ಕೇಂದ್ರ ಬಜೆಟ್ ಗೆ ಜನರ ಸಲಹೆ ಆಹ್ವಾನಿಸಿರುವ ಪ್ರಧಾನಿ ಮೋದಿ

ನವದೆಹಲಿ, ಜ 8,2020-21 ನೇ ಹಣಕಾಸು ವರ್ಷದ ಕೇಂದ್ರ ಬಜೆಟ್ ಕುರಿತು ತಮ್ಮ ಸಲಹೆ, ಕಲ್ಪನೆಗಳನ್ನು ಹಂಚಿಕೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಬುಧವಾರ ದೇಶದ ಜನರಿಗೆ ಆಹ್ವಾನ ನೀಡಿದ್ದಾರೆ.ಕೇಂದ್ರ ಬಜೆಟ್ 130 ಕೋಟಿ ಭಾರತೀಯರ ಆಕಾಕ್ಷೆಗಳ ಪ್ರತೀಕವಾಗಿದ್ದು, ದೇಶವನ್ನು ಅಭಿವೃದ್ದಿಯತ್ತ ಮುನ್ನಡೆಸುವ ಹಾದಿಯನ್ನು ಅಯವ್ಯಯ ನಿರ್ಮಿಸಲಿದೆ. ಹಾಗಾಗಿ ಈ ವರ್ಷದ ಬಜೆಟ್ ಕುರಿತಂತೆ ಸಲಹೆ ಹಾಗೂ ಕಲ್ಪನೆಗಳನ್ನು ಮೈ ಗೌ ಡಾಟ್ ವೇದಿಕೆಯಲ್ಲಿ ಹಂಚಿಕೊಳ್ಳುವಂತೆ ಪ್ರಧಾನಿ ಟ್ವೀಟ್ ನಲ್ಲಿ ಆಹ್ವಾನ ನೀಡಿದ್ದಾರೆ. ಇದಕ್ಕೂ ಮುನ್ನ ಕೇಂದ್ರ ಹಣಕಾಸು ಸಚಿವಾಲಯ ಬಜೆಟ್ ಸಂಬಂಧ ದೇಶದ ಜನರಿಂದ ಸಲಹೆಗಳನ್ನು ಆಹ್ವಾನಿಸಿತ್ತು.ಮುಂಬರಲಿರುವ ಸಂಸತ್ ಅಧಿವೇಶನದಲ್ಲಿ ಮಂಡಿಸಲಾಗುವ 2020-21 ನೇ ಸಾಲಿನ ಕೇಂದ್ರ ಬಜೆಟ್ ಗಾಗಿ ಹಣಕಾಸು ಸಚಿವಾಯಲಯ ದೇಶದ ಜನರ ಸಲಹೆಗಳನ್ನು ಎದುರು ನೋಡುತ್ತಿದೆ. ರೈತರು, ಶಿಕ್ಷಣ ಹಾಗೂ ಇನ್ನಿತರ ವಲಯಗಳಲ್ಲಿ ತಮ್ಮ ಆಮೂಲ್ಯವಾದ ಕಲ್ಪನೆಗಳನ್ನು ಹಂಚಿಕೊಳ್ಳುವಂತೆ ಹಣಕಾಸು ಸಚಿವಾಲಯ ಆಹ್ವಾನ ನೀಡಿತ್ತು.ಕೇಂದ್ರ ಬಜೆಟ್ ಫೆ. 1 ರಂದು ಲೋಕಸಭೆಯಲ್ಲಿ ಮಂಡಿಸುವ ನಿರೀಕ್ಷೆಯಿದೆ.