ಕೋಲ್ಕತಾ, ನವೆಂಬರ್ 4: ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಸಂಜೆ 4 ಗಂಟೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ನಗರದ ಬಿಸ್ವಾ ಬಾಂಗ್ಲಾ ಕನ್ವೆನ್ಷನ್ ಸೆಂಟರ್ನಲ್ಲಿ ಆಯೋಜಿಸಿರುವ 5 ನೇ ಭಾರತ ಅಂತಾರಾಷ್ಟ್ರೀಯ ವಿಜ್ಞಾನ ಮೇಳಕ್ಕೆ ಚಾಲನೆ ನೀಡಲಿದ್ದಾರೆ. ವಿಜ್ಞಾನ ಮೇಳವನ್ನು ನವೆಂಬರ್ 5-8ರವರೆಗೆ ನಾಲ್ಕು ದಿನಗಳ ಕಾಲ ಆಯೋಜಿಸಲಾಗಿದೆ. ಜನಸಾಮಾನ್ಯರಲ್ಲಿ ವೈಜ್ಞಾನಿಕ ಮನೋಭಾವವನ್ನು ಮೂಡಿಸುವುದು, ಎಸ್ ಆಂಡ್ ಟಿ ಕ್ಷೇತ್ರದಲ್ಲಿ ಭಾರತದ ಸಾಧನೆಯನ್ನು ಅನಾವರಣ ಮಾಡುವುದು ಹಾಗೂ ಜನರಿಗೆ ಅದರ ಪ್ರಯೋಜನಗಳನ್ನು ತಿಳಿಸಿಕೊಡುವುದು ಈ ಮೇಳದ ಉದ್ದೇಶವಾಗಿದೆ. ವಿಜ್ಞಾನ ಮತ್ತು ತಂತ್ರಜ್ಞಾನದ ಅಂತರ್ಗತ ಪ್ರಗತಿಗೆ ಒಂದು ಕಾರ್ಯತಂತ್ರ ರೂಪಿಸುವ ಗುರಿಯನ್ನು ಕೂಡ ಈ ಮೇಳ ಹೊಂದಿದೆ. ವಿಜ್ಞಾನ ಮತ್ತು ತಂತ್ರಜ್ಞಾನ, ಭೂ ವಿಜ್ಞಾನ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಮತ್ತು ಸಚಿವ ಸಂಪುಟದ ಹಲವು ಮಂತ್ರಿಗಳು ಮತ್ತು ರಾಜ್ಯ ಸಚಿವರು, ಗಣ್ಯರು, ವಿಜ್ಞಾನಿಗಳು, ಶಿಕ್ಷಣ ತಜ್ಞರು ಮತ್ತು ಸರ್ಕಾರಿ ಅಧಿಕಾರಿಗಳು ನಾಲ್ಕು ದಿನಗಳ ಈ ಮೇಳದಲ್ಲಿ ಪಾಲ್ಗೊಳ್ಳಲಿದ್ದಾರೆ. ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಂಬಂಧಿತ ಸಚಿವಾಲಯಗಳು, ವಿಜ್ಞಾನ ಭಾರತಿ (ವಿಭಾ) ಇಲಾಖೆಗಳು ಜಂಟಿಯಾಗಿ ಆಯೋಜಿಸಿರುವ ವಾರ್ಷಿಕ ಕಾರ್ಯಕ್ರಮವಾದ ಭಾರತ ಅಂತಾರಾಷ್ಟ್ರೀಯ ವಿಜ್ಞಾನ ಉತ್ಸವ (ಐಐಎಸ್ಎಫ್) 2019, ಈ ವರ್ಷ ಕೋಲ್ಕತ್ತಾದಲ್ಲಿ ನಡೆಯುತ್ತಿದೆ. ಐಐಎಸ್ಎಫ್ 2019 ಭಾರತದ ವೈಜ್ಞಾನಿಕ ಮತ್ತು ತಾಂತ್ರಿಕ ಪ್ರಗತಿಯ ಸಾಧನೆಗಳನ್ನು ವಿದ್ಯಾರ್ಥಿಗಳು, ನಾವೀನ್ಯಕಾರರು, ಕುಶಲಕರ್ಮಿಗಳು, ರೈತರು, ವಿಜ್ಞಾನಿಗಳು ಮತ್ತು ಭಾರತ ಮತ್ತು ವಿದೇಶದ ತಂತ್ರಜ್ಞರೊಂದಿಗೆ ಆಚರಿಸುವ ಹಬ್ಬವಾಗಿದೆ. ರೈಸನ್ ಇಂಡಿಯಾ - ಸಂಶೋಧನೆ, ನಾವೀನ್ಯತೆ ಮತ್ತು ವಿಜ್ಞಾನ ಸಬಲೀಕರಣ ರಾಷ್ಟ್ರ ಎಂಬುದು ಈ ವರ್ಷದ ಧ್ಯೇಯವಾಕ್ಯವಾಗಿದೆ. ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಭಾರತದ ಸಾಧನೆಗಳನ್ನು ಪ್ರದರ್ಶಿಸಲು ವಿದ್ಯಾರ್ಥಿಗಳು, ಸಂಶೋಧಕರು, ನಾವೀನ್ಯಕಾರರು, ಕಲಾವಿದರು ಮತ್ತು ಸಾರ್ವಜನಿಕರನ್ನು ಒಟ್ಟುಗೂಡಿಸುವ ಐಐಎಸ್ಎಫ್ ದೇಶದ ದೊಡ್ಡ ವೇದಿಕೆಯಾಗಿದೆ. ಈ ಉತ್ಸವದಲ್ಲಿ ಭಾರತ ಮತ್ತು ವಿದೇಶಗಳಿಂದ ಸುಮಾರು 12,000 ಭಾಗವಹಿಸುವವರು ಭಾಗವಹಿಸಲಿದ್ದಾರೆ. ಕೋಲ್ಕತ್ತಾದ ಬಿಸ್ವಾ ಬಾಂಗ್ಲಾ ಕನ್ವೆನ್ಷನ್ ಸೆಂಟರ್ ಮತ್ತು ಸೈನ್ಸ್ ಸಿಟಿ ಈ ಕಾರ್ಯಕ್ರಮಗಳಿಗೆ ಪ್ರಮುಖ ತಾಣಗಳಾಗಿವೆ. ಸತ್ಯಜಿತ್ ರೇ ಫಿಲ್ಮ್ ಆಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್, ಬೋಸ್ ಇನ್ಸ್ಟಿಟ್ಯೂಟ್ ಮತ್ತು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಕೆಮಿಕಲ್ ಬಯಾಲಜಿ ಕೂಡ ಮೇಳದ ಪ್ರಮುಖ ತಾಣಗಳಾಗಿವೆ. ಈ ಅವಧಿಯಲ್ಲಿ ಉತ್ಸವವು 28 ಕ್ಕೂ ಹೆಚ್ಚು ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ. ಘತಿತಿ.ಛಿಜಟಿಛಿಜಟಿಜಚಿಜಿಜಣ.ಠಡಿರ ನಲ್ಲಿ ವಿವರವಾದ ಮಾಹಿತಿ ಲಭ್ಯವಿದೆ. ಶಾಲಾ ವಿದ್ಯಾರ್ಥಿಗಳಿಗಾಗಿ, ಐಐಎಸ್ಎಫ್ 2019 ರಲ್ಲಿ ವಿದ್ಯಾರ್ಥಿ ವಿಜ್ಞಾನ ಗ್ರಾಮವನ್ನು ಯೋಜಿಸಲಾಗಿದೆ, ಅಲ್ಲಿ ರಾಷ್ಟ್ರದಾದ್ಯಂತ 2500 ಕ್ಕೂ ಹೆಚ್ಚು ಶಾಲಾ ವಿದ್ಯಾರ್ಥಿಗಳನ್ನು ಆಹ್ವಾನಿಸಲಾಗಿದೆ. ಪ್ರಧಾನ್ ಮಂತ್ರಿ ಸಂಸದ ಆದರ್ಶ ಗ್ರಾಮ ಯೋಜನೆಯಡಿ ಪ್ರತಿಯೊಬ್ಬ ಸಂಸತ್ ಸದಸ್ಯರೂ ತಮ್ಮ ಕ್ಷೇತ್ರದಿಂದ ತಮ್ಮ ಶಿಕ್ಷಕರೊಂದಿಗೆ ತಲಾ ಐದು ವಿದ್ಯಾರ್ಥಿಗಳನ್ನು ಗ್ರಾಮದ ಅಭಿವೃದ್ಧಿಗಾಗಿ ನಾಮನಿರ್ದೇಶನ ಮಾಡಲು ಕೋರಲಾಗಿದೆ.