ಜಿಲ್ಲಾಧಿಕಾರಿಗಳಿಂದ ಕ್ಯಾಲೆಂಡರ್ ಬಿಡುಗಡೆ

Calendar released by District Collector

ಜಿಲ್ಲಾಧಿಕಾರಿಗಳಿಂದ ಕ್ಯಾಲೆಂಡರ್ ಬಿಡುಗಡೆ 

ಹಾವೇರಿ 16:  ಪ್ರವಾಸೋದ್ಯಮ ಇಲಾಖೆಯಿಂದ ಜಿಲ್ಲೆಯ ಪುರಾತನ ಮತ್ತು ಐತಿಹಾಸಿಕ ದೇವಾಲಯಗಳ ಆಕರ್ಷಕವಾದ ಛಾಯಾಚಿತ್ರ ಹಾಗೂ ಕಿರು ಪರಿಚಯದೊಂದಿಗೆ ಮುದ್ರಿಸಲಾದ  2025-ಕ್ಯಾಲೆಂಡರ್‌ನ್ನು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ  ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಅವರು ಬಿಡುಗಡೆಗೊಳಿಸಿದರು. 

ಜಿಲ್ಲೆಯ ಪ್ರವಾಸಿ ತಾಣಗಳನ್ನು ರಾಜ್ಯ, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಪಡಿಸಲು ನೂತನ ಕ್ಯಾಲೆಂಡರ್ -2025 ಬಿಡುಗಡೆಗೊಳಿಸಲಾಗಿದೆ. ಈ ಕ್ಯಾಲೆಂಡರ್‌ನ್ನು  ಎನ್‌.ಐ.ಸಿ ಣಣಠಿ://ಚಿತಜಡಿ.ಟಿಛಿ.ಟಿ ಹಾಗೂ  ಪ್ರವಾಸೋದ್ಯಮ ಇಲಾಖೆಯ ಜಾಲತಾಣ ಣಣಠಿ://ಞಚಿಡಿಟಿಚಿಣಚಿಞಚಿಣಠಡಿಟ.ಠರ ದಲ್ಲಿ ಉಚಿತವಾಗಿ ಪಡೆಯಬಹುದಾಗಿದೆ ಎಂದು ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.