ಮನೆ ಮನೆಗೆ ಗಂಗೆ ಯೋಜನೆ ಕಾಮಗಾರಿಗೆ ಚಾಲನೆ
ತಾಳಿಕೋಟಿ 12: ತಾಲೂಕಿನ ಕಲಕೇರಿ ಗ್ರಾಮದಲ್ಲಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿಯ ಯೋಜನೆ ಮನೆ ಮನೆಗೆ ಗಂಗೆ ಶುದ್ಧ ಕುಡಿಯುವ ನೀರಿನ ಪೂರೈಸುವ ಜಲಧಾರೆ ಯೋಜನೆ ಅಡಿಯಲ್ಲಿ ಸುಮಾರು 2 ಲಕ್ಷ ಲೀಟರ್ ಸಾಮರ್ಥ್ಯವುಳ್ಳ ನೀರಿನ ಟ್ಯಾಂಕ್ ನಿರ್ಮಾಣ ಕಾಮಗಾರಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರು ಭೂಮಿ ಪೂಜೆ ನೆರವೇರಿಸಿ ಇತ್ತೀಚಿಗೆ ಚಾಲನೆ ನೀಡಿದರು.
ಗ್ರಾಮ ಪಂಚಾಯತಿ ಅಧ್ಯಕ್ಷ ರಾಜ ಅಹ್ಮದ್ ಸಿರಸಗಿ, ಉಪಾಧ್ಯಕ್ಷೆ ವಿಜಯಲಕ್ಷ್ಮಿ ಪರಶುರಾಮ ಬೇಡರ, ಗ್ರಾಮ ಪಂಚಾಯಿತಿ ಸದಸ್ಯರಾದ ಅನೀಲ ಬಡಿಗೇರ, ಸುಧಾಕರ ಅಡಿಕಿ ಇವರು ಈ ಸಂದರ್ಭದಲ್ಲಿ ಮಾತನಾಡಿ ಕಲಕೇರಿ ಗ್ರಾಮದಲ್ಲಿ ಪ್ರತಿಯೊಂದು ವಾರ್ಡಗಳಿಗೆ ಪೈಪ್ ಲೈನ್ ಮುಖಾಂತರ ನೀರು ಬರುವುದು ಮತ್ತು ಕುದುರ ಗೊಂಡ ಕೆರೆಯ ಭಾವಿಯಿಂದ ಇನ್ನೆರಡು ದಿನಗಳಲ್ಲಿ ಕಲಕೇರಿ ಗ್ರಾಮಕ್ಕೆ ನೀರು ಬರುವುದು ಎಂದು ತಿಳಿಸಿದರು. ಈ ಸಮಯದಲ್ಲಿ
ಭೀಮಣ್ಣ ವಡ್ಡರ, ಹಾಜಿ ಪಾಷಾ ಜಾಗೀರದಾರ, ಚಾಂದ್ ಪಾಷಾ ಹವಾಲ್ದಾರ, ದೇವೇಂದ್ರ ಬಡಿಗೇರ, ಕುತುಬುದ್ದೀನ ಹೊಸಮನಿ, ಮಲ್ಕಪ್ಪ ಭಜಂತ್ರಿ, ಹುಸೇನ ನಾಯ್ಕೋಡಿ, ಇರಗಂಟಿ ಬಡಿಗೇರ, ನಬಿಲಾಲ್ ನಾಯ್ಕೋಡಿ, ಗ್ರಾಮ ಪಂಚಾಯಿತಿಯ ಸರ್ವ ಸದಸ್ಯರು ಇದ್ದರು.