಯ ಅಸಂಬದ್ಧವಾದುದು ಎಂದು ನೆರೆಯ ದೇಶಕ್ಕೆ ವಿದೇಶಾಂಗ ಸಚಿವಾಲಯ ತಿರುಗೇಟು ನೀಡಿದೆ.  ದೇವಾಲಯದ ನಿರ್ಮಾಣವನ್ನು ಪ್ರಾರಂಭಿಸಲು 2019 ನವೆಂಬರ್ 9 ರಂದು ಭಾರತೀಯ ಸುಪ್ರೀಂ ಕೋರ್ಟ್ ನೀಡಿದ ತೀರ್ಪು ವಿವಾದದ  ಮುಂದುವರಿದ ಭಾಗವಾಗಿದೆ, ಇದು ನ್ಯಾಯದ ಬೇಡಿಕೆಗಳನ್ನು ಎತ್ತಿಹಿಡಿಯುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ" ಎಂದು ಪಾಕಿಸ್ತಾನ ಇತ್ತೀಚೆಗೆ ಹೇಳಿಕೆ ನೀಡಿತ್ತು.