ಪಿಯುಸಿ ರಾ​‍್ಯಂಕ್ ವಿದ್ಯಾರ್ಥಿಗಳಿಗೆ ಸನ್ಮಾನ

PUC rank students felicitated

ಲೋಕದರ್ಶನ ವರದಿ 

  

ಪಿಯುಸಿ ರಾ​‍್ಯಂಕ್ ವಿದ್ಯಾರ್ಥಿಗಳಿಗೆ ಸನ್ಮಾನ 

ಹುಬ್ಬಳ್ಳಿ  17:ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ, ಬಸವ ಪರಿಸರ ಸಂರಕ್ಷಣಾ ಸಮಿತಿಯ ವತಿಯಿಂದ ಆಯೋಜಿಸಿದ್ದ ಪಿಯುಸಿ ರಾ​‍್ಯಂಕ್ ವಿದ್ಯಾರ್ಥಿಗಳಿಗೆ ಗೌರವ ಸನ್ಮಾನ ಕಾರ್ಯಕ್ರಮದಲ್ಲಿ ಪಿಯುಸಿ ಕಲಾ ವಿಭಾಗದಲ್ಲಿ ರಾಜ್ಯಕ್ಕೆ 4 ನೇ ಸ್ಥಾನ, ಜಿಲ್ಲೆಗೆ ಮೊದಲನೇ ಸ್ಥಾನ ಪಡೆದ ಇನೆಷ್ಕಾ ನಡುಗಡ್ಡಿ ಹಾಗೂ ರಾಜ್ಯಕ್ಕೆ 5 ನೇ ಸ್ಥಾನ ಪಡೆದ ನಾಗವೇಣಿ ರಾಯಚೂರ ಅವರಿಗೆ ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಸದಸ್ಯರು  ಶಾಲು, ಗ್ರಂಥ ನೀಡಿ, ಮಾಲಾರೆ​‍್ಣ ಮಾಡಿ ಅತ್ಯಂತ ಸಂತೋಷ, ಪ್ರೀತಿಯಿಂದ ಹೃದಯಸ್ಪರ್ಶಿಯಾಗಿ ಗೌರವಿಸಿದರು. 


 ಅವರ ಸಾಧನೆಗೆ ಹೆಮ್ಮೆ, ಅಭಿಮಾನದ ಅಭಿನಂದನೆಗಳನ್ನು ಸಲ್ಲಿಸಿದರು. ಮುಂದಿನ ದಿನಗಳಲ್ಲಿ ಅವರು ಇನ್ನೂ ಹೆಚ್ಚು ಸಾಧನೆ ಮಾಡಲಿ ಎಂದು ಶುಭ ಕೋರಿದರು. ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಕಾರ್ಯದರ್ಶಿ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ‌್ಯದರ್ಶಿ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕದ ಉಪಾಧ್ಯಕ್ಷ, ಕರ್ನಾಟಕ ವಚನ ಸಾಹಿತ್ಯ ಪರಿಷತ್‌ನ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ, ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ ಟ್ರಸ್ಟಿ,  ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ ಅವರು ಸ್ವಾಗತಿಸಿ, ನಿರೂಪಿಸಿದರು. 

 ಜೈಂಟ್ಸ ಗ್ರುಪ್ ಆಫ್ ಹುಬ್ಬಳ್ಳಿ ಸಹೇಲಿ ಅಧ್ಯಕ್ಷರೇಖಾ ಚಿನಿವಾಲ, ಹಿಂದಿನ ಅಧ್ಯಕ್ಷ ಭಾರತಿ ವಾಲಿ, ವೈದ್ಯಡಾ. ಬಸವಕುಮಾರ ತಲವಾಯಿ,  ರೇಣುಕಾ ದೇಸಾಯಿ, ಇನೆಷ್ಕಾ ಅವರ ಅಜ್ಜ ಹೇಮಂತಕಿರಣ ಗುಂಡ್ಮಿ, ಅಜ್ಜಿ ಪ್ರಸನ್ನ ಗುಂಡ್ಮಿ, ತಾಯಿ ಪ್ರಾಂಜಲಾ ನಡುಗಡ್ಡಿ, ಅಣ್ಣ ಹೆಬೇಲ್ ನಡುಗಡ್ಡಿ, ತಂಗಿ ಕ್ರಿಸ್ಟಿನಾ ನಡುಗಡ್ಡಿ, ಹಾಗೂ ನಾಗವೇಣಿ  ಅವರ ಚಿಕ್ಕಮ್ಮ ಭಾಗ್ಯಲಕ್ಷ್ಮೀ ದೊಡ್ಡಮನಿ, ಮುಂತಾದವರು ಭಾಗವಹಿಸಿದ್ದರು. 

 ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ ಅವರು ಇನೆಷ್ಕಾ ಹಾಗೂ ನಾಗವೇಣಿ ಅವರ ಸಾಧನೆಗೆ ಮುಕ್ತ ಕಂಠದಿಂದ ಪ್ರಶಂಸೆ ವ್ಯಕ್ತಪಡಿಸಿದರು.  ಮಕ್ಕಳು ಮೋಬೈಲ್ ಹಾಗೂ ಇನ್ನೀತರ ತಂತ್ರಜ್ಞಾನ ಪರಿಕರಗಳನ್ನು ತಮ್ಮ ವಿದ್ಯಾಭ್ಯಾಸಕ್ಕೆ ಬಳಸಿಕೊಳ್ಳಬೇಕು. ಮಕ್ಕಳು ಓದುವುದನ್ನು ರೂಡಿಸಿಕೊಳ್ಳಬೇಕು.       ಇಟ್ಟುಕೊಂಡು ವಿದ್ಯಾ ಸಂಪಾಧನೆಯಲ್ಲೇ ಇರಬೇಕು. ನಿರಂತರ ಪರಿಶ್ರಮ, ಓದು, ಶಿಸ್ತು, ಸಂಯಮ, ಕಲಿಕೆಗೆ ಹೆಚ್ಚು ಒತ್ತು ನೀಡಿದಾಗ ಆಘಾದ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದರು. ಇನೆಷ್ಕಾ ಹಾಗೂ ನಾಗವೇಣಿ ಅವರ ಮುಂದಿನ ವಿದ್ಯಾರ್ಥಿ ಜೀವನ ಇನ್ನೂ ಹೆಚ್ಚು ಶ್ರೇಯಸ್ಸು ತರುವಂತಾಗಲಿ ಎಂದು ಶುಭ ಕೋರಿದರು.