ಲೋಕದರ್ಶನ ವರದಿ
ಬಸವನಬಾಗೇವಾಡಿ 19: ಸಹಕಾರಿ ಸದಸ್ಯರ ಸಹಕಾರದಿಂದ ಪಿಕೆಪಿಎಸ್ನ ನೂತನ ಕಟ್ಟಡ ನಿಮರ್ಾಣವಾಗಿದ್ದು ಅಗಷ್ಟ 1ರಂದು ನಡೆಯುವ ಲೋಕಾರ್ಪಣೆ ಕಾರ್ಯಕ್ರಮದ ಯಶಸ್ವಿಗೆ ಸರ್ವ ಸದಸ್ಯರ-ಜನತೆಯ ಸಹಕಾರ ಅಗತ್ಯವಾಗಿದೆ ಎಂದು ಸ್ಥಳೀಯ ಪಿಕೆಪಿಎಸ್ ಅಧ್ಯಕ್ಷ ಸಂಗನಗೌಡ ಚಿಕ್ಕೊಂಡ ಹೇಳಿದರು.
ಸ್ಥಳೀಯ ವಿರಕ್ತಮಠದಲ್ಲಿ ನಡೆದ ಪಿಕೆಪಿಎಸ್ನ ನೂತನ ಕಟ್ಟಡ ಲೋಕಾರ್ಪಣೆ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ಸಹಕಾರಿಗಳ ಸಹಭಾಗಿತ್ವದಿಂದ ಪಿಕೆಪಿಎಸ್ ಸ್ವಂತ ಕಟ್ಟಡ ನಿಮರ್ಾಣವಾಗಿದ್ದು ಉದ್ಘಾಟನೆ ಸಮಾರಂಭದಲ್ಲಿ ಸಾಮೂಹಿಕ ವಿವಾಹ, ಪ್ರಗತಿಪರ ರೈತರ ಸನ್ಮಾನ, ಸಂಗೀತ ಕಾರ್ಯಕ್ರಮ ಸೇರಿದಂತೆ ವಿವಿಧ ಕಾರ್ಯಕ್ರಮವನ್ನು ಇದೇ ಅಗಷ್ಟ 1ರಂದು ಬೆಳಗ್ಗೆ 11ಗಂಟೆಗೆ ಸ್ಥಳೀಯ ಗಣೇಶ ನಗರದ ಯಲ್ಲಾಲಿಂಗ ಮಠದ ಆವರಣದಲ್ಲಿ ಆಯೋಜಿಸಿದ್ದು ಕಾರ್ಯಕ್ರಮದ ಯಶಸ್ವಿಗೆ ಎಲ್ಲರೂ ಕೈಜೋಡಿಸಬೇಕೆಂದು ಹೇಳಿದರು.
ವಿಜಯಪುರದ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಮಹಾಸ್ವಾಮೀಜಿ, ವಿರಕ್ತಮಠದ ಮುರುಘೇಂದ್ರ ಮಹಾಸ್ವಾಮೀಜಿ ಅವರ ದಿವ್ಯ ಸಾನಿಧ್ಯದಲ್ಲಿ, ಸ್ಥಳೀಯ ಹಿರೇಮಠದ ಶಿವಪ್ರಕಾಶ ಶಿವಾಚಾರ್ಯ ಮಹಾಸ್ವಾಮೀಜಿ, ವಿರಕ್ತಮಠದ ಸಿದ್ದಲಿಂಗ ಮಹಾಸ್ವಾಮೀಜಿ ಸಮ್ಮುಖದಲ್ಲಿ ಆರೋಗ್ಯ ಸಚಿವರಾದ ಶಿವಾನಂದ ಪಾಟೀಲ, ತೋಟಗಾರಿಕೆ ಸಚಿವ ಎಂ.ಸಿ.ಮನಗೂಳಿ, ಸಹಕಾರಿ ಸಚಿವ ಬಂಡೆಪ್ಪ ಕಾಶೇಂಪೂರ ಸೇರಿದಂತೆ ಮುಂತಾದವರು ಪಾಲ್ಗೊಳ್ಳಲಿದ್ದು ಈಗಾಗಲೇ ದಾಸೋಹ, ಸ್ವಾಗತ, ಕಾರ್ಯಕ್ರಮ, ಸ್ವಚ್ಚತೆ, ಸಾಮೂಹಿಕ ವಿವಾಹ ವಿವಿಧ ಸಮಿತಿಗಳನ್ನು ರಚಿಸಲಾಗಿದೆ ಎಂದು ಹೇಳಿದರು.
ತಹಶೀಲದಾರ ಎಂ.ಎನ್.ಚೋರಗಸ್ತಿ ಮಾತನಾಡಿ ವಿಜಯಪುರದ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಶ್ರೀಗಳು ಆಗಮಿಸುತ್ತಿರುದು ಹಾಗೂ ಸಹಕಾರಿ ಸಂಸ್ಥೆ ಸ್ವಂತ ಕಟ್ಟಡ ಹೊಂದಿದ್ದು ಹೆಮ್ಮೇಯ ಸಂಗತಿಯಾಗಿದ್ದು ಎಲ್ಲರೂ ತಮಗೆ ನೀಡಿದ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಜೊತೆಗೆ ಕಾರ್ಯಕ್ರಮಕ್ಕೆ ತನು-ಮನದಿಂದ ಸಹಕಾರ ನೀಡಬೇಕು, ಸದಸ್ಯರ-ಸಹಕಾರಿಗಳ ಸಹಭಾಗಿತ್ವ ಅತೀ ಮುಖ್ಯವಾಗಿದೆ ಎಂದು ಹೇಳಿದರು.
ವಿರಕ್ತಮಠದ ಸಿದ್ದಲಿಂಗ ಮಹಾಸ್ವಾಮೀಜಿ ಕಾರ್ಯಕ್ರಮದ ಸಾನಿಧ್ಯವಹಿಸಿದ್ದರು, ಬಸವರಾಜ ಗೊಳಸಂಗಿ, ಮಲ್ಲಿಕಾಜರ್ುನ ದೇವರಮನಿ, ಎಸ್.ಎಸ್.ಝಳಕಿ, ಸುರೇಶ ಚಿಂಚೋಳಿ ಮಾತನಾಡಿದರು, ಶಂಕ್ರೆಪ್ಪ ಹಾರಿವಾಳ, ಕಾಶೀನಾಥ ಹಿಂಗೋಲಿ, ಬಸಗೊಂಡ ಪಾಟೀಲ, ಪರುತಪ್ಪ ಕುಂಬಾರ, ಬಾಬು ಕೆಂಭಾವಿ, ಸುರೇಶ ಲಮಾಣಿ, ಅಣ್ಣು ಕುಂಬಾರ, ಆರ್.ಜಿ.ಅಳ್ಳಗಿ, ಮಹಾದೇವಿ ಮೈಲೇಶ್ವರ, ಗಂಗೂಬಾಯಿ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಸದಸ್ಯರು ಪಾಲ್ಗೊಂಡಿದ್ದರು.