ಕಂಟೈನ್‌ಮೆಂಟ್‌ ‌ವಲಯಗಳಲ್ಲಿ ಕರ್ತವ್ಯದಲ್ಲಿರುವ ಪೊಲೀಸರಿಗೆ ಪಿಪಿಇ ಕಿಟ್‌ ಕಡ್ಡಾಯ: ಬೊಮ್ಮಾಯಿ

ಬೆಂಗಳೂರು,  ಮೇ 26,ಲಾಕ್‌ಡೌನ್‌ ಹಿನ್ನೆಲೆಯಲ್ಲಿ ನಗರ ಹಲವೆಡೆ ಹಾಕಿರುವ ಚೆಕ್‌ಪೋಸ್ಟ್‌ಗಳು ಮತ್ತು ಕಂಟೈನ್‌ಮೆಂಟ್‌ ‌ವಲಯಗಳಲ್ಲಿ ಕೆಲಸ ಮಾಡುವ ಪೊಲೀಸ್‌  ಸಿಬ್ಬಂದಿ ಮತ್ತು ಅವರ ಸಂಬಂಧಿಕರಿಗೆ ಕಡ್ಡಾಯವಾಗಿ ಕೋವಿಡ್‌ 19 ಪರೀಕ್ಷೆ ಮಾಡಬೇಕು  ಎಂದು ಅಧಿಕಾರಿಗಳಿಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದ್ದಾರೆ.ಪೊಲೀಸ್ ಸಿಬ್ಬಂದಿಗೆ  ಹತ್ತಿಯ ಕೈಗವಸು, ಮಾಸ್ಕ್‌, ವೈಪರ್‌ ಸಹಿತ ಹೆಡ್‌ವೈಸರ್‌, ಪಿಪಿಇ ಕಿಟ್‌ ನೀಡಬೇಕು.

ಈ  ಮೂಲಕ ಪೊಲೀಸ್ ಸಿಬ್ಬಂದಿಗೆ ಅಗತ್ಯ ರಕ್ಷಣಾ ಸಾಮಗ್ರಿ ನೀಡುವಂತೆ  ಅವರು  ಸೂಚಿಸಿದ್ದಾರೆ.14 ಪೊಲೀಸರಿಗೆ ಕೊರೋನಾ ಸೋಂಕು ತಗುಲಿರುವ  ಹಿನ್ನೆಲೆಯಲ್ಲಿ ಗೃಹ ಇಲಾಖೆಗೆ ಹೊಸ ಸವಾಲು ಎದುರಾಗಿದೆ, ಈ 14 ಪೊಲೀಸರ ಜೊತೆ ಪ್ರಾಥಮಿಕ  ಸಂಪರ್ಕ ಹೊಂದಿದ್ದ 585 ಮಂದಿಯನ್ನು ಕ್ವಾರಂಟೈನ್ ಗೆ ಒಳಪಡಿಸಲಾಗಿದೆ.ನಾಲ್ಕು  ಪೊಲೀಸ್ ಕುಟುಂಬ ಸದಸ್ಯರು ಮತ್ತು ಪೊಲೀಸರಿಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ 134  ಮಂದಿಯನ್ನು ಕ್ವಾರಂಟೈನ್ ಗೆ ಒಳಪಡಿಸಲಾಗಿದೆ. ದಕ್ಷಿಣ ಕನ್ನಡದಲ್ಲಿ ಮೂರು ಪೊಲೀಸ್  ಠಾಣೆಯನ್ನು ಸೀಲ್ ಡೌನ್ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಗೃಹ ಸಚಿವರು ಈ ಕ್ರಮಕ್ಕೆ ಸೂಚಿಸಿದ್ದಾರೆ.