ತಂಬಾಕು ಮುಕ್ತ ನಗರ ಸಂಕಲ್ಪಕ್ಕೆ ಪಿಎಐ ಮಧು ಎಲ್ ಸಲಹೆ

PAI Madhu L advice for tobacco free city resolution

ಮಹಾಲಿಂಗಪುರ 13: ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಶಿಕ್ಷಣ ಇಲಾಖೆ ಆದೇಶದಂತೆ ಸ್ವಾಮಿ ವಿವೇಕಾನಂದರ ಜಯಂತಿ ಅಂಗವಾಗಿ ಸೋಮವಾರ ನಗರದ ಸರ್ಕಾರಿ ಪ್ರೌಢ ಶಾಲೆಯ ವತಿಯಿಂದ ಹಮ್ಮಿಕೊಂಡ ತಂಬಾಕು ಮುಕ್ತ ಕಾರ್ಯಕ್ರಮ ಅಂಗವಾಗಿ ಮಾತನಾಡಿದ ಪಿಎಐ "ಮಧು ಎಲ್"ಅವರು ನಗರದಲ್ಲಿ ಹಾಗೂ ಎಲ್ಲಾ ಶಾಲಾ ಕಾಲೇಜುಗಳ ಅವರಣದಲ್ಲಿ ತಂಬಾಕು ಮುಕ್ತ ಮಾಡಲು ಸಂಕಲ್ಪ ಮಾಡಬೇಕಿದೆ ಎಂದು "ಸಲಹೆ" ನೀಡಿದರು.  

ತಂಬಾಕು ಮತ್ತು ತಂಬಾಕಿನ ಉತ್ಪನ್ನಗಳ ಬಳಕೆಯಿಂದ ಕ್ಯಾನ್ಸರ್ ಕಾರಕ ಕಾಯಿಲೆಗಳು ಹೆಚ್ಚುತ್ತವೆ. ಕುಟುಂಬಗಳ ಮುಖ್ಯಸ್ಥರು ಜೀವ ಕಳೆದುಕೊಳ್ಳುತ್ತಿದ್ದಾರೆ ಇದರಿಂದ ಅವಲಂಬಿತರ ಬದುಕು ದಯನೀಯವಾಗಲಿದೆ.ತಂಬಾಕು ನಿಯಂತ್ರದ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು ಬಹಳ ಅಗತ್ಯ ಎಂದರು. 

ಮುಖ್ಯ ಶಿಕ್ಷಕ ಧನಂಜಯ ಕುಲಕರ್ಣಿ ಮಾತನಾಡಿ, ಕ್ಯಾನ್ಸರ್, ಹೃದಯದ ಸಂಬಂಧಿಸಿದ ಕಾಯಿಲೆಗಳಿಗೆ,ಶ್ವಾಸಕೋಶದ ಕಾಯಿಲೆಗಳಿಗೆ ತಂಬಾಕು ಸೇವನೆ ಪ್ರಮುಖ ಕಾರಣ.ಬೀಡಿ, ಸಿಗರೇಟು ಧೂಮಸಹಿತ ತಂಬಾಕು ಉತ್ಪನ್ನಗಳಲ್ಲಿ 7, 000ಕ್ಕೂ ಹೆಚ್ಚು ರಾಸಾಯನಿಕಗಳಿವೆ. ಅದರಲ್ಲಿನ 69ಅರಷ್ಟು ಕ್ಯಾನ್ಸರ್ ಕಾರಕ ವಸ್ತುಗಳಾಗಿವೆ ಎಂದು ಹೇಳಿದರು.  

ಸ್ವಾಮಿ ವಿವೇಕಾನಂದ ಜಯಂತಿಯ ಪ್ರಯುಕ್ತ ಯುವ ದಿನಾಚರಣೆಯನ್ನು ಗುಲಾಬಿ ದಿನಾಚರಣೆಯನ್ನಾಗಿ ಆಚರಣೆ ಮಾಡಿದರು.ಶಾಲೆಯ ನೂರು ಗಜ ಅಂತರದಲ್ಲಿರುವ ಅಂಗಡಿಗಳಿಗೆ ಗುಲಾಬಿ ಹೂ ನೀಡಿ ತಂಬಾಕು ಉತ್ಪನ್ನಗಳ ಮಾರಾಟ ಮಾಡದಂತೆ ಮಕ್ಕಳೊಂದಿಗೆ ವಿನಂತಿಸಿಕೊಂಡರು.ಮತ್ತು ಜಾಗೃತಿ ಜಾಥಾವನ್ನು ನಗರದ ಚೆನ್ನಮ್ಮ ವೃತ್ತದ ಮೂಲಕ ಬಸ್ ನಿಲ್ದಾಣದಲ್ಲಿರುವ ಎಲ್ಲಾ ಅಂಗಡಿಗಳಿಗೆ ತಂಬಾಕು ಉತ್ಪನ್ನಗಳ ಮಾರಾಟ ಮಾಡದಂತೆ ಗುಲಾಬಿ ಹೂ ನೀಡಿ ವಿನಂತಿಸಿಕೊಂಡರು.ಈ ಸಂದರ್ಭದಲ್ಲಿ ಪಿಎಐ ಮಧು ಎಲ್, ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷ ಸಂಜಯ ರಾಥೋಡ,ಮುಖ್ಯ ಶಿಕ್ಷಕ ಧನಂಜಯ ಕುಲಕರ್ಣಿ, ಶಿಕ್ಷಕರುಗಳಾದ ಎನ್ ಬಿ ಬೆಟಿಗೇರಿ, ಆರ್ ಸಿ ಜಿಲಿಗಿಡ, ಆರ್ ಎಸ್ ಬೀಳಗಿ, ಪಿ ಎ ಖಾನವೀಲಕರ,ಜಿ ಎಂ ಅಂಗಡಿ, ಎಂ ಜಿ ಅಲ್ಲಾಖಾನ, ಸದಾಶಿವ ಕಂಬಾರ, ಪಿಸಿ ಫಕಿರಣ್ಣವರ, ಎಂ ಎಸ್ ಮಲಾಬಾದಿ, ಆರ್ ಎಂ ಕಂಬಾರ, ವಿ ಸಿ ಗುಡ್ಲಮನಿ, ಆರ್ ವಾಯ್ ಕರಿಗಾರ, ಜೆ ಎಂ ಕಾಪಸೆ, ಎಸ್ ಎ ಬಡಿಗೇರ, ಆರ್ ಎಸ್ ಲಮಾಣಿ, ಪೋಲಿಸ್ ಸಿಬ್ಬಂದಿ ಬಸವರಾಜ ದೇಸಾಯಿ ಮಲ್ಲೇಶ ಪವಾರ ಸೇರಿದಂತೆ ನೂರಾರು ಮಕ್ಕಳು ಈ ಜಾಥಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.