ಸಂಪುಟ ಸಚಿವರ ಬಗ್ಗೆ ಪ್ರಧಾನಿ ಮೋದಿ ಅತೃಪ್ತಿ

  ನವದೆಹಲಿ, 22 - ಸಂಸತ್ತಿನ ಉಭಯ  ಸದನಗಳ  ಪ್ರಶ್ನೋತ್ತರ  ಅವಧಿಯಲ್ಲಿ    ಸಂಪುಟ  ಸಚಿವರ  ಅನುಪಸ್ಥಿತಿಯ  ಬಗ್ಗೆ ಪ್ರಧಾನಿ ಮೋದಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.     ಸಂಪುಟ ಸಭೆಯ ನಂತರ ಲೋಕಸಭೆ ಮತ್ತು ರಾಜ್ಯಸಭೆಯ  ಪ್ರಶ್ನೋತ್ತರ ಕಲಾಪಗಳಲ್ಲಿ  ಕ್ಯಾಬಿನೆಟ್ ಮಂತ್ರಿಗಳ ಅನುಪಸ್ಥಿತಿಯ ಬಗ್ಗೆ ಮೋದಿ  ಬೇಸರ  ವ್ಯಕ್ತಪಡಿಸಿದ್ದಾರೆ ಎಂದು  ಅಧಿಕಾರಿ ಮೂಲಗಳು ತಿಳಿಸಿವೆ.     ಸಂಸದೀಯ  ಕಲಾಪದಲ್ಲಿ   ಪ್ರಶ್ನೋತ್ತರ  ಅವಧಿ  ಅತ್ಯಂತ ಮಹತ್ವ ಪಡೆದುಕೊಂಡಿದೆ.  ಸಕರ್ಾರ  ಕೈಗೊಂಡಿರುವ ಜನೋಪಯೋಗಿ ನಿಧರ್ಾರಗಳನ್ನು  ಸದನದ ಮೂಲಕ ದೇಶದ ಮುಂದಿಡಲು  ಅತ್ಯುತ್ತಮ  ಅವಕಾಶವಾಗಿದ್ದು,   ಸದಸ್ಯರು ಕೇಳುವ ಹಲವು ಪ್ರಶ್ನೆಗಳಿಗೆ  ಪ್ರಮುಖ ವಿಷಯಗಳಲ್ಲಿ ಸಕರ್ಾರದ ನಿಲುವು  ಸ್ಪಷ್ಟ ಪಡಿಸಲು ಬಳಸಿಕೊಳ್ಳಬಹುದಾಗಿದೆ ಎಂದು ಪ್ರಧಾನಿ ಹೇಳಿದ್ದಾರೆ ಎನ್ನಲಾಗಿದೆ.    ಸಮರ್ಥ ಲೆಕ್ಕಪರಿಶೋಧನೆಯಿಂದ ವಂಚನೆಗಳಿಗೆ ತಡೆ;  ವಂಚನೆಯನ್ನು ತಡೆಗಟ್ಟಿ, ಸಕರ್ಾರಿ ಇಲಾಖೆಗಳ  ಕಾರ್ಯಕ್ಷಮತೆ  ಸುಧಾರಿಸಲು ಲೆಕ್ಕಪರಿಶೋಧನೆಯಲ್ಲಿ ಆಧುನಿಕ  ವಿಧಾನಗಳನ್ನು  ಅಳವಡಿಸಿಕೊಳ್ಳಬೇಕು ಪ್ರಧಾನಿ  ಮೋದಿ  ಸಲಹೆ ನೀಡಿದ್ದಾರೆ.    ಇದು ದೇಶವನ್ನು  5 ಟ್ರಿಲಿಯನ್  ಡಾಲರ್ ಆಥರ್ಿಕತೆಯನ್ನಾಗಿಸಲು  ನೆರವು ನೀಡಲಿದೆ ಎಂದರು. ಗುರುವಾರ  ಮಹಾಲೇಖಪಾಲರ  ಸಮಾವೇಶದಲ್ಲಿ  ಪಾಲ್ಗೊಂಡು ಮಾತನಾಡಿದ ಅವರು, " ಅಕ್ರಮಗಳನ್ನು ತೊಲಗಿಸಲು ಆಂತರಿಕ ಮತ್ತು ಬಾಹ್ಯ ಲೆಕ್ಕ ಪರಿಶೋಧಕರು ಹೊಸತನ  ಕಂಡುಕೊಳ್ಳಬೇಕು.   ಸಕರ್ಾರಿ ಇಲಾಖೆಗಳಲ್ಲಿನ ಅಕ್ರಮಗಳನ್ನು ತಡೆಗಟ್ಟಲು ಇತ್ತೀಚಿನ ವರ್ಷಗಳಲ್ಲಿ ಸಾಕಷ್ಟು ಪ್ರಯತ್ನಗಳು ನಡೆಯುತ್ತಿವೆ ಎಂದು ಪ್ರಧಾನಿ  ಹೇಳಿದರು.