ಲಂಡನ್, ಮೇ 17,ಜಾಗತಿಕ ಸಾಂಕ್ರಾಮಿಕ ರೋಗವಾಗಿ ಮಾರ್ಪಟ್ಟಿರುವ ಕೊರೊನಾ ವೈರಸ್‌ನ ಭೀತಿಯ ಹೊರತಾಗಿಯೂ ಕ್ರಿಕೆಟ್ ಸರಣಿಗೆ ಪಾಕಿಸ್ತಾನಕ್ಕೆ ಆತಿಥ್ಯ ವಹಿಸಲು ಇಂಗ್ಲೆಂಡ್ ಸಿದ್ಧವಾಗಿದೆ.ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಮತ್ತು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಇತ್ತೀಚಿಗೆ ಸರಣಿಗಾಗಿ ಮಾತುಕತೆ ನಡೆಸಿವೆ. ಅದರ ನಂತರ ಪಿಸಿಬಿ ಪ್ರವಾಸದ ಬಗ್ಗೆ ಸಾಕಷ್ಟು ಆಶಾವಾದಿಯಾಗಿ ಕಾಣುತ್ತದೆ. ಇಸಿಬಿಯ ಆಶ್ವಾಸನೆಯ ನಂತರ ಎರಡು ಮಂಡಳಿಗಳು ತಾತ್ವಿಕವಾಗಿ ಒಪ್ಪಿಕೊಂಡಿವೆ. ಈ ಪ್ರವಾಸದಲ್ಲಿ ಆಡಲು ಪಾಕಿಸ್ತಾನಕ್ಕೆ ಮೂರು ಟೆಸ್ಟ್ ಮತ್ತು ಮೂರು ಟಿ 20 ಪಂದ್ಯ ಆಡಬೇಕಿವೆ.ಪಾಕಿಸ್ತಾನ ಮಂಡಳಿಗೆ ತನ್ನ ಆಟಗಾರರು ಇಂಗ್ಲೆಂಡ್‌ಗೆ ಇಳಿಯುವಾಗ ಅವರನ್ನು ಅತ್ಯಂತ ಸುರಕ್ಷಿತ ವಾತಾವರಣದಲ್ಲಿರಿಸಲಾಗುವುದು ಎಂದು ಇಸಿಬಿ ಭರವಸೆ ನೀಡಿದೆ. ಪಾಕಿಸ್ತಾನ ತಂಡವನ್ನು ಜುಲೈ ಆರಂಭದಲ್ಲಿ ವಿಶೇಷ ವಿಮಾನಗಳ ಮೂಲಕ ಇಂಗ್ಲೆಂಡ್‌ಗೆ ಕಳಿಸಲಾಗುವುದು. ಈ ಪ್ರವಾಸದ ಆರಂಭದಲ್ಲಿ ಪಾಕ್ ಆಟಗಾರರು ಗೃಹ ಬಂಧನದಲ್ಲಿ ಇರಿಸಲಾಗುವುದು.
ಆಗಸ್ಟ್ ಆರಂಭದಲ್ಲಿ ಟೆಸ್ಟ್ಗಳು ಪ್ರಾರಂಭವಾಗಲಿವೆ. ಪಿಸಿಬಿ ಮುಖ್ಯ ಕಾರ್ಯನಿರ್ವಾಹಕ ವಾಸಿಮ್ ಖಾನ್ ಇಸಿಬಿಯ ಯೋಜನೆಗೆ ಸಮ್ಮತಿಸಿದ್ದು, ಕ್ರಿಕೆಟ್ ಪ್ರಾರಂಭಿಸಲು ಉತ್ತೇಜನ ನೀಡುತ್ತಿದೆ ಎಂದು ಹೇಳಿದ್ದಾರೆ.