ವಿಜಯಪುರ 16: ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎ.ವಿ.ಎಸ್ಆಯುರ್ವೇದ ಮಹಾವಿದ್ಯಾಲಯದಲ್ಲಿ ಜನೇವರಿ 20 ರಿಂದ ಜನೇವರಿ 25ರ ವರೆಗೆ ಆರು ದಿನಗಳ ಕಾಲ ಉಚಿತ ಅಪೌಷ್ಠಿಕತೆ / ಕಾರ್ಶ್ಯ(Underweight) ತಪಾಸಣೆ ಹಾಗೂ ಉಚಿತ ಚಿಕಿತ್ಸೆ ಶಿಬಿರ ಆಯೋಜಿಸಲಾಗಿದೆ.
ಸಾಮಾನ್ಯ ಲಕ್ಷಣಗಳಾದ ಕಡಿಮೆ ದೇಹದತೂಕ, ತೇಳುವಾದ ತೋಳುಗಳು ಮತ್ತು ಕಾಲುಗಳು, ಆಯಾಸ, ಬೌಧಿಕ ಬೆಳವಣಿಗೆಯಲ್ಲಿ ಕುಂಠಿತ ಮುಂತಾದ ಅಪೌಷ್ಠಿಕತೆಯ ತೊಂದರೆಗಳಿಂದ ಬಳಲುವ ಮಕ್ಕಳಿಗೆ ಈ ಶಿಬಿರದಲ್ಲಿ ಉಚಿತ ಆರೋಗ್ಯ ತಪಾಸಣೆ, ಮಾಪನ (ತೂಕ.ಎತ್ತರBMI, SKIN, THICKNESS) ಮುಂತಾದ ತಪಾಸಣೆ ಮತ್ತು ಉಚಿತ ಓಷಧ ನೀಡಲಾಗುವುದು.
ಈ ಶಿಬಿರ ನಿಗದಿತ ದಿನಗಳಂದು ಬೆಳಿಕ್ಗೆ 9 ರಿಂದ ಸಂಜೆ 4 ಗಂಟೆಯವರೆಗೆ ನಡೆಯಲಿದೆ. ಸಾರ್ವಜನಿಕರು ಈ ಉಚಿತ ತಪಾಸಣೆ ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಎಂದು ಕಾಲೇಜಿನ ಪ್ರಾಚಾರ್ಯ ಡಾ.ಸಂಜಯ ಕಡ್ಲಿಮಟ್ಟಿ ಅವರು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಮತ್ತು ಪೂರ್ವ ನೋಂದಣಿಗಾಗಿಡಾ. ದೌಲಬಿ ಎಂ. ಚೌಧರಿ, ಮೊಬೈಲ್ ಸಂಖ್ಯೆ- 8197378138 ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.