ಲೋಕದರ್ಶನ ವರದಿ
ಶಿರಹಟ್ಟಿ: ದಿನದಿನದಿಂದ ದಿನಕ್ಕೆ ಕೋರೋನ ಹಾವಳಿ ಉಲ್ಬಣಗೊಳ್ಳುತ್ತಿದ್ದು ಇದರಿಂದ ಲಾಕ್ಡೌನ್ ಆದ ಪರಿಣಾಮ ಪಟ್ಟಣದಲ್ಲಿ ನೂರಾರು ಜನ ಹಸಿವೆಯಿಂದ ಬಳಲುತ್ತಿದ್ದು ಅಂಥಹ ಜನರ ಹಸಿವೆಯನ್ನು ನೀಗುವುದಕ್ಕೋಸ್ಕರ ತಾಲೂಕಾ ಬಣಜಿಗ ಸಮಾಜವು ಸದಾ ತಯಾರಿದೆ ಎಂದು ಶಿರಹಟ್ಟಿ ತಾಲೂಕಾ ಬಣಜಿಗ ಸಮಾಜದ ಅಧ್ಯಕ್ಷ ಮುತ್ತಣ್ಣಮಜ್ಜಗಿ ಅಭಿಪ್ರಾಯ ಪಟ್ಟರು.
ಕೊರೊನಾ ಮಹಾಮಾರಿಯನ್ನು ನಿಯಂತ್ರಿಸುವ ಉದ್ದೇಶದಿಂದ ದೇಶದ ಜನತೆಯ ಹಿತದೃಷ್ಟಿಯಿಂದ ದೇಶಾದ್ಯಂತ ಜಾರಿಯಲ್ಲಿರುವ ಲಾಕ್ಡೌನ್ ಕಪ್ಯರ್ೂದಿಂದಾಗಿ ಪಟ್ಟಣದ ವಿವಿಧ ಭಾಗಗಳಲ್ಲಿ ವಾಸಿಸುತ್ತಿರುವ ನಿರ್ಗತಿಕರು, ಬಡವರಿಗೆ ಹಾಗೂ ಭಿಕ್ಷುಕರಿಗೆ ಒಂದು ತುತ್ತು ಅನ್ನಕ್ಕೂ ಪರದಾಡುವಂತಹದ್ದನ್ನು ಕಂಡು ನಮ್ಮ ಸಮಾಜದ ವತಿಯಿಂದ ಇಂದು ಆಹಾರ ಪದಾರ್ಥಗಳನ್ನು ವಿತರಿಸುವ ಕಾರ್ಯ ಮಾಡಿದೆವು ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಸಣ್ಣ ಬೋರಶೆಟ್ಟರ, ಪ್ರಕಾಶ ಬೋರಶೆಟ್ಟರ, ಮುರುಗೇಶ ಆಲೂರ, ಶಿವಯೋಗಿ ಪಟ್ಟಣಶೆಟ್ಟಿ, ಮಂಜು ರಿತ್ತಿ, ಚಂದ್ರು ಕರ್ಜಗಿ, ಸಂತೋಷ ಬೋರಶೆಟ್ಟರ ಇನ್ನೂ ಅನೇಕರು ಉಪಸ್ಥಿರಿದ್ದರು.