ಟರ್ಕಿಯಲ್ಲಿ 870 ಕ್ಕೂ ಹೆಚ್ಚು ಹೊಸ ಕೊಒರನಾ ಸೋಂಕು ಪ್ರಕರಣ; ಒಟ್ಟು 1.7 ಲಕ್ಷದತ್ತ ಸೋಂಕಿತರ ಸಂಖ್ಯೆ

ಅಂಕಾರಾ, ಜೂನ್ 7,ಟರ್ಕಿಯಲ್ಲಿ ಮತ್ತೆ 870 ಕೊರೊನಾ ವೈರಾಣು ಸೋಂಕು ಪ್ರಕರಣಗಳು ವರದಿಯಾಗಿದ್ದು ಕಳೆದ 24 ಗಂಟೆಗಳಲ್ಲಿ 20 ಕ್ಕೂ ಹೆಚ್ಚು ಜನರು ಸೋಂಕಿಗೆ ಬಲಿಯಾಗಿದ್ದಾರೆ ಎಂದು ಟರ್ಕಿ ಆರೋಗ್ಯ ಸಚಿವ ಫಹ್ರೆಟ್ಟಿನ್ ಕೋಕಾ ಹೇಳಿದ್ದಾರೆ.ಟರ್ಕಿಯಲ್ಲಿ ಒಟ್ಟು 1,69,218 ಕೊರೊನಾ ವೈರಾಣು ಸೋಂಕಿನ ಪ್ರಕರಣಗಳು ದೃಢಪಟ್ಟಿದ್ದು ಒಟ್ಟು ಮೃತರ ಸಂಖ್ಯೆ 4,669 ರಷ್ಟಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ. ಶನಿವಾರದಂದು 878 ಹೊಸ ಸೋಂಕಿನ ಪ್ರಕರಣಗಳು 21 ಸಾವಿನ ಪ್ರಕರಣಗಳು ವರದಿಯಾಗಿದೆ ಎಂದು ಅವರು ಅಂಕಿಅಂಶ ನೀಡಿದ್ದಾರೆ.ಶನಿವಾರದಂದು 1922 ಜನರು ಚೇತರಿಸಿಕೊಂಡು ಮನೆಗೆ ವಾಪಸ್ಸಾಗಿದ್ದು ಒಟ್ಟು 1,35,300 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ ಎಂದು ಆರೋಗ್ಯ ಸಚಿವರು ತಿಳಿಸಿದ್ದಾರೆ.ಈ ವಾರದ ಆರಂಭದಲ್ಲಿ ಟರ್ಕಿ ಸಾರಿಗೆ ಸಚಿವರು 40 ದೇಶಗಳಿಗೆ ವಿಮಾನಯಾನ ಪುನರಾರಂಭಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಹೇಳಿದ್ದಾರೆ ಎರಡು ವಾರಗಳ ಹಿಂದೆ ಟರ್ಕಿಯಲ್ಲಿ 1,56,000 ಪ್ರಕರಣಗಳು ವರದಿಯಾಗಿದ್ದು ಮೃತರ ಸಂಖ್ಯೆ 4300 ರಷ್ಟಿತ್ತು.