ಅಮೆರಿಕದಲ್ಲಿ 2 ಕೋಟಿಗೂ ಹೆಚ್ಚು ಕರೋನ ಸೋಂಕು ಪ್ರಕರಣಗಳು!

ವಾಷಿಂಗ್ಟನ್, ಜೂನ್ 26: ಜಾಗತಿಕವಾಗಿ ಅತಿ ಹೆಚ್ಚಿನ ಕರೊನ ಸೋಂಕು  ಪ್ರಕರಣಗಳನ್ನುಹೊಂದಿರುವ ಅಮೆರಿಕದಲ್ಲಿ ಕರೋನ  ಪ್ರಕರಣಗಳ ಸಂಖ್ಯೆ ವರದಿಗಿಂತ ಹತ್ತು ಪಟ್ಟು ಹೆಚ್ಚಾಗಲಿದೆ  ಎಂದು ಅಂದಾಜಿಸಲಾಗಿದೆ   ಎಂದು ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಸಿಡಿಸಿ) ನಿರ್ದೇಶಕ ರಾಬರ್ಟ್ ರೆಡ್ಫೀಲ್ಡ್ ಶುಕ್ರವಾರ ತಿಳಿಸಿದ್ದಾರೆ ನಮ್ಮ  ಅಂದಾಜಿನ ಪ್ರಕಾರ , ವರದಿಯಾದ ಪ್ರತಿಯೊಂದು ಪ್ರಕರಣಕ್ಕೂ ಹತ್ತು ಇತರ ಸೋಂಕುಗಳು ಸಂಭವಿಸಿವೆ" ಎಂದು ರೆಡ್‌ಫೀಲ್ಡ್ ಸುದ್ದಿಗಾರರಿಗೆ ಹೇಳಿದರು. ಇದರಿಂದ  ಅಮೆರಿಕದಲ್ಲಿ ಸೋಂಕಿತರ  ಸಂಖ್ಯೆ ಸುಮಾರು 24 ಮಿಲಿಯನ್ ಗೆ ಏರಿಕೆಯಾಗಲಿದ್ದು ( ಎರಡು ಕೋಟಿ , 25 ಲಕ್ಷ)   ಇದು  ದೇಶದ ಜನಸಂಖ್ಯೆಯ ಸರಿ ಸುಮಾರುಶೇಕಡ  8 ಪ್ರತಿಶತದಷ್ಟುಆಗಲಿದೆ ಎಂದರು. ಬುಧವಾರ ದೇಶದಲ್ಲಿ  ಒಂದೇ  ದಿನ 36,ಸಾವಿರಕ್ಕೂ  ಹೆಚ್ಚು ಹೊಸ  ಪ್ರಕರಣಗಳು ವರದಿಯಾಗಿದ್ದು,  ಒಂದೇ ದಿನದಲ್ಲಿನ  ಅತಿದೊಡ್ಡ ಹೆಚ್ಚಳವಾಗಿದೆ.